Home
ಮೊಬೈಲ್

ಭಾರತದ ಮಾರುಕಟ್ಟೆಗೆ ಎಚ್‌ಟಿಸಿ ಒನ್‌ ಮಿನಿ ಬಿಡುಗಡೆ

By Ashwath

ಎಚ್‌ಟಿಸಿ ಕಂಪೆನಿಯ ಸಿಂಗಲ್‌ ಸಿಮ್‌ ಹಾಕಬಹುದಾದ ಸ್ಮಾರ್ಟ್‌ಫೋನ್‌ ಎಚ್‌ಟಿಸಿ ಒನ್‌ ಭಾರತದ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆಯಾಗಿದೆ. 36,790 ಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದ್ದು ಆನ್‌ಲೈನ್‌ ಶಾಪಿಂಗ್‌ ತಾಣಗಳಲ್ಲಿ ಈ ಸ್ಮಾರ್ಟ್‌‌ಫೋನ್‌ ಖರೀದಿಸಬಹುದಾಗಿದೆ.

ಎಚ್‌ಡಿಸ್ಕ್ರೀನ್‌ ಹೊಂದಿರುವ ಎಚ್‌ಟಿಸಿ ಒನ್‌ ಮಿನಿ 1.4GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌,1GB RAM,16GB ಆಂತರಿಕ ಮೆಮೋರಿ, ಒಳಗೊಂಡಿದ್ದು,ಎಕ್ಸಲರೋಮೀಟರ್‌ ಸೆನ್ಸರ್‌,ಲೈಟ್‌ ಸೆನ್ಸರ್‌,ಗೈರೋ ಸೆನ್ಸರ್‌,ಪ್ರಾಕ್ಸಿಮಿಟಿ ಸೆನ್ಸರ್‌,ಡಿಜಿಟಲ್‌ ಕಂಪಾಸ್‌ ಸೆನ್ಸರ್‌ ಒಳಗೊಂಡಿದೆ.

ಎಚ್‌ಟಿಸಿ ಒನ್‌ ಮಿನಿ
ವಿಶೇಷತೆ:
ಸಿಂಗಲ್‌ ಸಿಮ್‌ 4.3 ಇಂಚಿನ ಎಲ್‌ಸಿಡಿ ಸ್ಕ್ರೀನ್‌(720x1280 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.4GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
1GB RAM
16GB ಆಂತರಿಕ ಮೆಮೋರಿ
ಎಲ್‌ಇಡಿ ಫ್ಲ್ಯಾಶ್‌ ಸಹಿತ ಆಲ್ಟ್ರಾ ಪಿಕ್ಸೆಲ್‌ ಕ್ಯಾಮೆರಾ
1.6 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ಜಿಪಿಎಸ್‌,ಎ-ಜಿಪಿಎಸ್‌,ಗ್ಲೋನಾಸ್‌‌,ಬ್ಲೂಟೂತ್‌
1800mAh ಬ್ಯಾಟರಿ

ಎಚ್‌ಟಿಸಿ ಒನ್‌ನಲ್ಲಿ ವಿಶೇಷತೆಗಳನ್ನು ಈ ಸ್ಮಾರ್ಟ್‌ಫೋನ್‌ ಒಳಗೊಂಡಿದ್ದು ಮುಂದಿನ ಪುಟದಲ್ಲಿ ಈ ಸ್ಮಾರ್ಟ್‌ಫೋನ್‌ ವಿಶೇಷತೆಗಳನ್ನು ವಿಡಿಯೋದೊಂದಿಗೆ ವಿವರಿಸಲಾಗಿದೆ. ಜೊತೆಗೆ ಈ ಹಿಂದೆ ಬಿಡುಗಡೆ ಮಾಡಲಾದ ಎಚ್‌ಟಿಸಿ ಒನ್‌ ಮತ್ತು ಈ ಸ್ಮಾಟ್‌‌ಫೋನ್‌‌ ಹಾರ್ಡ್‌ವೇರ್‌ವಿಶೇಷತೆಗಳನ್ನು ಹೋಲಿಕೆ ಮಾಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಎಚ್‌ಟಿಸಿ ಒನ್‌ ಮಿನಿ ಸ್ಮಾರ್ಟ್‌ಫೋನಿನ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ಭಾರತದ ಮಾರುಕಟ್ಟೆಗೆ ಎಚ್‌ಟಿಸಿ ಒನ್‌ ಮಿನಿ ಬಿಡುಗಡೆ

ವಿವಿಧ ಜಾಲತಾಣಗಳ ಮಾಹಿತಿಗಳು,ಅಪ್‌ಡೇಟ್‌ಗಳು ಎಲ್ಲಾ ಸ್ಮಾರ್ಟ್‌ಫೋನಲ್ಲಿ ಒಂದೇ ಪೇಜ್‌ ನೋಡಲು ಸಾಧ್ಯವಿಲ್ಲ. ಆದರೆ ಈ ಫೋನಲ್ಲಿ ಬ್ಲಿಂಕ್‌ ಫೀಡ್‌‌ ವಿಶೇಷತೆ ಇದ್ದು ಈ ಆಯ್ಕೆಯನ್ನು ಆರಿಸುವ ಮೂಲಕ ನೀವು ಜಾಲತಾಣಗಳ ಅಪ್‌ಡೇಟ್‌ಗಳನ್ನು ಸುಲಭವಾಗಿ ಒಂದೇ ಪೇಜ್‌ನಲ್ಲಿ ನೋಡಬಹುದು.

ಭಾರತದ ಮಾರುಕಟ್ಟೆಗೆ ಎಚ್‌ಟಿಸಿ ಒನ್‌ ಮಿನಿ ಬಿಡುಗಡೆ

ಎಚ್‌ಟಿಸಿ ಸ್ಮಾರ್ಟ್‌ಫೋನಲ್ಲಿ ರೆಕಾರ್ಡ್‌ ಆಗಿರುವ ವಿಡಿಯೋವನ್ನು ಕತ್ತರಿಸಿ ಸಣ್ಣ ಫೋಟೋ ವಿಡಿಯೋವನ್ನಾಗಿ ಮಾಡಬಹುದು.ಅಷ್ಟೇ ಅಲ್ಲದೇ ಈ ಮಿನಿ ವಿಡಿಯೋವನ್ನು ಕೂಡಲೇ ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಸಹ ಮಾಡಬಹುದು.

ಭಾರತದ ಮಾರುಕಟ್ಟೆಗೆ ಎಚ್‌ಟಿಸಿ ಒನ್‌ ಮಿನಿ ಬಿಡುಗಡೆ

ಇನ್ನೂ ಕ್ಲಿಕ್‌ ಮಾಡಿರುವ ಫೋಟೋದಲ್ಲಿ ಬೇಡವಾದ ಅಂಶಗಳಿದ್ದರೆ, ಆ ಭಾಗವನ್ನು ಸುಲಭವಾಗಿ ಆಬ್ಜೆಕ್ಟ್‌ ರಿಮೂವಲ್‌ನಲ್ಲಿ ಎಡಿಟ್‌ ಮಾಡಬಹುದು

ಭಾರತದ ಮಾರುಕಟ್ಟೆಗೆ ಎಚ್‌ಟಿಸಿ ಒನ್‌ ಮಿನಿ ಬಿಡುಗಡೆ

ಒಂದು ಆಕ್ಷನ್‌ ದೃಶ್ಯದ ವಿಡಿಯೋವನ್ನು ಸ್ವಿಕ್ವೆನ್ಸ್‌ ಫೋಟೋಗಳಾಗಿ ಈ ಸ್ಮಾರ್ಟ್‌ಫೋನಲ್ಲಿ ಮಾಡಬಹುದು.

ಭಾರತದ ಮಾರುಕಟ್ಟೆಗೆ ಎಚ್‌ಟಿಸಿ ಒನ್‌ ಮಿನಿ ಬಿಡುಗಡೆ

ಇನ್ನೂ ಒಂದು ವಿಡಿಯೋ ರೆಕಾರ್ಡ್‌ ಮಾಡುತ್ತಿರುವಾಗಲೇ ಒಂದು ದೃಶ್ಯ ನಿಮಗೆ ಇಷ್ಟವಾಗಿರುತ್ತದೆ. ಆ ದೃಶ್ಯದ ವೇಗವನ್ನು ಈ ಸ್ಮಾರ್ಟ್‌ಫೋನಲ್ಲಿ ಮತ್ತಷ್ಟು ಕಡಿಮೆ ಮಾಡಿ ನಿಧನವಾಗಿ ತೋರಿಸುವಂತೆ ಸೆಟ್‌ ಮಾಡಿ ಸೇವ್‌ ಮಾಡಬಹುದು.

ಭಾರತದ ಮಾರುಕಟ್ಟೆಗೆ ಎಚ್‌ಟಿಸಿ ಒನ್‌ ಮಿನಿ ಬಿಡುಗಡೆ

ಗ್ರೂಪ್‌ ಶಾಟ್‌ ತೆಗೆಯುವಾಗ ಎಲ್ಲರೂ ಒಂದೇ ಸಮಯಕ್ಕೆ ನಗುವುದು ಕಷ್ಟ. ಹೀಗಾಗಿ ಒಂದೇ ಕ್ಷಿಕ್‌ನಲ್ಲಿ ಸುಂದರವಾದ ಫೋಟೋ ತೆಗೆಯುವುದು ಕಷ್ಟ. ಅದಕ್ಕಾಗಿ ಈ ಕ್ಯಾಮೆರಾದಲ್ಲಿ ಗ್ರೂಪ್‌ ಶಾಟ್‌ ತೆಗೆಯಲು ವಿಶೇಷವಾದ ಕ್ಯಾಮೆರಾ ಸೆಟ್ಟಿಂಗ್ಸ್‌ ಇದೆ. ಗ್ರೂಪ್‌ ಶಾಟ್‌ನಲ್ಲಿ ಸ್ವಲ್ಪ ವಿಡಿಯೋ ಮಾಡಿ ನಂತರ ಫೋಟೋದಲ್ಲಿರುವ ಪ್ರತಿಯೊಬ್ಬ ವ್ಯಕ್ತಿ ನಗುವ ದೃಶ್ಯವನ್ನು ಪ್ರತ್ಯೇಕವಾಗಿ ಎಡಿಟ್‌ ಮಾಡುವ ಮೂಲಕ ಸುಂದರ ಗ್ರೂಪ್‌ ಫೋಟೋವನ್ನು ತೆಗೆಯಬಹುದು.

 ಎಚ್‌ಟಿಸಿ ಒನ್‌ ವರ್ಸ‌ಸ್‌ ಎಚ್‌ಟಿಸಿ ಒನ್‌ ಮಿನಿ

ಎಚ್‌ಟಿಸಿ ಒನ್‌ ವರ್ಸ‌ಸ್‌ ಎಚ್‌ಟಿಸಿ ಒನ್‌ ಮಿನಿ

ಎಚ್‌ಟಿಸಿ ಒನ್‌ ಡ್ಯುಯಲ್‌ ಸಿಮ್‌ (ಜಿಎಸ್‌ಎಂ ಅಥವಾ ಸಿಡಿಎಂಎ+ಜಿಎಸ್‌ಎಂ),
ಎಚ್‌ಟಿಸಿ ಒನ್‌ ಮಿನಿ ಸಿಂಗಲ್‌ ಸಿಮ್‌ ಸ್ಮಾರ್ಟ್‌ಫೋನ್‌‌(ಜಿಎಸ್‌ಎಂ)

 ಎಚ್‌ಟಿಸಿ ಒನ್‌ ವರ್ಸ‌ಸ್‌ ಎಚ್‌ಟಿಸಿ ಒನ್‌ ಮಿನಿ

ಎಚ್‌ಟಿಸಿ ಒನ್‌ ವರ್ಸ‌ಸ್‌ ಎಚ್‌ಟಿಸಿ ಒನ್‌ ಮಿನಿ

ಎಚ್‌ಟಿಸಿ ಒನ್‌ 4.7 ಇಂಚು ಇದ್ದರೆ ಮಿನಿ 4.3 ಇಂಚು ಉದ್ದವಿದೆ

 ಎಚ್‌ಟಿಸಿ ಒನ್‌ ವರ್ಸ‌ಸ್‌ ಎಚ್‌ಟಿಸಿ ಒನ್‌ ಮಿನಿ

ಎಚ್‌ಟಿಸಿ ಒನ್‌ ವರ್ಸ‌ಸ್‌ ಎಚ್‌ಟಿಸಿ ಒನ್‌ ಮಿನಿ

ಎಚ್‌ಟಿಸಿ ಒನ್‌ 1.7 GHz ಕ್ವಾಡ್‌ ಕೋರ್‌ ಪ್ರೊಸೆಸರ್‌ ಇದ್ದರೆ, 1.4 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌ ಹೊಂದಿದೆ

 ಎಚ್‌ಟಿಸಿ ಒನ್‌ ವರ್ಸ‌ಸ್‌ ಎಚ್‌ಟಿಸಿ ಒನ್‌ ಮಿನಿ

ಎಚ್‌ಟಿಸಿ ಒನ್‌ ವರ್ಸ‌ಸ್‌ ಎಚ್‌ಟಿಸಿ ಒನ್‌ ಮಿನಿ

ಎಚ್‌ಟಿಸಿ ಒನ್‌ 2 GB ರ್‍ಯಾಮ್‌ ಹೊಂದಿದ್ದರೆ, ಮಿನಿ 1 GB ಹೊಂದಿದೆ

 ಎಚ್‌ಟಿಸಿ ಒನ್‌ ವರ್ಸ‌ಸ್‌ ಎಚ್‌ಟಿಸಿ ಒನ್‌ ಮಿನಿ

ಎಚ್‌ಟಿಸಿ ಒನ್‌ ವರ್ಸ‌ಸ್‌ ಎಚ್‌ಟಿಸಿ ಒನ್‌ ಮಿನಿ

64 GB, 32 GB ಎರಡು ಆಂತರಿಕ ಮೆಮೋರಿಯಲ್ಲಿ ಎಚ್‌ಟಿಸಿ ಒನ್‌ ಬಿಡುಗಡೆಯಾಗಿದೆ ಆದರೆ ಮಿನಿ 32 GB ಆಂತರಿಕ ಮೆಮೋರಿ ಮಾತ್ರ ಹೊಂದಿದೆ.

 ಎಚ್‌ಟಿಸಿ ಒನ್‌ ವರ್ಸ್‌ಸ್‌ ಎಚ್‌ಟಿಸಿ  ಒನ್‌ ಮಿನಿ

ಎಚ್‌ಟಿಸಿ ಒನ್‌ ವರ್ಸ್‌ಸ್‌ ಎಚ್‌ಟಿಸಿ ಒನ್‌ ಮಿನಿ

ಎಚ್‌ಟಿಸಿ ಒನ್‌ 2.1 ಎಂಪಿ ಮುಂದುಗಡೆ ಕ್ಯಾಮೆರಾ ಹೊಂದಿದೆ. ಮಿನಿ 1.6 ಎಂಪಿ ಕ್ಯಾಮೆರಾವನ್ನು ಹೊಂದಿದೆ.

 ಎಚ್‌ಟಿಸಿ ಒನ್‌ ವರ್ಸ್‌ಸ್‌ ಎಚ್‌ಟಿಸಿ  ಒನ್‌ ಮಿನಿ

ಎಚ್‌ಟಿಸಿ ಒನ್‌ ವರ್ಸ್‌ಸ್‌ ಎಚ್‌ಟಿಸಿ ಒನ್‌ ಮಿನಿ

ಎಚ್‌ಟಿಸಿ ಒನ್‌ 2300 mAh ಬ್ಯಾಟರಿಯನ್ನು ಹೊಂದಿದ್ದರೆ ಮಿನಿ 1800 mAh ಬ್ಯಾಟರಿಯನ್ನು ಹೊಂದಿದೆ

 ಎಚ್‌ಟಿಸಿ ಒನ್‌ ವರ್ಸ್‌ಸ್‌ ಎಚ್‌ಟಿಸಿ  ಒನ್‌ ಮಿನಿ

ಎಚ್‌ಟಿಸಿ ಒನ್‌ ವರ್ಸ್‌ಸ್‌ ಎಚ್‌ಟಿಸಿ ಒನ್‌ ಮಿನಿ

ಎಚ್‌ಟಿಸಿ ಒನ್‌ ಬೆಲೆ 44,999, ಎಚ್‌ಟಿಸಿ ಮಿನಿ ಬೆಲೆ: 35,054 ರೂಪಾಯಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+