ಎಚ್‌ಟಿಸಿ ಯಿಂದ One M8 ಡಿವೈಸ್ ಅತ್ಯಾಕರ್ಷಕ ಬಣ್ಣಗಳಲ್ಲಿ
ನಿರೀಕ್ಷಿಸಿದಂತೆ, ತೈವಾನ್ ಮೂಲದ ಸ್ಮಾರ್ಟ್‌ಪೋನ ತಯಾರಿಕಾ ಕಂಪೆನಿ ಎಚ್‌ಟಿಸಿ ಹೊಸ ವೈವಿಧ್ಯ ಬಣ್ಣಗಳಲ್ಲಿ ತನ್ನ ಅತ್ಯಾಧುನಿಕ One M8 ಡಿವೈಸ್ ಅನ್ನು ಹೊರಗೆ ತಂದಿದೆ.
ಗನ್ ಮೆಟಲ್ ಗ್ರೇ ಬಣ್ಣದಲ್ಲಿ ಬಿಡುಗಡೆಗೊಂಡ ಈ ಸ್ಮಾರ್ಟ್‌ಫೋನ್, ಸಿಲ್ವರ್ ಮತ್ತು ಚಿನ್ನದ ಬಣ್ಣಗಳಲ್ಲಿದ್ದು, ಎಚ್‌ಟಿಸಿ One M8 ಯನ್ನು ಗುಲಾಬಿ ಬಣ್ಣದಲ್ಲಿ ಯುಕೆನಲ್ಲಿ ಲಾಂಚ್ ಮಾಡಲಾಗಿದೆ . ಅದೇ ರೀತಿ ಕೆಂಪು ಮತ್ತು ನೀಲಿ ಬಣ್ಣದ ಫೋನ್‌ಗಳನ್ನು ದೇಶದಲ್ಲಿ ಪೂರ್ವ ಯೋಜಿತವಾಗಿ ಕಾಯ್ದಿರಿಸಲಾಗಿದೆ. ಈ ಫೋನ್‌ಗಳಿಗೆ ಅದೇ ವಿಶಿಷ್ಟತೆಗಳನ್ನು ಬಳಸಲಾಗಿದಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.

ಇನ್ನು ಲಭ್ಯತೆಯ ಬಗೆಗೆ ಮಾತನಾಡಿದಾಗ, ಯುಕೆನಲ್ಲಿರುವ ಎಚ್‌ಟಿಸಿ ಅಭಿಮಾನಿಗಳಿಗೆ ಕೆಂಪು ಎಚ್‌ಟಿಸಿ One M8 ಆಗಸ್ಟ್ 5 ರಿಂದ ಪೂರ್ವಕಾಯ್ದಿರಿಸಬಹುದಾಗಿದ್ದು ಇದು ಆಗಸ್ಟ್ 7 ರಿಂದ ಲಭ್ಯವಾಗಲಿದೆ.
ನಮ್ಮ ಗ್ರಾಹಕರು ಬಯಸುವಂತಹ ಬಣ್ಣಗಳಲ್ಲಿ ವಿಶಿಷ್ಟವಾಗಿ ನಾವು One M8 ಯನ್ನು ಲಾಂಚ್ ಮಾಡಿದ್ದು ನಮ್ಮ ಗ್ರಾಹಕರಿಗೆ ಇದು ಖಂಡಿತ ಇಷ್ಟವಾಗಲಿದೆ. ಈ ಬಣ್ಣಗಳು ಅತ್ಯಾಕರ್ಷವಾಗಿದ್ದು ಬಳಕೆದಾರರಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.
ಎಚ್‌ಟಿಸಿ ಪ್ರಮುಖ ವೈಶಿಷ್ಟ್ಯಗಳು
ಎಚ್‌ಟಿಸಿ One M8 5 ಇಂಚಿನ ಪೂರ್ಣ HD ಡಿಸ್‌ಪ್ಲೇಯೊಂದಿಗೆ ಬಂದಿದ್ದು, 4.4.2 ಕಿಟ್‌ಕ್ಯಾಟ್ ಓಎಸ್ ಇದರಲ್ಲಿದೆ. HTC ಸೆನ್ಸ್ 6.0 UI, ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್, 2GB RAM, 16/32GB ಆಂತರಿಕ ಮೆಮೊರಿ, ಮೈಕ್ರೋ ಎಸ್‌ಡಿ ಸ್ಲಾಟ್, ಎಲ್‌ಇಡಿ ರಿಯರ್ ಕ್ಯಾಮೆರಾ ಜೊತೆಗೆ ಡ್ಯುಯಲ್ ಫ್ಲ್ಯಾಶ್, 5 MP ಫ್ರಂಟ್ ಕ್ಯಾಮೆರಾ ಮತ್ತು ತೆಗೆಯಲಾಗದೇ ಇರುವ 2,600 mAh ಬ್ಯಾಟರಿ ಡಿವೈಸ್‌ನಲ್ಲಿದೆ.
ಭಾರತ ಮತ್ತು ಇತರ ಮಾರುಕಟ್ಟೆಗಳಲ್ಲಿ ಲಭ್ಯವಾಗುವ One M8 ನ ಹೊಸ ಬಣ್ಣವನ್ನು ಎಚ್‌ಟಿಸಿ ಇನ್ನೂ ದೃಢಪಡಿಸಿಲ್ಲ.


Click it and Unblock the Notifications








