ಎಚ್ ಟಿಸಿಯಿಂದ ಎರಡು ನೂತನ ಮೊಬೈಲ್

Posted By: Staff
ಎಚ್ ಟಿಸಿಯಿಂದ ಎರಡು ನೂತನ ಮೊಬೈಲ್

ಉತ್ತಮ ಗುಣಮಟ್ಟದೊಂದಿಗೆ ಹಲವು ಆಯ್ಕೆಗಳನ್ನು ನೀಡುವ ಎಚ್ ಟಿಸಿ ಮೊಬೈಲ್ ಗಳು ಗ್ರಾಹಕರ ನಂಬಿಕೆ ಪಡೆದುಕೊಂಡಿದೆ. ಎಚ್ ಟಿಸಿ ಕೆಲವು ದಿನಗಳ ಹಿಂದಷ್ಟೇ ಎರಡು ಮೊಬೈಲ್ ಗಳನ್ನು ಬಿಡುಗಡೆಗಳಿಸಿದ್ದು, ಮಾರುಕಟ್ಟೆಯಲ್ಲಿ ಈ ಮೊಬೈಲ್ ಗಳು ಭಾರೀ ಹೆಸರು ಮಾಡಿದೆ.

ಎಚ್ ಟಿ ಸಿ ರಾಡರ್ 4 ಜಿ ಮತ್ತು ಎಚ್ ಟಿಸಿ ವಿವಿದ್ 4ಜಿ ಎಂಬ ಎರಡು ಮೊಬೈಲ್ ಗಳ ಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ. ಇವುಗಳ ಗುಣಾವಗುಣಗಳನ್ನು ತಿಳಿದುಕೊಂಡು ನಿಮ್ಮ ಮೆಚ್ಚುಗೆ ಗಳಿಸುವ ಮೊಬೈಲನ್ನು ಕೊಂಡುಕೊಳ್ಳಬಹುದು.

ಎಚ್ ಟಿಸಿ ರಾಡರ್ 4ಜಿ ಮೊಬೈಲ್ ಜೆಎಸ್ ಎಂ ಮೊಬೈಲಾಗಿದೆ. ಈ ಮೊಬೈಲ್ ಮೈಕ್ರೊಸಾಫ್ಟ್ ವಿಂಡೋಸ್ ಫೋನ್ 7.5 ಮ್ಯಾಂಗೊ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದ್ದು, ಕ್ವಾಲ್ಕಂ MSM8255 ಸ್ನಾಪ್ ಡ್ರಾಗನ್ ಚಿಪ್ ಸೆಟ್ ಪಡೆದುಕೊಂಡಿದೆ. 1 GHz ವೇಗದ ಸ್ಕಾರ್ಪಿಯನ್ ಪ್ರೊಸೆಸರ್ ಜೊತೆ 512 ಎಂಬಿ RAM ಇದೆ. ಗ್ರಾಫಿಕ್ಸ್ ಗೆಂದು ಅಡೆರ್ನೊ 205 ಗ್ರಾಫಿಕ್ ಪ್ರೊಸೆಸಿಂಗ್ ಯುನಿಟ್ ಇದೆ.

ಎಚ್ ಟಿಸಿ ರಾಡರ್ 4ಜಿ ಮೊಬೈಲ್:

* 120.5 x 61.5 x 10.9 ಎಂಎಂ ಸುತ್ತಳತೆ

* 137 ಗ್ರಾಂ ತೂಕ

* 3.8 ಇಂಚಿನ S-LCD ಮಲ್ಟಿ ಟಚ್ ಸ್ಕ್ರೀನ್, 480 x 800 ಪಿಕ್ಸಲ್ ರೆಸೊಲ್ಯೂಷನ್

* ಗೊರಿಲ್ಲಾ ಗ್ಲಾಸ್ ಸುರಕ್ಷತೆ

* 8 ಜಿಬಿ ಆಂತರಿಕ ಮೆಮೊರಿ

* ಅಕ್ಸೆಲೆರೊಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್

* GPRS ಮತ್ತು EDGE ಸಂಪರ್ಕ

* 3ಜಿ ಸಂಪರ್ಕ

* DLNA ಜೊತೆ b/g/n 802.11 ವೈ-ಫೈ, A2DP ಜೊತೆ v2.1 ಬ್ಲೂಟೂಥ್

* ಮೈಕ್ರೊUSB v2.0

* 5 ಮೆಗಾ ಪಿಕ್ಸಲ್ ಕ್ಯಾಮೆರಾ, ಆಟೊಫೋಕಸ್, LED ಫ್ಲಾಶ್, 2560 x 1920 ಪಿಕ್ಸಲ್ ರೆಸೊಲ್ಯೂಷನ್

* ಸೆಕೆಂಡರಿ ಕ್ಯಾಮೆರಾ

*  A-GPS ಜೊತೆ GPS

ಈ ಎಚ್ ಟಿಸಿ ರಾಡರ್ 4ಜಿ ಮೊಬೈಲ್ Li ion 1520 mAh ಬ್ಯಾಟರಿ ಪಡೆದುಕೊಂಡಿದ್ದು, 2ಜಿನಲ್ಲಿ 10 ಗಂಟೆ ಟಾಕ್ ಟೈಂ ಮತ್ತು 3ಜಿನಲ್ಲಿ 8 ಗಂಟೆ ಟಾಕ್ ಟೈಂ ನೀಡುತ್ತದೆ.

ಎಚ್ ಟಿಸಿ ವಿವಿದ್ 4ಜಿ ಮೊಬೈಲ್:

ಈ ಮೊಬೈಲ್ ಕೂಡ ಜೆಎಸ್ ಎಂ ಬೆಂಬಲಿತವಾಗಿದೆ. ಗೂಗಲ್ ಆಂಡ್ರಾಯ್ಡ್ v2.3.4 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದೆ. ಕ್ವಾಲ್ಕಂ APQ8060 ಸ್ನಾಪ್ ಡ್ರಾಗನ್ ಚಿಪ್ ಸೆಟ್ ಜೊತೆ ಡ್ಯೂಯಲ್ ಕೋರ್ 1.2 GHz ಸ್ಕಾರ್ಪಿಯನ್ ಪ್ರೊಸೆಸರ್ ಜೊತೆ 1 ಜಿಬಿ RAM ಪಡೆದುಕೊಂಡಿದೆ. ಈ ಮೊಬೈಲ್ ನಲ್ಲೂ ಅಡೆರ್ನೊ 220 ಗ್ರಾಫಿಕ್ ಪ್ರೊಸೆಸಿಂಗ್ ಯುನಿಟ್ ಪಡೆದುಕೊಂಡಿದೆ.

ಎಚ್ ಟಿಸಿ ವಿವಿದ್ 4ಜಿ ಮೊಬೈಲ್:

* 128.8 x 67.1 x 11.2 ಎಂಎಂ ಸುತ್ತಳತೆ

* 176.9 ಗ್ರಾಂ ತೂಕ

* 4.5 ಇಂಚಿನ S-LCD ಮಲ್ಟಿ ಟಚ್ ಸ್ಕ್ರೀನ್ ಡಿಸ್ಪ್ಲೇ, 540 x 960 ಪಿಕ್ಸಲ್ ರೆಸೊಲ್ಯೂಷನ್

* 16 ಜಿಬಿ ಆಂತರಿಕ ಮೆಮೊರಿ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಮೆಮೊರಿ ಕಾರ್ಡ್ ಅವಕಾಶ

* ಅಕ್ಸೆಲೆರೊಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್

* GPRS ಮತ್ತು EDGE ಸಂಪರ್ಕ

* 3ಜಿ ಸಂಪರ್ಕ, LTE ತಂತ್ರಜ್ಞಾನ

* b/g/n 802.11 ವೈ-ಫೈ, DLNA ಮತ್ತು ವೈ-ಫೈ ಹಾಟ್ ಸ್ಪಾಟ್

* A2DP ಜೊತೆ v3.0 ಬ್ಲೂಟೂಥ್

* ಮೈಕ್ರೊ USB v2.0

* 8 ಮೆಗಾ ಪಿಕ್ಸಲ್ ಕ್ಯಾಮೆರಾ, ಆಟೊಫೋಕ್, ಡ್ಯೂಯಲ್ LED ಫ್ಲಾಶ್, 3264 x 2448 ಪಿಕ್ಸಲ್ ರೆಸೊಲ್ಯೂಷನ್

* 1.3 ಮೆಗಾ ಪಿಕ್ಸಲ್ ಸೆಕೆಂಡರಿ ಕ್ಯಾಮೆರಾ

* GPS, A-GPS

Li ion 1620 mAh ಬ್ಯಾಟರಿ ಹೊಂದಿರುವ ಈ ಮೊಬೈಲ್ 2 ಜಿ ಮತ್ತು 3ಜಿ ಸಂಪರ್ಕಕ್ಕೆ ಅನುಗುಣವಾಗಿ 7 ಗಂಟೆ 40 ನಿಮಿಷ ಟಾಕ್ ಟೈಂ ನೀಡುತ್ತದೆ.

HTC ರಾಡರ್ ಮೊಬೈಲ್ ವಿಂಡೋಸ್ ಸ್ಮಾರ್ಟ್ ಫೋನ್ ಆಗಿದ್ದರೆ, HTC ವಿವಿದ್ ಆಂಡ್ರಾಯ್ಡ್ ಬೆಂಬಲಿತವಾಗಿದೆ. ವಿವಿದ್ 4G ಬೆಲೆ ಸುಮಾರು 32,000 ರೂ ಆಗಿದೆ. HTC ರಾಡರ್ 4G  ಬೆಲೆ ಸುಮಾರು 25,000 ರೂ ಎಂದು ತಿಳಿದುಬಂದಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot