ರೇಸ್ ಗೆ ಸಿದ್ಧ ರೇಡಾರ್ ಮತ್ತು ರೈಮ್ ಮೊಬೈಲ್

ಗ್ರಾಹಕರಿಗೆ ವಿವಿಧ ಬಗೆಯ ಸ್ಮಾರ್ಟ್ ಪೋನ್ ಗಳನ್ನು ನೀಡಿರುವ ಎಚ್ ಟಿಸಿ ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಗೆ ಎರಡು ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸುವುದಕ್ಕೆ ಸಜ್ಜಾಗಿದೆ. ಎಚ್ ಟಿಸಿ ರೇಡಾರ್ ಮತ್ತು ಎಚ್ ಟಿಸಿ ರೈಮ್ ಎಂಬ ಮೊಬೈಲ್ ಗಳು ಗ್ರಾಹಕರು ಬಯಸುವ ಅನೇಕ ಆಯ್ಕೆಗಳನ್ನು ಹೊತ್ತು ತರುವ ನಿರೀಕ್ಷೆಯಿದೆ.
ರೇಡಾರ್ ಫೋನ್ ವಿಂಡೋಸ್ ಫೋನ್ OS 7.5 ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದ್ದರೆ, ರೈಮ್ ಫೋನ್ ಎಚ್ ಟಿಸಿ ಸೆನ್ಸ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದೆ. ಎರಡೂ ಮೊಬೈಲ್ ಗಳು 1 GHZ ಸಿಪಿಯು ಪ್ರೊಸೆಸಿಂಗ್ ಸ್ಪೀಡ್ ಪಡೆದುಕೊಂಡಿದೆ.
ಎಚ್ ಟಿಸಿ ರೇಡರ್ ವಿಶೇಷತೆ:
* 3.8 ಇಂಚಿನ ಡಿಸ್ಪ್ಲೇ, 480 x 800 ಪಿಕ್ಸಲ್ ರೆಸೊಲ್ಯೂಷನ್
* 120.5 x 61.5 x 10.9 ಎಂಎಂ ಸುತ್ತಳತೆ
* 137 ಗ್ರಾಂ ತೂಕ
* 8ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯ
* 5 ಮೆಗಾ ಪಿಕ್ಸಲ್ ಕ್ಯಾಮೆರಾ
* 720p ಹೈ ಡೆಫನಿಶನ್ ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯ
ಎಚ್ ಟಿಸಿ ರೈಮ್ ವಿಶೇಷತೆ:
* 3.7 ಇಂಚಿನ ಡಿಸ್ಪ್ಲೇ, 480 x 800 ಪಿಕ್ಸಲ್ ರೆಸೊಲ್ಯೂಷನ್
* 119 x 60.8 x 10.85 ಎಂಎಂ ಸುತ್ತಳತೆ
* 130 ಗ್ರಾಂ ತೂಕ
* 4ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯ
* 5 ಮೆಗಾ ಪಿಕ್ಸಲ್ ಕ್ಯಾಮೆರಾ
* 720p ಹೈ ಡೆಫನಿಶನ್ ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯ
* ಆಟೊ ಫೋಕಸ್, ಡಿಜಿಟಲ್ ಝೂಮ್
ಎರಡೂ ಸ್ಮಾರ್ಟ್ ಫೋನ್ ಗಳಲ್ಲಿಯೂ MP3, MPEG4 ಮತ್ತು AAC ಫಾರ್ಮೆಟ್ ಬೆಂಬಲಿಸುವ ಆಡಿಯೋ, ವಿಡಿಯೋ ಪ್ಲೇಯರ್ ಇದೆ. ಎರಡರಲ್ಲೂ ಇರುವ 3.5 ಎಂಎಂ ಆಡಿಯೋ ಜ್ಯಾಕ್ ಅತ್ಯುನ್ನತ ಸಂಗೀತ ನೀಡಲು ನೆರವಾಗಲಿದೆ.
ಎರಡೂ ಮೊಬೈಲ್ ಗಳಲ್ಲಿ ಸಂಪರ್ಕಕ್ಕೆಂದು ಬ್ಲೂಟೂಥ್, 802.11 b/ g/ n ವೈ-ಫೈ ಸಂಪರ್ಕ ಒದಗಿಸಲಾಗಿದೆ. ಎರಡರಲ್ಲೂ ಆಂಬಿಯಂಟ್ ಲೈಟ್ ಸೆನ್ಸಾರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಇದೆ.
ಎಚ್ ಟಿಸಿ ರೇಡಾರ್ ಮೊಬೈಲ್ ನ 1520mAh ಲೀಥಿಯಂ ಬ್ಯಾಟರಿ 600 ನಿಮಿಷ ಟಾಕ್ ಟೈಂ ಮತ್ತು 480 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಎಚ್ ಟಿಸಿ ರೈಮ್ ನ 1600 mAh ಲೀಥಿಯಂ ಬ್ಯಾಟರಿ 620 ನಿಮಿಷ ಟಾಕ್ ಟೈಂ ಮತ್ತು 295 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಈ ಎರಡೂ ಮೊಬೈಲ್ ಗಳ ನಿಖರ ಬೆಲೆ ಇನ್ನೂ ತಿಳಿದುಬಂದಿಲ್ಲ. ಆದರೆ ಇವೆರಡೂ ಮೊಬೈಲ್ ಗಳು 25,000 ರೂ ಗಿಂತ ಕಡಿಮೆ ಇರುವುದೆಂದು ಮೂಲಗಳಿಂದ ತಿಳಿದುಬಂದಿದೆ.


Click it and Unblock the Notifications








