ಎಚ್ ಟಿಸಿ ನೀಡಲಿದೆ ಬೋಲ್ಡ್ ಲುಕ್ ಸ್ಮಾರ್ಟ್ ಫೋನ್

Posted By: Staff
ಎಚ್ ಟಿಸಿ ನೀಡಲಿದೆ ಬೋಲ್ಡ್ ಲುಕ್ ಸ್ಮಾರ್ಟ್ ಫೋನ್

ಎಚ್ ಟಿಸಿ ಕಂಪನಿ ಎಚ್ ಟಿಸಿ ಸ್ನ್ಯಾಪ್ ಎಂಬ ಫೋನನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. ಬ್ಲ್ಯಾಕ್ ಬೆರಿ ಕರ್ವ್ ಮಾದರಿಯಂತೆಯೇ ಅನೇಕ ಶೈಲಿಯನ್ನು ಒಳಗೊಂಡಿರುವ ಎಚ್ ಟಿಸಿ ಸ್ನ್ಯಾಪ್ ವಿಂಡೋಸ್ ಸ್ಮಾರ್ಟ್ ಫೋನ್ ಒಳ್ಳೆ ಗುಣಮಟ್ಟದ ಸ್ಕ್ರೀನ್, ಬಳಕೆದಾರರಿಗೆ ಅನುಕೂಲವಾಗುವಂತಹ ಕೀಬೋರ್ಡ್, GPS ಮತ್ತು HSDPA ಬೆಂಬಲಿತವಾಗಿದೆ.

ವಿನ್ಯಾಸದ ಬಗ್ಗೆ ಹೇಳುವುದಾದರೆ ಮೇಲ್ನೋಟಕ್ಕೆ ಬ್ಲ್ಯಾಕ್ ಬೆರಿ ಕರ್ವ್ ಮಾದರಿಯನ್ನು ಹೋಲುತ್ತದೆ. ಮೊಬೈಲಿನಲ್ಲಿ ಮೆಟಾಲಿಕ್ ಸ್ಟ್ರಿಪ್ ಜೊತೆ ಟ್ರ್ಯಾಕ್ ಬಾಲ್ ಮತ್ತು ಇನ್ನಿತರ ಆರು ಬಟನ್ ಗಳನ್ನು ನೀಡಲಾಗಿದೆ.

2.4 ಇಂಚಿನ ಡಿಸ್ಪ್ಲೇ ಮತ್ತು 120 ಗ್ರಾಂ ತೂಕವನ್ನು ಹೊಂದಿರುವ ಈ ಮೊಬೈಲ್ ತುಂಬಾ ಕಂಫರ್ಟೆಬಲ್ ಎನಿಸುತ್ತದೆ.  HTC ಸ್ನ್ಯಾಪ್ ವಿಂಡೋಸ್ ಫೋನ್ 6.1 ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದ್ದು,  ಕ್ವಾಲ್ಕಂ 528MHz MSM 7225 ಪ್ರೊಸೆಸರ್ ಪಡೆದುಕೊಂಡಿದೆ. ಇದರಲ್ಲಿ 192 ಎಂಬಿ RAM ಸಾಮರ್ಥ್ಯವನ್ನು ಅಳವಡಿಸಿದ್ದು, ಕೀ ಬೋರ್ಡ್ ಬೆಂಬಲಿತವಾಗಿದೆ.

ಮೊಬೈಲಿನಲ್ಲಿ ಇನ್ನೊಂದು ಅಪ್ಲಿಕೇಶನ್ ಕಾರ್ಯ ನಿರ್ವಹಿಸುತ್ತಿದ್ದರೂ ಮತ್ತೊಂದು ಕೆಲಸವನ್ನೂ ಸರಾಗವಾಗಿ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.  HTC ಕಂಪನಿ ತನ್ನ ಸ್ನ್ಯಾಪ್ ಮೊಬೈಲ್ ಗೆಂದೇ ವಿಶೇಷ ಆಯ್ಕೆಗಳನ್ನು ಸಿದ್ಧಪಡಿಸಿದಂತಿದೆ. ಇದರಲ್ಲಿರುವ ಇನ್ನರ್ ಸರ್ಕಲ್ ಸಾಫ್ಟ್ ವೇರ್ ನಿಂದ ನಿಮಗೆ ತುಂಬಾ ಪ್ರಮುಖವೆನಿಸಿದ ಸಂಪರ್ಕದಿಂದ ಮೆಸೇಜ್ ಬಂದರೆ ತಕ್ಷಣವೇ ಮಾಹಿತಿಯನ್ನು ನೀವು ತಿಳಿಯಬಹುದು. ಮುಂಚಿತವಾಗಿಯೇ ತುಂಬಾ ಪ್ರಮುಖವಾದ ಸಂಪರ್ಕಗಳನ್ನು ಇದರಲ್ಲಿ ಶೇಖರಿಸಿದರೆ ಸಾಕು.

ಸ್ನ್ಯಾಪ್ ಮೊಬೈಲ್  7.2 Mbps ವೇಗದಲ್ಲಿ 3ಜಿಯೊಂದಿಗೆ ಕ್ವಾಡ್ ಬ್ಯಾಂಡ್ GSM ಬೆಂಬಲವೂ ಸಾಧ್ಯವಿದೆ. 2.0 ಮೆಗಾ ಪಿಕ್ಸಲ್ ಕ್ಯಾಮೆರಾವನ್ನು ಮೊಬೈಲ್ ನಲ್ಲಿ ಅಳವಡಿಸಲಾಗಿದೆ. ಈ ಮೊಬೈಲ್ ಭಾರತದಲ್ಲಿ ಸುಮಾರು 22,000 ರು ಗೆ ದೊರೆಯುವ ಅಂದಾಜಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot