Home
ಮೊಬೈಲ್

ಪೈಪೋಟಿಯಲ್ಲಿದೆ ಎರಡು ಎಚ್ ಟಿಸಿ ಮೊಬೈಲ್

By Super
ಪೈಪೋಟಿಯಲ್ಲಿದೆ ಎರಡು ಎಚ್ ಟಿಸಿ ಮೊಬೈಲ್

ಎಚ್ ಟಿಸಿ ಕಂಪನಿಯ ಎಚ್ ಟಿಸಿ ಸೆನ್ಸೇಶನ್ XL ಮತ್ತು ಎಚ್ ಟಿಸಿ ಟೈಟಾನ್ ಮೊಬೈಲ್ ಗಳು ಭಾರೀ ಮಾರಾಟವಾಗುವ ನಿರೀಕ್ಷೆಯಿದೆ.

ಎರಡೂ ಹ್ಯಾಂಡ್ ಸೆಟ್ ಗಳು ಒಳ್ಳೆಯ ಆಯ್ಕೆಗಳನ್ನು ಪಡೆದುಕೊಂಡಿದೆ. ಆದರೆ ಇವುಗಳಲ್ಲಿ ನಿಮಗ್ಯಾವುದಿಷ್ಟ ಎಂದು ನೀವು ನಿರ್ಧರಿಸಬೇಕಷ್ಟೆ. ಈ ಎರಡೂ ಮೊಬೈಲ್ ಗಳ ಗುಣ ಲಕ್ಷಣಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು ಯಾವುದನ್ನು ಕೊಂಡುಕೊಳ್ಳಬಹುದು ಎಂದು ನೀವೇ ನಿರ್ಧರಿಸಿ.

HTC ಸೆನ್ಸೇಶನ್ XL ಮೊಬೈಲ್:

HTC ಸೆನ್ಸೇಶನ್ XL ಮೊಬೈಲ್ ಆಂಡ್ರಾಯ್ಡ್ v2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಮತ್ತು ಕ್ವಾಲ್ಕಂ 8255 ಚಿಪ್ ಸೆಟ್, 1.5 GHz ಸ್ಕಾರ್ಪಿಯನ್ ಪ್ರೊಸೆಸರ್ ಮತ್ತು 768 ಎಂಬಿ RAM ಹೊಂದಿದೆ. ಗ್ರಾಫಿಕ್ ಬೆಂಬಲಕ್ಕೆಂದು ಅಡೆರ್ನೊ ಗ್ರಾಫಿಕ್ ಪ್ರೊಸೆಸಿಂಗ್ ಯುನಿಟ್ ಪಡೆದುಕೊಂಡಿದೆ.

* GSM ಹ್ಯಾಂಡ್ ಸೆಟ್

* 132.5 x 70.7 x 9.9 ಎಂಎಂ ಸುತ್ತಳತೆ

* 162.5 ಗ್ರಾಂ ತೂಕ

* 4.7 ಇಂಚಿನ S-LCD ಮಲ್ಟಿ ಟಚ್ ಸ್ಕ್ರೀನ್, 480 x 800 ಪಿಕ್ಸಲ್ ರೆಸೊಲ್ಯೂಷನ್

* HTC ಸೆನ್ಸ್ ಯೂಸರ್ ಇಂಟರ್ ಫೇಸ್, 3.5 ಯೂಸರ್ ಇಂಟರ್ ಫೇಸ್

* 3.5 ಎಂಎಂ ಆಡಿಯೋ ಜ್ಯಾಕ್

* 16 ಜಿಬಿ ಆಂತರಿಕ ಮೆಮೊರಿ

* DLNA ಮತ್ತು ವೈ-ಫೈ ಹಾಟ್ ಸ್ಪಾಟ್ ಜೊತೆ ವೈ-ಫೈ ಸಂಪರ್ಕ

* A2DP ಜೊತೆ ಬ್ಲೂಟೂಥ್ v3.0, ಮೈಕ್ರೊUSB v2.0

* ಡ್ಯೂಯಲ್ LED ಫ್ಲಾಶ್ 8 ಮೆಗಾ ಪಿಕ್ಸಲ್ ಕ್ಯಾಮೆರಾ

* 1.3 ಮೆಗಾ ಪಿಕ್ಸಲ್ ಸೆಕೆಂಡರಿ ಕ್ಯಾಮೆರಾ

1600 mAh Li ion ಬ್ಯಾಟರಿ ಹೊಂದಿರುವ ಈ ಮೊಬೈಲ್ 2ಜಿನಲ್ಲಿ 11 ಗಂಟೆ 50 ನಿಮಿಷ ಟಾಕ್ ಟೈಂ ಮತ್ತು 3ಜಿನಲ್ಲಿ 6 ಗಂಟೆ 50 ನಿಮಿಷ ಟಾಕ್ ಟೈಂ ನೀಡುತ್ತದೆ.

HTC ಟೈಟಾನ್ ಮೊಬೈಲ್:

ಎಚ್ ಟಿಸಿ ಟೈಟಾನ್ ಮೊಬೈಲ್ ಮೈಕ್ರೊಸಾಫ್ಟ್ ವಿಂಡೋಸ್ ಫೋನ್ 7.5 ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದೆ. ಕ್ವಾಲ್ಕಂ 8255 ಚಿಪ್ ಸೆಟ್ ಜೊತೆ 1.5 GHz ವೇಗದ ಸ್ಕಾರ್ಪಿಯನ್ ಪ್ರೊಸೆಸರ್ ಮತ್ತು 512 ಎಂಬಿ RAM ಹಾಗೂ ಅಡೆರ್ನೊ ಗ್ರಾಫಿಕ್ಸ್ ಪ್ರೊಸೆಸಿಂಗ್ ಕೂಡ ಇದರಲ್ಲಿದೆ.

* GSM ಹ್ಯಾಂಡ್ ಸೆಟ್

* 131.5 x 70.7 x 9.9 ಎಂಎಂ ಸುತ್ತಳತೆ

* 160 ಗ್ರಾಂ ತೂಕ

* 4.7 ಇಂಚಿನ S-LCD ಮಲ್ಟಿ ಟಚ್ ಸ್ಕ್ರೀನ್ ಡಿಸ್ಪ್ಲೇ, 480 x 800 ಪಿಕ್ಸಲ್ ರೆಸೊಲ್ಯೂಷನ್

* ಡಾಬ್ಲಿ ಮೊಬೈಲ್ ಮತ್ತು SRS ಸೌಂಡ್ ಎನಾನ್ಸ್ ಮೆಂಟ್

* 16 ಜಿಬಿ ಮೆಮೊರಿ

* 3.5 ಎಂಎಂ ಆಡಿಯೋ ಜ್ಯಾಕ್

* DLNA ಜೊತೆ ವೈ-ಫೈ ಸಂಪರ್ಕ

* ಮೈಕ್ರೊ USB v2.0, ಬ್ಲೂಟೂಥ್ v2.1

* LED ಫ್ಲಾಶ್ 8 ಮೆಗಾ ಪಿಕ್ಸಲ್ ಕ್ಯಾಮೆರಾ, ಆಟೊ ಫೋಕಸ್, 3264 x 2448 ಪಿಕ್ಸಲ್ ರೆಸೊಲ್ಯೂಷನ್

* 1.3 ಮೆಗಾ ಪಿಕ್ಸಲ್ ಸೆಕೆಂಡರಿ ಕ್ಯಾಮೆರಾ

ಎರಡೂ ಮೊಬೈಲ್ ಗಳಲ್ಲಿ ಅಕ್ಸೆಲೆರೊಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್, ಕಾಂಪಾಸ್, ಗೈರೊ ಸೆನ್ಸಾರ್ ಅಳವಡಿಸಲಾಗಿದೆ. ಹಾಗೆಯೇ ಎರಡೂ ಮೊಬೈಲ್ ಗಳಲ್ಲಿ GPRS ಮತ್ತು EDGE ಸಂಪರ್ಕ, 3ಜಿ ಸಂಪರ್ಕ ನೀಡಲಾಗಿದೆ. ಜೊತೆಗೆ A-GPS GPS ಬೆಂಬಲಿತವಾಗಿವೆ.

ಸೆನ್ಸೆಶನ್ ಮೊಬೈಲ್ ಬಿಳಿ ಬಣ್ಣದಲ್ಲಿ ಲಭ್ಯವಿದ್ದರೆ, ಟೈಟಾನ್ ಮೊಬೈಲ್ ಕಪ್ಪು ಬಣ್ಣದಲ್ಲಿ ಲಭ್ಯವಾಗಲಿದೆ. ಸೆನ್ಸೇಶನ್ ಮೊಬೈಲ್ ಭಾರತದಲ್ಲಿ 35,000ರೂಗಿಂತ ಹೆಚ್ಚು ಬೆಲೆ ಎನ್ನಲಾಗಿದ್ದು, ಟೈಟಾನ್ ಮೊಬೈಲ್ ಬೆಲೆ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಆದರೆ ಟೈಟಾನ್ ಮೊಬೈಲ್ ಸೆನ್ಸೇಶನ್ ಗಿಂತ ಹೆಚ್ಚಿರಬಹುದೆಂದು ಅಂದಾಜಿಸಲಾಗಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+