ಆನ್‌ಲೈನ್‌ಲ್ಲಿ ಎಚ್‌ಟಿಸಿ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಸ್ಮಾರ್ಟ್‌ಫೋನ್‌ ಲಭ್ಯ

By Ashwath
|

ಎಚ್‌ಟಿಸಿ ಕಂಪೆನಿಯ ಫಿಂಗರ್‌ ಪ್ರಿಂಟ್‌ ಸೆನ್ಸರ್‌ ಹೊಂದಿರುವ ಎಚ್‌ಟಿಸಿ ಒನ್‌ ಮ್ಯಾಕ್ಸ್‌ ಈಗ ಆನ್‌ಲೈನ್‌ಲ್ಲಿ ಲಭ್ಯವಿದೆ. ಆನ್‌ಲೈನ್‌ ಶಾಪಿಂಗ್‌ ತಾಣ themobilestore.in 16GB ಆಂತರಿಕ ಮೆಮೊರಿ ಹೊಂದಿರುವ ಫ್ಯಾಬ್ಲೆಟ್‌ 53,909 ಬೆಲೆಯಲ್ಲಿ ಲಭ್ಯವಿದ್ದು ಗ್ರಾಹಕರು ಖರೀದಿಸಬಹುದು.

ಸದ್ಯದ ಮಾರುಕಟ್ಟೆಯಲ್ಲಿ ದೊಡ್ಡ ಸ್ಕ್ರೀನ್‌ ಹೊಂದಿರುವ ಫ್ಯಾಬ್ಲೆಟ್‌ಗಳನ್ನು ಕಂಪೆನಿಗಳು ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಎಚ್‌ಟಿಸಿ 5.9 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌ ಹೊಂದಿರುವ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ. ಆದರೆ ಈ ಫ್ಯಾಬ್ಲೆಟ್‌ ದೊಡ್ಡದೇನಲ್ಲ. ಈಗಾಗಲೇ ಸೋನಿ ಎಕ್ಸ್‌ಪೀರಿಯಾ ಝಡ್‌ ಆಲ್ಟ್ರಾ 6.4 ಇಂಚು, ಹುವಾವೇ ಅಸೆಂಡ್ ಮೇಟ್‌2 6.1 ಇಂಚಿನ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ.

ಐಫೋನ್‌ 5 ಎಸ್‌ನಲ್ಲಿ ಮುಂದುಗಡೆ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಇದ್ದರೆ ಎಚ್‌ಟಿಸಿ ಈ ಫ್ಯಾಬ್ಲೆಟ್‌ಗೆ ಹಿಂದುಗಡೆ ಫಿಂಗರ್‍ ಪ್ರಿಂಟ್‌ ಸ್ಕ್ಯಾನರ್‌ನ್ನು ನೀಡಿದೆ. ಫ್ಯಾಬ್ಲೆಟ್‌‌ ಶಕ್ತಿಶಾಲಿ 3300 mAh ಬ್ಯಾಟರಿಯನ್ನು ಹೊಂದಿದೆ. ಸ್ಯಾಮ್‌ಸಂಗ್‌ ತನ್ನ ಹೊಸ ಫ್ಯಾಬ್ಲೆಟ್‌ ಗೆಲಾಕ್ಸಿ ನೋಟ್‌3ಗೆ 3200 mAh ಬ್ಯಾಟರಿಯನ್ನು ನೀಡಿತ್ತು. ಈ ಫ್ಯಾಬ್ಲೆಟ್‌‌ 64.5x82.5x10.29 ಮಿ.ಮೀಟರ್‌ ಗಾತ್ರ,217 ಗ್ರಾಂ ತೂಕವನ್ನು ಹೊಂದಿದೆ.

ಗೈರೋ ಸೆನ್ಸರ್‌,ಎಕ್ಸಲರೋಮೀಟರ್‌,ಪ್ರಾಕ್ಸಿಮಿಟಿ ಸೆನ್ಸರ್‌,ಲೈಟ್‌ ಸೆನ್ಸರ್‌,ಫಿಂಗರ್‌ ಪ್ರಿಂಟ್‌ ಸೆನ್ಸರ್‌ನ್ನು ಫ್ಯಾಬ್ಲೆಟ್‌ ಹೊಂದಿದೆ.ಫ್ಯಾಬ್ಲೆಟ್‌ ಖರೀದಿಸಿದ ಗ್ರಾಹಕರಿಗೆ ಎಚ್‌ಟಿಸಿ ಆಫರ್‌ ನೀಡಿದ್ದು ಗೂಗಲ್‌ ಡ್ರೈವ್‌ನಲ್ಲಿ 65GB ಡೇಟಾವನ್ನು ಎರಡು ವರ್ಷ‌ಗಳ ಕಾಲ ಉಚಿತವಾಗಿ ಸಂಗ್ರಹಿಸಬಹುದು ಎಂದು ಹೇಳಿದೆ.

ಎಚ್‌ಟಿಸಿ ಒನ್‌ ಮ್ಯಾಕ್ಸ್‌
ವಿಶೇಷತೆ:
ಸಿಂಗಲ್‌ ಸಿಮ್‌
5.9 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1080 x 1920 ಪಿಕ್ಸೆ‌ಲ್‌)
ಆಂಡ್ರಾಯ್ಡ್‌ ಎಚ್‌ಟಿಸಿ ಸೆನ್ಸ್‌ 4.3 ಜೆಲ್ಲಿ ಬೀನ್‌ ಓಎಸ್‌
1.7GHz ಕ್ವಾಡ್‌ ಕೋರ್‌ ಪ್ರೊಸೆಸರ್‌
16/32GB ಆಂತರಿಕ ಮೆಮೋರಿ
2GB ರ್‍ಯಾಮ್
4 ಎಂಪಿ ಎಚ್‌ಟಿಸಿ ಆಲ್ಟ್ರಾ ಪಿಕ್ಸೆಲ್‌ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3300 mAh ಬ್ಯಾಟರಿ
3ಜಿ,ವೈಫೈ,ಜಿಪಿಎಸ್‌,ಎ-ಜಿಪಿಎಸ್‌,ಗ್ಲೋನಾಸ್‌‌,ಬ್ಲೂಟೂತ್‌,ಎನ್‌ಎಫ್‌ಸಿ

ಶಕ್ತಿಶಾಲಿ ಬ್ಯಾಟರಿ,ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌,ದೊಡ್ಡ ಗಾತ್ರ ಸ್ಕ್ರೀನ್‌ ಬಿಟ್ಟರೆ ಎಚ್‌ಟಿಸಿ ಒನ್‌ ಮತ್ತು ಎಚ್‌ಟಿಸಿ ಒನ್‌ ಮಿನಿಯಲ್ಲಿರುವ ವಿಶೇಷತೆಯನ್ನು ಈ ಫ್ಯಾಬ್ಲೆಟ್‌ ಹೊಂದಿದೆ.

ಎಚ್‌ಟಿಸಿ ಒನ್‌ ಮ್ಯಾಕ್ಸ್‌ ಸ್ಮಾರ್ಟ್‌ಫೋನಿನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:ಗ್ಯಾಲರಿ

#1


ವಿವಿಧ ಜಾಲತಾಣಗಳ ಮಾಹಿತಿಗಳು,ಅಪ್‌ಡೇಟ್‌ಗಳು ಎಲ್ಲಾ ಸ್ಮಾರ್ಟ್‌ಫೋನಲ್ಲಿ ಒಂದೇ ಪೇಜ್‌ ನೋಡಲು ಸಾಧ್ಯವಿಲ್ಲ. ಆದರೆ ಈ ಫೋನಲ್ಲಿ ಬ್ಲಿಂಕ್‌ ಫೀಡ್‌‌ ವಿಶೇಷತೆ ಇದ್ದು ಈ ಆಯ್ಕೆಯನ್ನು ಆರಿಸುವ ಮೂಲಕ ನೀವು ಜಾಲತಾಣಗಳ ಅಪ್‌ಡೇಟ್‌ಗಳನ್ನು ಸುಲಭವಾಗಿ ಒಂದೇ ಪೇಜ್‌ನಲ್ಲಿ ನೋಡಬಹುದು.

#2


ಎಚ್‌ಟಿಸಿ ಸ್ಮಾರ್ಟ್‌ಫೋನಲ್ಲಿ ರೆಕಾರ್ಡ್‌ ಆಗಿರುವ ವಿಡಿಯೋವನ್ನು ಕತ್ತರಿಸಿ ಸಣ್ಣ ಫೋಟೋ ವಿಡಿಯೋವನ್ನಾಗಿ ಮಾಡಬಹುದು.ಅಷ್ಟೇ ಅಲ್ಲದೇ ಈ ಮಿನಿ ವಿಡಿಯೋವನ್ನು ಕೂಡಲೇ ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಸಹ ಮಾಡಬಹುದು.

#3


ಇನ್ನೂ ಕ್ಲಿಕ್‌ ಮಾಡಿರುವ ಫೋಟೋದಲ್ಲಿ ಬೇಡವಾದ ಅಂಶಗಳಿದ್ದರೆ, ಆ ಭಾಗವನ್ನು ಸುಲಭವಾಗಿ ಆಬ್ಜೆಕ್ಟ್‌ ರಿಮೂವಲ್‌ನಲ್ಲಿ ಎಡಿಟ್‌ ಮಾಡಬಹುದು.

#4


ಒಂದು ಆಕ್ಷನ್‌ ದೃಶ್ಯದ ವಿಡಿಯೋವನ್ನು ಸ್ವಿಕ್ವೆನ್ಸ್‌ ಫೋಟೋಗಳಾಗಿ ಈ ಸ್ಮಾರ್ಟ್‌ಫೋನಲ್ಲಿ ಮಾಡಬಹುದು.

#5

ಗ್ರೂಪ್‌ ಶಾಟ್‌ ತೆಗೆಯುವಾಗ ಎಲ್ಲರೂ ಒಂದೇ ಸಮಯಕ್ಕೆ ನಗುವುದು ಕಷ್ಟ. ಹೀಗಾಗಿ ಒಂದೇ ಕ್ಷಿಕ್‌ನಲ್ಲಿ ಸುಂದರವಾದ ಫೋಟೋ ತೆಗೆಯುವುದು ಕಷ್ಟ. ಅದಕ್ಕಾಗಿ ಈ ಕ್ಯಾಮೆರಾದಲ್ಲಿ ಗ್ರೂಪ್‌ ಶಾಟ್‌ ತೆಗೆಯಲು ವಿಶೇಷವಾದ ಕ್ಯಾಮೆರಾ ಸೆಟ್ಟಿಂಗ್ಸ್‌ ಇದೆ. ಗ್ರೂಪ್‌ ಶಾಟ್‌ನಲ್ಲಿ ಸ್ವಲ್ಪ ವಿಡಿಯೋ ಮಾಡಿ ನಂತರ ಫೋಟೋದಲ್ಲಿರುವ ಪ್ರತಿಯೊಬ್ಬ ವ್ಯಕ್ತಿ ನಗುವ ದೃಶ್ಯವನ್ನು ಪ್ರತ್ಯೇಕವಾಗಿ ಎಡಿಟ್‌ ಮಾಡುವ ಮೂಲಕ ಸುಂದರ ಗ್ರೂಪ್‌ ಫೋಟೋವನ್ನು ತೆಗೆಯಬಹುದು.

#6


ಎಚ್‌ಟಿಸಿ ಒನ್‌ ಮ್ಯಾಕ್ಸ್‌ ಮೊದಲ ನೋಟ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X