Home
ಮೊಬೈಲ್

HTC ನೀಡುತಿದೆ ಎರಡು ಸೆನ್ಸೇಶನ್ ಸ್ಮಾರ್ಟ್ ಫೋನ್

By Super
HTC ನೀಡುತಿದೆ ಎರಡು ಸೆನ್ಸೇಶನ್ ಸ್ಮಾರ್ಟ್ ಫೋನ್

ಆಂಡ್ರಾಯ್ಡ್ ಫೋನ್ ಗಳಿಗೀಗ ಬೇಡಿಕೆ ಹೆಚ್ಚು. ಈ ನಿಟ್ಟಿನಲ್ಲಿ ಎಚ್ ಟಿಸಿ ಕಂಪನಿ ಎರಡು ನೂತನ ಸ್ಮಾರ್ಟ್ ಫೋನ್ ಗಳನ್ನು ಭಾರತ, ಆಸ್ಟ್ರೇಲಿಯಾ ಮತ್ತು ಯುರೋಪ್ ಗಳಲ್ಲಿ ಬಿಡುಗಡೆ ಮಾಡಲಿದೆ. HTC ಸೆನ್ಸೇಶನ್ XE ಮತ್ತು XL ಎಂಬ ಎರಡು ಮೊಬೈಲ್ ಗಳ ಬಗ್ಗೆ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆ ಮೂಡಿದೆ.

ಸೆನ್ಸೇಶನ್ XE ಮತ್ತು XL ಮೊಬೈಲ್ ಗಳು ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು, ಎರಡೂ ಕೂಡ ಟಚ್ ಸ್ಕ್ರೀನ್ ಮೊಬೈಲ್ ಗಳಾಗಿದೆ. XE ಮೊಬೈಲ್ ಡ್ಯೂಯಲ್ ಕೋರ್ 1.5GHz MSM 8260 ಸ್ನಾಪ್ ಡ್ರಾಗನ್ ಪ್ರೊಸೆಸರ್ ಹೊಂದಿದೆ.

HTC ಸೆನ್ಸೇಶನ್ XE ಮೊಬೈಲ್:

* 4.3 ಇಂಚಿನ qHD ಡಿಸ್ಪ್ಲೇ

* 126.1 x 65.4 x 11.3 ಎಂಎಂ ಸುತ್ತಳತೆ

* ಎಲ್ ಸಿಡಿ ಟಚ್ ಸ್ಕ್ರೀನ್, 540 x 960 ಪಿಕ್ಸಲ್ ರೆಸೊಲ್ಯೂಷನ್

* 16 ಮಿಲಿಯನ್ ಬಣ್ಣ ಬೆಂಬಲಿಸುವ ಸ್ಕ್ರೀನ್

* 8 ಮೆಗಾ ಪಿಕ್ಸಲ್ ಕ್ಯಾಮೆರಾ, ಫ್ರಂಟ್ ಕ್ಯಾಮೆರಾ

* ಗ್ರಾಫಿಕ್ ಗೆಂದು ಅಡೆರ್ನೊ 220 ಗ್ರಾಫಿಕ್ ಪ್ರೊಸೆಸರ್

* 4 ಜಿಬಿ ಆಂತರಿಕ ಮೆಮೊರಿ ಮತ್ತು 768 ಎಂಬಿ RAM

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್

* GPS, HSPA, ವೈ-ಫೈ ಮತ್ತು ಸೆನ್ಸ್ UI ಇಂಟರ್ ಫೇಸ್

HTC ಸೆನ್ಸೇಶನ್ XL ಮೊಬೈಲ್:

* 4.7 ಇಂಚಿನ WVGA ಡಿಸ್ಪ್ಲೇ, ಟಚ್ ಸ್ಕ್ರೀನ್

* 132.5x70.7x9.9 ಎಂ ಎಂ ಸುತ್ತಳತೆ

* 480 x 800 ಪಿಕ್ಸಲ್ ರೆಸೊಲ್ಯೂಷನ್ ಸ್ಕ್ರೀನ್

* 16 ಜಿಬಿವರೆಗೆ ಆಂತರಿಕ ಮೆಮೊರಿ ಸಾಮರ್ಥ್ಯ

* 1.3 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ

XL ಮತ್ತು XE ಎರಡರಲ್ಲೂ ಕೂಡ ರೆಡ್ ಬೀಟ್ ಲೊಗೊ ಮತ್ತು ರೆಡ್ ಡಿಸೈನ್ ಟೋನ್ ಗಳನ್ನು ನೀಡಲಾಗಿದೆ. ಈ ಎರಡೂ ಸೆನ್ಸೇಶನ್ ಮೊಬೈಲ್ ಗಳು ಭಾರತದಲ್ಲಿ ನವಂಬರ್ ನಲ್ಲಿ ಬಿಡುಗಡೆಗೊಳ್ಳಲಿರುವುದೆಂದು ತಿಳಿದುಬಂದಿದೆ.

ಫ್ಲಿಪ್ ಕಾರ್ಟ್ ಮೂಲಕ ಸೆನ್ಸೇಶನ್ XE ಮೊಬೈಲ್ 32,400ರುಗೆ ದೊರೆಯಲಿದ್ದು, XL ಬೆಲೆ XE ಗೆ ಹೋಲಿಸಿದರೆ ಸ್ವಲ್ಪ ಹೆಚ್ಚಿರಬಹುದೆಂದು ಅಂದಾಜಿಸಲಾಗಿದೆ. ಈ ಮೊಬೈಲ್ ಗಳ ಆಪರೇಟಿಂಗ್ ಸಿಸ್ಟಮನ್ನು 2012 ರ ವೇಳೆಗೆ ಪರಿಷ್ಕ್ರತಗೊಳಿಸಲಿದ್ದು, XL ಮೊಬೈಲ್ ಕೂಡ ಐಸ್ ಕ್ರೀ ಸ್ಯಾಂಡ್ ವಿಚ್ ಆಪರೇಟಿಂಗ್ ಸಿಸ್ಟಮ್ ಗೆ ಪರಿಷ್ಕ್ರತಗೊಳ್ಳಲಿದೆ ಎಂದು ತಿಳಿದುಬಂದಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+