ಹೆಚ್‌ಟಿಸಿ ವನ್‌ X+ Vs ನೋಕಿಯಾ ಲೂಮಿಯಾ 920

By Vijeth Kumar Dn
|

ಥೈವಾನ್‌ ಮೂಲದ ಮೊಬೈಲ್‌ ತಯಾರಿಕ ಸಂಸ್ಥೆಯಾದ ಹೆಚ್‌ಟಿಸಿ ತನ್ನಯ ವನ್‌ ಎಕ್ಸ್‌ ಮಾದರಿಯ ಸ್ಮಾರ್ಟ್‌ಫೋನ್‌ನ ಯಶಸ್ಸಿ ಬಳಿಕ ಅದರ ನವೀಕೃತ ಮಾದರಿಯಾದ ವನ್‌ ಎಕ್ಸ್‌+ ಮಾದರಿಯ ಆಂಡ್ರಾಯ್ಡ್ ಜೆಲ್ಲಿಬೀನ್‌ ಚಾಲಿತ ಸ್ಮಾರ್ಟ್‌ಫೋನ್‌ ಅನ್ನು ಕಳೆದವಾರವಷ್ಷೇ ಅನಾವರಣ ಗೊಳಿಸಿದೆ. ಅಂದಹಾಗೆ ಗೂಗಲ್‌ನ ನೂತನ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಜೆಲ್ಲಿಬೀನ್‌ ಚಾಲಿತ ಹೆಚ್‌ಟಿಸಿ ಸ್ಮಾರ್ಟ್‌ಫೋನ್‌, ಅಕ್ಟೋಬರ್‌ 29 ರಂದು ಅಧಿಕೃತವಾಗಿ ಬಿಡುಗಡೆಯಾಗಲಿರುವ ವಿಂಡೋಸ್‌ ಫೋನ್‌ 8 ಆಪರೇಟಿಂಗ್‌ ಸಿಸ್ಟಂ ಚಾಲಿತವಾದ ನೋಕಿಯಾ ಲೂಮಿಯಾ 920 ಸ್ಮಾರ್ಟ್‌ಫೋನ್‌ಗೆ ಪ್ರಬಲ ಪೈಪೋಟಿ ನಿಡಬಲ್ಲದು ಎಂದು ನಿರೀಕ್ಷಿಸಲಾಗಿದೆ.

ಅಂದಹಾಗೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರಲಿರುವ ನೂತನ ವಿಂಡೋಸ್‌ ಫೋನ್‌ 8 ಚಾಲಿತ ಹಾಗೂ ಆಂಡ್ರಾಯ್ಡ್ ಜೆಲ್ಲಿ ಬೀನ್‌ ಚಾಲಿತ ಸ್ಮಾರ್ಟ್‌ ಫೋನ್ಸ್‌ಗಳಾದ ನೋಕಿಯಾ ಲೂಮಿಯಾ 920 ಹಾಗೂ ಹೆಚ್‌ಟಿಸಿ ವನ್‌ ಎಕ್ಸ್‌+ ನಡುವೆ ಏನೆಲ್ಲಾ ವೆತ್ಯಾಸಗಳಿದೆ ಎಂಬುದನ್ನು ತಿಳಿಸುವ ಸಲುವಾಗಿ ಗಿಜ್ಬಾಟ್‌ ಓದುಗರಿಗಾಗಿ ಇವೆರಡರ ನಡುವಿನ ಹೋಲಿಕೆಯನ್ನು ತರಲಾಗಿದೆ ಒಮ್ಮೆ ಓದಿ ನೋಡಿ.

ಗಾತ್ರ ಹಾಗೂ ಸುತ್ತಳತೆ: ಹೆಚ್‌ಟಿಸಿ ವನ್‌ ಎಕ್ಸ್‌+, 134.36 x 69.9 x 8.9 mm ಸುತ್ತಳತೆಯೊಂದಿಗೆ 135 ಗ್ರಾಂ ತೂಕವಿದ್ದರೆ, ಲೂಮಿಯಾ 920 ವಿಂಡೋಸ್‌ ಫೋನ್‌ 130.3 x 70.8 x 10.7 mm ಸುತ್ತಳತೆಯೊಂದಿಗೆ 185 ಗ್ರಾಂ ತೂಕವಿದೆ.

ದರ್ಶಕ: ಹೆಚ್‌ಟಿಸಿ ವನ್‌ ಎಕ್ಸ್‌+ ನಲ್ಲಿ 4.7 ಇಂಚಿನ ಸೂಪರ್‌ LCD 2 ಟಚ್‌ಸ್ಕ್ರೀನ್‌ ದರ್ಶಕ ಹಾಗೂ 1280 x 720 ಪಿಕ್ಸೆಲ್ಸ್‌ ಒಳಗೊಂಡಿದೆ. ಹಾಗೂ ನೋಕಿಯಾ ಲೂಮಿಯಾ 920 ಯಲ್ಲಿ 4.5 inch ಪ್ಯೂರ್‌ ಮೋಷನ್‌ HD+ IPS LCD ಟಚ್‌ಸ್ಕ್ರೀನ್‌ ನೊಂದಿಗೆ 1280 x 768 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ.

ಅಂದಹಾಗೆ ಎರಡೂ ಸ್ಮಾರ್ಟ್‌ಫೋನ್ಸ್‌ಗಳಲ್ಲಿ ಗೊರಿಲ್ಲಾ ಗ್ಲಾಸ್‌ 2 ರಕ್ಷಣೆ ಹೊಂದಿದೆ.

ಪ್ರೊಸೆಸರ್‌: ಈ ವಿಭಾಗದಲ್ಲಿ ಹೆಚ್‌ಟಿಸಿ ವನ್‌ ಎಕ್ಸ್‌+ ಕ್ವಾಟ್‌ ಕೋರ್‌ 1.7GHz Nvidia ಟೆಗ್ರಾ 3 AP37 ಪ್ರೊಸೆಸರ್‌ ಹೊಂದಿದ್ದರೆ, ನೋಕಿಯಾ ಲೂಮಿಯಾ 920 ಡ್ಯುಯೆಲ್‌ ಕೋರ್‌ 1.5GHz ಕ್ವಾಲ್‌ಕಾಮ್‌ ಸ್ನಾಪ್‌ ಡ್ರಾಗನ್‌ S4 ಪ್ರೊಸೆಸರ್‌ ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಹೆಚ್‌ಟಿಸಿ ವನ್‌ ಎಕ್ಸ್‌+ ನಲ್ಲಿ ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ OS ಇದ್ದರೆ, ನೋಕಿಯಾ ಕೂಮಿಯಾ 920 ನೂತನ ವಿಂಡೋಸ್‌ ಫೋನ್‌ 8 ಚಾಲಿತವಾಗಿದೆ.

ಕ್ಯಾಮೆರಾ: ಹೆಚ್‌ಟಿಸಿ ವನ್‌ ಎಕ್ಸ್‌+ ನಲ್ಲಿ ಹಿಂಬದಿಯ 8MP ಕ್ಯಾಮೆರಾದೊಂದಿಗೆ ಆಟೋ ಫೋಕಸ್‌, LED ಫ್ಲಾಷ್‌, ಜಿಯೋ-ಟ್ಯಾಗಿಂಗ್‌, ಟಚ್‌ ಫೋಕಸ್‌, ಫೇಸ್‌ ಸ್ಮೈಲ್‌ ಡಿಟೆಕ್ಷನ್‌ ಸೇರಿದಂತೆ ಇಮೇಜ್‌ ಸ್ಟೆಬಲೈಸರ್‌ ಹೊಂದಿದ್ದು ವಿಡಿಯೋ ಕರೆಗಾಗಿ 1.6MP ನ ಮುಂಬದಿಯ ಕ್ಯಾಮೆರಾ ಹೊಂದಿದೆ.

ಲೂಮಿಯಾ 920 ಯಲ್ಲಿ ಕೊಂಚ ಉತ್ತಮವಾದ ಹಿಂಬದಿಯ 8.7MP ಕ್ಯಾಮೆರಾದೊಂದಿಗೆ ಡ್ಯುಯೆಲ್‌ LED ಫ್ಲಾಷ್‌, ಆಟೋ ಫೋಕಸ್‌ ಹಾಗೂ ಪ್ಯೂರ್‌ ವ್ಯೂ ಬಾಂಡಿಂಗ್‌ ಸೇರಿದಂತೆ ವಿಡಿಯೋ ಕರೆಗಾಗಿ 1.2MPನ ಮುಂಬದಿಯ ಕ್ಯಾಮೆರಾ ಹೊಂದಿದೆ.

ಸ್ಟೋರೇಜ್‌: ಹೆಚ್‌ಟಿಸಿ ವನ್‌ ಎಕ್ಸ್‌+ ನಲ್ಲಿ 64GB iಆಂತರಿ ಸ್ಟೋರೇಜ್‌ ನೊಂದಿಗೆ 1GB RAM ಹೊಂದಿದ್ದರೆ, ಲೂಮಿಯಾ 920 ಯಲ್ಲಿ 32GB ಆಂತರಿಕ ಮೆಮೊರಿ ಹಾಗೂ 1GB RAM ಹೊಂದಿದೆ.ಅಂದಹಾಗೆ ಎರಡೂ ಫೋನ್‌ಗಳಲ್ಲಿ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಸೌಲಭ್ಯವಿಲ್ಲ.

ಕನೆಕ್ಟಿವಿಟಿ: ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ Wi-Fi 802.11 a/b/g/n, ಡ್ಯುಯೆಲ್‌-ಬ್ಯಾಂಡ್‌, DLNA, Wi-Fi ಹಾಟ್‌ಸ್ಪಾಟ್‌ ಹಾಗೂ ಬ್ಲೂಟೂತ್‌ v4.0 ಸೇರಿದಂತೆ A2DP, HSDPA ಹಾಗೂ HSUPA ನೆಟ್ವರ್ಕ್‌ಸ್ಪೀಡ್‌, NFC ಹಾಗೂ 4G LTE ಹೊಂದಿವೆ.

ಇದಲ್ಲದೆ ನೋಕಿಯಾ ಲೂಮಿಯಾ 920 ಯಲ್ಲಿ Qi ವೃರ್‌ಲೆಸ್‌ ಚಾರ್ಜಿಂಗ್‌ ಹೊಂದಿದೆ.

ಬ್ಯಾಟರಿ: ಹೆಚ್‌ಟಿಸಿ ವನ್‌ ಎಕ್ಸ್‌+ ನಲ್ಲಿ 2,100 mAh Li-Po ಬ್ಯಾಟರಿ ಇದ್ದು 6 ಗಂಟೆಗಳ ಟಾಕ್‌ ಟೈಮ್‌ ನೀಡುತ್ತದೆ, ಹಾಗೂ ನೋಕಿಯಾ ಲೂಮಿಯಾ 920 ಯಲ್ಲಿ 2,000 mAh BP-4GW ಬ್ಯಾಟರಿ ಇದ್ದು 400 ಸ್ಟ್ಯಾಂಡ್‌ ಬೈ ಹಾಗೂ 10 ಹಂಟೆಗಳ ಟಾಕ್‌ ಟೈಮ್‌ ನೀಡುತ್ತದೆ.

Read In English...

ನೂತನ ಹೆಚ್‌ಟಿಸಿ ವನ್‌ X+ ಹೀಗಿದೆ ನೋಡಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X