ಎಚ್ ಟಿ ಸಿಗೆ ಬೂಟ್ ಲೋಡರ್ ಅನ್ ಲಾಕರ್ ಅಪ್ಲಿಕೇಶನ್

Posted By:
ಎಚ್ ಟಿ ಸಿಗೆ ಬೂಟ್ ಲೋಡರ್ ಅನ್ ಲಾಕರ್ ಅಪ್ಲಿಕೇಶನ್

ಎಚ್ ಟಿ ಸಿ ತನ್ನ ಗುಣಮಟ್ಟದ ಕಾರ್ಯ ವೈಖರಿಯಿಂದ ಬಳಕೆದಾರರ ಮೆಚ್ಚುಗೆ ಮತ್ತು ನಂಬಿಕೆಗೆ ಪಾತ್ರವಾಗಿದೆ. ಎಚ್ ಟಿ ಸಿ ತನ್ನ ಬಳಕೆದಾರರಿಗೆ ಹೊಸ ಅಪ್ಲಿಕೇಶನ್ ಗಳನ್ನು ಪರಿಚಯಿಸಿ ಮೊಬೈಲ್ ಹೆಚ್ಚು ಸಮರ್ಥವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತಿದೆ. ಅಷ್ಟೇ ಅಲ್ಲ ಸಮಾಯಕ್ಕೆ ಸರಿಯಾಗಿ ಅಪ್ಲಿಕೇಶನ್ ನಲ್ಲಿ ಸುಧಾರಣೆಯನ್ನು ಕೂಡ ತರಲಾಗುವುದು. ಇದರಿಂದಾಗಿ ಎಚ್ ಟಿ ಸಿ ಮೊಬೈಲ್ ಬಳಕೆ ಸುಲಭವಾಗಿದೆ.

ಹೊಸ ತಂತ್ರಜ್ಞಾನವನ್ನು ಪರಿಚಯಿಸುವಲ್ಲಿ ಸಿದ್ಧ ಹಸ್ತವಾಗಿರುವ ಈ ಕಂಪನಿ ಇದೀಗ ಹ್ಯಾಂಡ್ ಸೆಟ್ ಗೆ ಬೂಟ್ ಲೋಡರ್ ಅನ್ ಲಾಕರ್ ಸಿಸ್ಟಮ್ ಅಳವಡಿಸಿದೆ. ಈ ಅಪ್ಲಿಕೇಶನ್ ಇತರ ಕೆಲವು ಹ್ಯಾಂಡ್ ಸೆಟ್ ನಲ್ಲಿ ಕೂಡ ಬಳಸಬಹುದಾಗಿದೆ. ಈ ಅಪ್ಲಿಕೇಶನ್ ನ ಪರಿಷ್ಕೃತ ಆಯಾಮವನ್ನು ತರಲು ಎಚ್ ಟಿ ಸಿ ಪ್ರಯತ್ನವನ್ನು ಪಡುತ್ತಿದ್ದು ಸಧ್ಯದಲ್ಲಿಯೆ ಬರಲಿದೆ.

ಈ ಅನ್ ಲಾಕರ್ ಟೂಲ್ ಮತ್ತಷ್ಟು ದಕ್ಷತೆಯಿಂದ ಕಾರ್ಯ ನಿರ್ವಹಿಸುವಂತೆ ಮಾಡಲಾಗುವುದು ಎಂದು ಎಚ್ ಟಿ ಸಿ ಮೊಬೈಲ್ ಬಳಕೆದಾರರಿಗೆ ಎಚ್ ಟಿ ಸಿ ಕಂಪನಿ ಭರವಸೆಯನ್ನು ನೀಡಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot