Subscribe to Gizbot

ಸೆಕೆಂಡರಿ ಕ್ಯಾಮೆರಾ ಇಲ್ಲದ ಎಚ್‌ಟಿಸಿ ಒನ್ ಮಿನಿ 2 ಲಾಂಚಿಂಗ್

Written By:

ಎಚ್‌ಟಿಸಿ ಅಧಿಕೃತವಾಗಿ ತನ್ನ ಎಚ್‌ಟಿಸಿ ಒನ್ ಮಿನಿ 2 ಅನ್ನು ಲಾಂಚಿಂಗ್ ಮಾಡಿದೆ. ಇದು ಅತಿ ಉತ್ತಮವಾದ ವೈಶಿಷ್ಟ್ಯಗಳನ್ನು ಪಡೆದುಕೊಂಡು ಗ್ರಾಹಕರ ಮನಗೆಲ್ಲುವುದು ನಿಶ್ಚಿತವಾಗಿದೆ.

ಇದು 4.5 ಇಂಚಿನ ಸ್ಕ್ರೀನ್ ಅನ್ನು ಹೊಂದಿದ್ದು 5 ಎಂಪಿ ಅಲ್ಟ್ರಾ ಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಮೆಟಾಲಿಕ್ ಬಾಡಿಯನ್ನು ಹೊಂದಿರುವ ಈ ಫೋನ್ ಸೆನ್ಸ್ 6 ಯೂಸರ್ ಇಂಟರ್ಫೇಸ್ ಅನ್ನು ಒಳಗೊಂಡಿದೆ. ಹಾಗೂ ಒನ್‌ನಂತೆ ಇದು ಕೂಡ ಗನ್‌ಮೆಟಲ್ ಗ್ರೇ, ಗ್ಲಾಸಿಕಲ್ ಸಿಲ್ವರ್, ಅಂಬರ್ ಗೋಲ್ಡ್ ಬಣ್ಣಗಳಲ್ಲಿ ನಿಮ್ಮ ಕೈಗೆ ದೊರೆಯಲಿದೆ.

ಸೆಕೆಂಡರಿ ಕ್ಯಾಮೆರಾ ಇಲ್ಲದ ಎಚ್‌ಟಿಸಿ ಒನ್ ಮಿನಿ 2 ಲಾಂಚಿಂಗ್

ಇದು ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ ಅನ್ನು ಒಳಗೊಂಡಿದ್ದು 1 ಜಿಬಿ ರ್‌ಯಾಮ್ ಇದರಲ್ಲಿದೆ. 16 ಜಿಬಿ ಸಂಗ್ರಹಣಾ ಸಾಮರ್ಥ್ಯ ಈ ಫೋನ್‌ಗಿದ್ದು ಒನ್ ಎಮ್‌ 8 ನ 801 ಹಾಗೂ 2 ಜಿಬಿ ರ್‌ಯಾಮ್ ಅನ್ನು ಇದು ಹೊಂದಿದೆ. ಈ ಹ್ಯಾಂಡ್‌ಸೆಟ್ EMEA ಮತ್ತು ಏಷ್ಯಾದಲ್ಲಿ ಜೂನ್ 2014 ರಿಂದ ದೊರೆಯಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot