Subscribe to Gizbot

ಆನ್‌ಲೈನ್‌ಲ್ಲಿ ಎಚ್‌ಟಿಸಿ ಹೊಸ ಸ್ಮಾರ್ಟ್‌‌‌ಫೋನ್‌ ಖರೀದಿಸಿ

Written By:

ಎಚ್‌ಟಿಸಿ ಕಂಪೆನಿಯ ದುಬಾರಿಯ ಬೆಲೆಯ ಸ್ಮಾರ್ಟ್‌‌ಫೋನ್‌ ಭಾರತದ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆಯಾಗಿದ್ದು ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ಲಭ್ಯವಿದೆ. ಸದ್ಯದ ಮಾರುಕಟ್ಟೆಯಲ್ಲಿ ದೊಡ್ಡ ಸ್ಕ್ರೀನ್‌ ಹೊಂದಿರುವ ಫ್ಯಾಬ್ಲೆಟ್‌ಗಳನ್ನು ಕಂಪೆನಿಗಳು ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಎಚ್‌ಟಿಸಿ 5.9 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌ ಹೊಂದಿರುವ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ. ಆದರೆ ಈ ಫ್ಯಾಬ್ಲೆಟ್‌ ದೊಡ್ಡದೇನಲ್ಲ. ಈಗಾಗಲೇ ಸೋನಿ ಎಕ್ಸ್‌ಪೀರಿಯಾ ಝಡ್‌ ಆಲ್ಟ್ರಾ 6.4 ಇಂಚು, ಹುವಾವೇ ಅಸೆಂಡ್ ಮೇಟ್‌2 6.1 ಇಂಚಿನ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ.

ಐಫೋನ್‌ 5 ಎಸ್‌ನಲ್ಲಿ ಮುಂದುಗಡೆ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಇದ್ದರೆ ಎಚ್‌ಟಿಸಿ ಈ ಫ್ಯಾಬ್ಲೆಟ್‌ಗೆ ಹಿಂದುಗಡೆ ಫಿಂಗರ್‍ ಪ್ರಿಂಟ್‌ ಸ್ಕ್ಯಾನರ್‌ನ್ನು ನೀಡಿದೆ. ಫ್ಯಾಬ್ಲೆಟ್‌‌ ಶಕ್ತಿಶಾಲಿ 3300 mAh ಬ್ಯಾಟರಿಯನ್ನು ಹೊಂದಿದೆ. ಸ್ಯಾಮ್‌ಸಂಗ್‌ ತನ್ನ ಹೊಸ ಫ್ಯಾಬ್ಲೆಟ್‌ ಗೆಲಾಕ್ಸಿ ನೋಟ್‌3ಗೆ 3200 mAh ಬ್ಯಾಟರಿಯನ್ನು ನೀಡಿತ್ತು. ಈ ಫ್ಯಾಬ್ಲೆಟ್‌‌ 64.5x82.5x10.29 ಮಿ.ಮೀಟರ್‌ ಗಾತ್ರ,217 ಗ್ರಾಂ ತೂಕವನ್ನು ಹೊಂದಿದೆ.

ಗೈರೋ ಸೆನ್ಸರ್‌,ಎಕ್ಸಲರೋಮೀಟರ್‌,ಪ್ರಾಕ್ಸಿಮಿಟಿ ಸೆನ್ಸರ್‌,ಲೈಟ್‌ ಸೆನ್ಸರ್‌,ಫಿಂಗರ್‌ ಪ್ರಿಂಟ್‌ ಸೆನ್ಸರ್‌ನ್ನು ಫ್ಯಾಬ್ಲೆಟ್‌ ಹೊಂದಿದೆ.ಫ್ಯಾಬ್ಲೆಟ್‌ ಖರೀದಿಸಿದ ಗ್ರಾಹಕರಿಗೆ ಎಚ್‌ಟಿಸಿ ಆಫರ್‌ ನೀಡಿದ್ದು ಗೂಗಲ್‌ ಡ್ರೈವ್‌ನಲ್ಲಿ 65GB ಡೇಟಾವನ್ನು ಎರಡು ವರ್ಷ‌ಗಳ ಕಾಲ ಉಚಿತವಾಗಿ ಸಂಗ್ರಹಿಸಬಹುದು ಎಂದು ಹೇಳಿದೆ.

ಎಚ್‌ಟಿಸಿ ಒನ್‌ ಮ್ಯಾಕ್ಸ್‌
ವಿಶೇಷತೆ:
ಸಿಂಗಲ್‌ ಸಿಮ್‌
5.9 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1080 x 1920 ಪಿಕ್ಸೆ‌ಲ್‌)
ಆಂಡ್ರಾಯ್ಡ್‌ ಎಚ್‌ಟಿಸಿ ಸೆನ್ಸ್‌ 4.3 ಜೆಲ್ಲಿ ಬೀನ್‌ ಓಎಸ್‌
1.7GHz ಕ್ವಾಡ್‌ ಕೋರ್‌ ಪ್ರೊಸೆಸರ್‌
16/32GB ಆಂತರಿಕ ಮೆಮೋರಿ
2GB ರ್‍ಯಾಮ್
4 ಎಂಪಿ ಎಚ್‌ಟಿಸಿ ಆಲ್ಟ್ರಾ ಪಿಕ್ಸೆಲ್‌ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3300 mAh ಬ್ಯಾಟರಿ
3ಜಿ,ವೈಫೈ,ಜಿಪಿಎಸ್‌,ಎ-ಜಿಪಿಎಸ್‌,ಗ್ಲೋನಾಸ್‌‌,ಬ್ಲೂಟೂತ್‌,ಎನ್‌ಎಫ್‌ಸಿ

ಎಚ್‌ಟಿಸಿ ಹೊಸ ಸ್ಮಾರ್ಟ್‌ಫೋನ್‌ ಆನ್‌ಲೈನ್‌ ಶಾಪಿಂಗ್ ತಾಣದಲ್ಲಿ ಲಭ್ಯವಿದ್ದು ಇದನ್ನು ಖರೀದಿಸಲು ಗಿಝ್‌ಬಾಟ್‌ ಇಂದು  ಆನ್‌ಲೈನ್‌ ಶಾಪಿಂಗ್‌ ತಾಣಗಳ ಮಾಹಿತಿಯನ್ನು ತಂದಿದೆ. ಎಲ್ಲಾ ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ಒಂದೇ ರೀತಿಯ ದರ ನಿಗದಿಯಾಗಿರುವುದಿಲ್ಲ. ಹೀಗಾಗಿ ಒಂದೊಂದೆ ಪುಟವನ್ನು ತಿರುಗಿಸಿ ಬೆಲೆ ನೋಡಿಕೊಂಡು ಹೋಗಿ.ನಂತರ ಇಷ್ಟವಾದ ತಾಣದಲ್ಲಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿ.


ಎಚ್‌ಟಿಸಿ ಒನ್‌ ಮ್ಯಾಕ್ಸ್‌ ಸ್ಮಾರ್ಟ್‌‌ಫೋನಿನ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot