ಎಚ್ ಟಿ ಸಿ ರೇಡಿಯಂಟ್ ಸುತ್ತಾ ಊಹಾಪೋಹ

Posted By:
ಎಚ್ ಟಿ ಸಿ ರೇಡಿಯಂಟ್ ಸುತ್ತಾ ಊಹಾಪೋಹ

ಮೊಬೈಲ್ ಲೋಕದಲ್ಲಿ ದಿನಕ್ಕೊಂದು ಸುದ್ದಿಗಳು ಹೊಸ ತಂತ್ರಜ್ಞಾನ ಬಗ್ಗೆ ಕೇಳಿ ಬರುತ್ತಾ ಇರುತ್ತದೆ. ಇದೀಗ ಎಚ್ ಟಿ ಸಿ ರೇಡಿಯಂಟ್ ಬರಲಿದೆ ಎಂಬ ಸುದ್ದಿ ಕೇಲಿ ಬಂದಿದೆ. ಈಗ ಈ ಮೊಬೈಲ್ ನ ಇಮೇಜ್ ನೋಡಬಹುದಾಗಿದ್ದು ಇದರ ಗುಣಲಕ್ಷಣದ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲವಾಗಿದೆ. ಆದರೂ ಈ ಮೊಬೈಲ್ ಬಗ್ಗೆ ಈ ಕೆಲವೊಂದು ವಿಷಯಗಳು ಕೇಳಿ ಬರ್ತಾ ಇದೆ.

ಈ ಎಚ್ ಟಿ ಸಿ ರೇಡಾರ್ ನೋಡಿದ ತಕ್ಷಣ ಎಚ್ ಟಿ ಸಿ ಟೈಟಾನ್ ಆಗಿರಬಹುದೇ ಎಂದು ಕ್ಷಣ ಸಂಶಯ ಬರುತ್ತದೆ. ಆದರೆ ಕೂಲಂಕಷವಾಗಿ ನೋಡಿದಾಗ ವ್ಯತ್ಯಾಸ ಕಂಡು ಬರುತ್ತದೆ. ಈ ಮೊಬೈಲ್ 4.7 ಇಂಚಿನ ಡಿಸ್ ಪ್ಲೇ ಹೊಂದಿರಬಹುದು ಎಂದು ಊಹಿಸಲಾಗುತ್ತಿದೆ. ಇದರಲ್ಲಿ ಬ್ಯಾಟರಿಯನ್ನು ಬಿಚ್ಚಲು ಸಾಧ್ಯವಿಲ್ಲ. ಇದರಲ್ಲಿ ಕ್ಯಾಮೆರಾಸಾಮರ್ಥ್ಯ 8 ಮೆಗಾ ಪಿಕ್ಸಲ್ ಇರಬಹುದೆಂದು ಊಹಿಸಲಾಗಿದೆ.

ಈ ಮೊಬೈಲ್ ಕೂಡ ಲಾಸ್ ಏಂಜಲ್ಸ್ ನಲ್ಲಿ ನಡೆಯಲಿರುವ ಗ್ರಾಹಕರ ಎಲೆಕ್ಟ್ರಾನಿಕ್ಸ್ ಶೋದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಹೇಳಲಾಗುತ್ತಿದ್ದು ಅಲ್ಲಿಯವರೆಗೆ ಕಾಯ ಬೇಕಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot