Home
ಮೊಬೈಲ್

ಕ್ಲಾಸಿ ಲುಕ್ ಟಚ್ ಪ್ರೊ ಮೊಬೈಲಿಗೆ ಸರಿಸಾಟಿ ಯಾವುದು?

By Super
ಕ್ಲಾಸಿ ಲುಕ್ ಟಚ್ ಪ್ರೊ ಮೊಬೈಲಿಗೆ ಸರಿಸಾಟಿ ಯಾವುದು?

ಎಚ್ ಟಿಸಿ ಮತ್ತು ವಿಂಡೋಸ್ ಕಂಪನಿ ಉದ್ಯಮಿಗಳಿಗೆ ಕೆಲಸವನ್ನು ಸರಾಗವಾಗಿ ಮಾಡಲು ಅನುವು ಮಾಡಿಕೊಡುತ್ತೆ. ಹೇಗೆ ಎಂದಿರಾ? ಕ್ಲಾಸಿ ಲುಕ್ ಜೊತೆ ಅತ್ಯುನ್ನತ ಇಂಟರ್ನೆಟ್ ಸಂಪರ್ಕ, ಅತ್ಯುತ್ತಮ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಮೊಬೈಲ್ ಗಳನ್ನು ನೀಡುವ ಮೂಲಕ.

ಉದ್ಯಮಿಗಳ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಎಚ್ ಟಿಸಿ ಕಂಪನಿ ಎಚ್ ಟಿಸಿ ಟಚ್ ಪ್ರೊ 2 ಎಂಬ ಹ್ಯಾಂಡ್ ಸೆಟ್ ಬಿಡುಗಡೆ ಮಾಡಲು ನಿರ್ಧರಿಸಿದೆ.

178.5 ಗ್ರಾಂ ತೂಕ, 3.6 ಇಂಚಿನ ಡಿಸ್ಪ್ಲೇ , TFT 65k color ಟಚ್ ಸ್ಕ್ರೀನ್ ಹೊಂದಿದ್ದು, 480 x 800 ಪಿಕ್ಸಲ್ ರೆಸೊಲ್ಯೂಷನ್ ಪಡೆದುಕೊಂಡಿದೆ. ಕ್ವೆರ್ಟಿ ಕೀ ಪ್ಯಾಡ್ ಹೊಂದಿರುವುದು ಇನ್ನೊಂದು ವಿಶೇಷತೆಯೆನಿಸಿದೆ.

ಈ ಮೊಬೈಲಿನಲ್ಲಿ GSM Touch Pro2 is HSDPA 3ಜಿ ಸಂಪರ್ಕದೊಂದಿಗೆ ವಿನೂತನ TouchFLO 3D ಫಿಂಗರ್ ಸ್ವೈಪ್ ನೇವಿಗೇಶನ್ ಕೂಡ ಇದೆ. ಇಷ್ಟೇ ಅಲ್ಲ, ಅತ್ಯಾಧುನಿಕವೆನಿಸಿದ ಹ್ಯಾಂಡ್ ರೈಟಿಂಗ್ ರೆಕಾಗ್ನಿಶನ್, ಟಚ್ ಸೆನ್ಸಿಟಿವಿಟಿ ಝೂಮ್ ಬಾರ್, ಮತ್ತು ಅಕ್ಸೆಲೆರೋಮೀಟರ್ ಸೆನ್ಸಾರ್ ಈ ಮೊಬೈಲಿನಲ್ಲಿದೆ.

3.5 ಎಂಎಂ ಆಡಿಯೋ ಜ್ಯಾಕ್ ಪಡೆದುಕೊಂಡಿರುವ ಈ ಮೊಬೈಲ್ ಎಲ್ಲಾ ಸ್ಪೀಕರ್ ಮತ್ತು ಮೈಕ್ರೋಫೋನ್ ಸಾಧನಕ್ಕೆ ಸಂಪರ್ಕ ಕಲ್ಪಿಸಲು ಸಾಧ್ಯವೆನಿಸಲಿದೆ. ಮೊಬೈಲಿನಲ್ಲಿ 288ಎಂಬಿ RAM ಸಾಮರ್ಥ್ಯ ಒದಗಿಸಲಾಗಿದ್ದು, 3ಜಿ ಸಂಪರ್ಕದ ಹೊರತಾಗಿ Pro2 ಮೊಬೈಲ್ GPRS ಮತ್ತು EDGE ಸಂಪರ್ಕವನ್ನು ಬೆಂಬಲಿಸುತ್ತದೆ. ವೈ-ಫೈ ಮತ್ತು v2.1 A2DP ಬ್ಲೂಟೂಥ್, USB ಪೋರ್ಟ್ ನೊಂದಿಗೆ ಮಿನಿ USB ಆಯಾಮ ಇದರಲ್ಲಿದೆ.

3.2 ಮೆಗಾ ಪಿಕ್ಸಲ್ ಕ್ಯಾಮೆರಾ, 2048 x 1536 ಪಿಕ್ಸಲ್ ರೆಸೊಲ್ಯೂಷನ್ ಪಡೆದುಕೊಂಡಿರುವ ಈ ಮೊಬೈಲಿನಲ್ಲಿ VGA ಫ್ರಂಟ್ ಕ್ಯಾಮೆರಾ ಕೂಡ ಇದ್ದು ವಿಡಿಯೋ ರೆಕಾರ್ಡಿಂಗ್ ಗೆ ಅನುವು ಮಾಡಿಕೊಡಲಿದೆ.

ವಿಂಡೋಸ್ 6.1 ಆಪರೇಟಿಂಗ್ ಸಿಸ್ಟಮನ್ನು 6.5 ಆಯಾಮಕ್ಕೆ ಪರಿಷ್ಕ್ರತಗೊಳಿಸಿಕೊಳ್ಳಲೂ ಸಾಧ್ಯವಿದೆ. ಗ್ರಾಫಿಕ್ ಸಹಾಯಕ್ಕೆಂದು ಅಡೆರ್ನೊ 130 GPU ಮತ್ತು 528 MHz ARM 11 ಪ್ರೊಸೆಸರ್ ಇದೆ. HTML ಬ್ರೌಸರ್ ನೊಂದಿಗೆ TV Out ಮತ್ತು MIDP 2.0 ಜಾವಾ ಪ್ಲಾಟ್ ಫಾರ್ಮನ್ನು ಮೊಬೈಲ್ ಹೊಂದಿದೆ. ಇದರಲ್ಲಿರುವ ಪಾಕೆಟ್ ಆಫೀಸ್ ನಿಂದ ಕೆಲಸಗಳ ಸುಲಭ ನಿರ್ವಹಣೆ ಸಾಧ್ಯವಿದೆ. ಅತ್ಯುನ್ನತ ಲೀಥಿಯಂ ಐಯಾನ್ 1500 mAh ಬ್ಯಾಟರಿಯನ್ನು ಮೊಬೈಲ್ ಪಡೆದುಕೊಂಡಿದೆ.

ಮೊಬೈಲಿನೊಂದಿಗೆ ನೀಡುವ ಮೈಕ್ರೊಫೋನ್ ನಾಯ್ಸ್ ಕ್ಯಾನ್ಸಲಿಂಗ್ ಸಾಮರ್ಥ್ಯ ಇದೆ. HTC ಟಚ್ ಪ್ರೊ2 ಮೊಬೈಲ್ ಭಾರತದಲ್ಲಿ ಸುಮಾರು 20,000 ದಿಂದ 30,000ರು ದರದಲ್ಲಿ ದೊರೆಯುವ ನಿರೀಕ್ಷೆಯಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+