ಭಾರತದಲ್ಲಿ ಇಂದಿನಿಂದ 'ಹೆಚ್‌ಟಿಸಿ U11+' ಸ್ಮಾರ್ಟ್‌ಫೋನ್ ಮಾರಾಟ ಶುರು!!
ವಿಶ್ವದ ಅತ್ಯುನ್ನತ ತಂತ್ರಜ್ಞಾನ ಮತ್ತು ಫೀಚರ್ಸ್‌ಗಳಿಂದ ಮೊಬೈಲ್ ಅನ್ನು ತಯಾರಿಸಲಾಗಿದೆ ಎನ್ನುವಂತಿರುವ ಹೆಚ್‌ಟಿಸಿ U11+ ಒಂದು ಅಸಾಧಾರಣ ಸ್ಮಾರ್ಟ್‌ಫೋನ್ ಆಗಿದೆ.!!
ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ಆಪಲ್ 10 ಮತ್ತು ಗೂಗಲ್ ಪಿಕ್ಸೆಲ್ 2 ಸ್ಮಾರ್ಟ್‌ಪೋನ್‌ಗಳಿಗೆ ಸೆಡ್ಡುಹೊಡೆಯುತ್ತಿರುವ ಮತ್ತೊಂದು ಸ್ಮಾರ್ಟ್‌ಫೋನ್ ಭಾರತದಲ್ಲಿಂದು ಬಿಡುಗಡೆಯಾಗಿದೆ.! ಹೆಚ್ಚು ಚಿರಪರಿಚಿತವಾದ ಹೈ ಎಂಡ್ ಸ್ಮಾರ್ಟ್‌ಫೋನ್ ಹೆಚ್‌ಟಿಸಿ U11+ (HTC U11+) ಇಂದಿನಿಂದಲೇ ಮಾರಾಟಕ್ಕಿದೆ.!!
ವಿಶ್ವದ ಅತ್ಯುನ್ನತ ತಂತ್ರಜ್ಞಾನ ಮತ್ತು ಫೀಚರ್ಸ್‌ಗಳಿಂದ ಮೊಬೈಲ್ ಅನ್ನು ತಯಾರಿಸಲಾಗಿದೆ ಎನ್ನುವಂತಿರುವ ಹೆಚ್‌ಟಿಸಿ U11+ ಒಂದು ಅಸಾಧಾರಣ ಸ್ಮಾರ್ಟ್‌ಫೋನ್ ಆಗಿದ್ದು, ಪ್ರಸ್ತುತ ಖರೀದಿಸಲು ಇರುವ ವಿಶ್ವದ ಟಾಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಕೂಡ ಎಂದು ಟೆಕ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.!!

6 ಇಂಚ್ ಡಿಸ್‌ಪ್ಲೇ, ಸ್ನ್ಯಾಪ್ಡ್ರಾಗನ್ 835 ಪ್ರೊಸೆಸರ್ ಹಾಗೂ 6GB ನಂತಹ ಫೀಚರ್ಸ್ ಹೊಂದಿರುವ ಹೆಚ್‌ಟಿಸಿ U11+ ಸ್ಮಾರ್ಟ್‌ಪೋನಿನ ಇತರೆ ಫೀಚರ್ಸ್‌ಗಳೇನು? ಸ್ಮಾರ್ಟ್‌ಫೋನ್ ವಿಶೇಷತೆಗಳೆನು? ಭಾರತದಲ್ಲಿ ಫೋನಿನ ಬೆಲೆ ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!!
ಮೊದಲೇ ಹೇಳಿದಂತೆ ಹೈ ಎಂಡ್ ಸ್ಮಾರ್ಟ್‌ಫೋನ್ ಹೆಚ್‌ಟಿಸಿ U11+ 18:9 ಅನುಪಾತದ 6 ಇಂಚಿನ ಸೂಪರ್ ಎಲ್‌ಸಿಡಿ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ.! ಗೋರಿಲ್ಲಾ ಗ್ಲಾಸ್ 5 ಇರುವ ಫೋನ್ ಬಹಳ ಕಡಿಮೆ ಬೆಜೆಲ್ ಹೊಂದಿರುವ ಸ್ಲಿಮ್ ಸ್ಮಾರ್ಟ್‌ಫೋನ್ ಆಗಿದೆ.

ಪ್ರೊಸೆಸರ್ ಮತ್ತು ಒಎಸ್!!
ಪ್ರಸ್ತುತ ಬೆಸ್ಟ್ ಸ್ಮಾರ್ಟ್‌ಪೋನ್ ಪ್ರೊಸೆಸರ್ ಎಂಬ ಹೆಗ್ಗಳಿಕೆ ಪಡೆದಿರುವ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 835 ಪ್ರೊಸೆಸರ್ ಅನ್ನು ಹೆಚ್‌ಟಿಸಿ U11+ ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಹೆಚ್‌ಟಿಸಿ ಸೆನ್ಸ್ ಹಾಗೂ ಆಂಡ್ರಾಯ್ಡ್ ಓರಿಯೋ ಮೂಲಕ ಈ ಫೋನ್ ಕಾರ್ಯನಿರ್ವಹಿಸಲಿದೆ.!!

RAM ಮತ್ತು ಮೆಮೊರಿ!!
6GB RAM ಮತ್ತು 128GB ಆಂತರಿಕ ಮೆಮೊರಿಯನ್ನು ಹೆಚ್‌ಟಿಸಿ U11+ ಸ್ಮಾರ್ಟ್‌ಪೋನಿನಲ್ಲಿ ನೀಡಲಾಗಿದೆ. ಇನ್ನು ಎಸ್‌ಡಿ ಕಾರ್ಡ್ ಸಹಾಯದಿಂದ ಸ್ಮಾರ್ಟ್ಫೋನ್ ಮೆಮೊರಿಯನ್ನು 2TB ವರೆಗೂ ಹೆಚ್ಚಿಸಿಕೊಳ್ಳಬಹುದಾದ ಆಯ್ಕೆ ಇರುವುದು ಸ್ಮಾರ್ಟ್‌ಪೋನಿನ ಅತ್ಯಂತ ಪ್ರಮುಖ ವಿಶೇಷತೆಯಾಗಿದೆ.!!

ಕ್ಯಾಮೆರಾ ಹೇಗಿದೆ?
ಹೆಚ್‌ಟಿಸಿ U11+ ಸ್ಮಾರ್ಟ್‌ಫೋನ್ 12MP ರಿಯರ್ ಹಾಗೂ 8MP ಸೆಲ್ಫಿ ಕ್ಯಾಮರಾಗಳನ್ನು ಹೊಂದಿದೆ. ಹೈ ಎಂಡ್ ಸ್ಮಾರ್ಟ್‌ಫೋನ್ ಆದರೂ ಹೆಚ್ಚು ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳದ ಈ ಸ್ಮಾರ್ಟ್‌ಫೋನ್ ಕ್ಯಾಮೆರಾದಲ್ಲಿ ಭಾರಿ ಮುಂದುವರೆದಿರುವ ತಂತ್ರಜ್ಞಾನಗಳನ್ನು ಹೊಂದಿರುವುದಾಗಿ ಕಂಪೆನಿ ಹೇಳಿಕೊಂಡಿದೆ.!!

ಬ್ಯಾಟರಿ ಮತ್ತು ಇತರೆ ಫೀಚರ್ಸ್?
3930mAH ಬ್ಯಾಟರಿ ಶಕ್ತಿ ಹೊಂದಿರುವ ಈ ಫೋನ್ IP68 ಧೂಳು / ನೀರಿನ ಪ್ರತಿರೋಧಕವಾಗಿದೆ. ಎಡ್ಜ್ ಸೆನ್ಸ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಆಧಾರಿತ ಹೆಚ್‌ಟಿಸಿ ಯು ಸೋನಿಕ್ ಸೌಂಡ್, ಹಾಗೂ ಇನ್ನಿತರ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸ್ಮಾರ್ಟ್‌ಫೋನ್ ಹೊಂದಿದೆ.!!

ಹೆಚ್‌ಟಿಸಿ U11+ ಬೆಲೆ ಎಷ್ಟು?
ಭಾರತದಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ಮಾರಾಟಕ್ಕಿರುವ ಹೆಚ್‌ಟಿಸಿ U11+ ಸ್ಮಾರ್ಟ್‌ಪೋನ್ ಅಮೆಜಿಂಗ್ ಸಿಲ್ವರ್ ಬಣ್ಣದಲ್ಲಿ ಮಾತ್ರ ಲಭ್ಯವಿದೆ. ಇಷ್ಟೆಲ್ಲಾ ಹೈ ಎಂಡ್ ಫೀಚರ್ಸ್ ಹೊಂದಿರುವ ಈ ಫೋನ್ ಖರೀದಿಸಲು 56,990ರೂ. ವೆಚ್ಚಮಾಡಬೇಕು.!!

ಸಾಫ್ಟ್‌ವೇರ್ ಅಪ್‌ಡೇಟ್ ನಂತರ ಆಂಡ್ರಾಯ್ಡ್ ಫೋನ್ ವೇಗ ಹೆಚ್ಚಿಸುವುದು ಹೇಗೆ?
ಸ್ಮಾರ್ಟ್‌ಪೋನ್‌ಗಳನ್ನು ಪದೇ ಪದೇ ಅಪ್‌ಡೇಟ್ ಮಾಡುವುದು ಫೋನ್ ಬಳಕೆದಾರರ ಅತ್ಯಂತ ಬಹುಮುಖ್ಯ ಕಾರ್ಯಗಳಲ್ಲಿ ಒಂದು.! ಕನಿಷ್ಟ ತಿಂಗಳಿಗೊಮ್ಮೆ ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡುವುದರಿಂದ ಬಳಕೆದಾರರಿಗೆ ಹೊಸಹೊಸ ಸೇವೆಗಳ ಜೊತೆಯಲ್ಲಿಯೇ ಸುರಕ್ಷತೆಯೂ ದೊರೆಯುವುದರಿಂದ ಇದು ಅತ್ಯಗತ್ಯ ಕಾರ್ಯ ಕೂಡ ಹೌದು.!!
ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳುವುದೇನೋ ಉತ್ತಮವೇ ಆದರೆ, ಫೋನ್ ಅಪ್‌ಡೇಟ್ ಮಾಡಿಕೊಳ್ಳವುದರಿಂದಲೇ ಅದರಿಂದಲೇ ಸಮಸ್ಯೆಯನ್ನು ಎದುರಿಸಿದರೆ?.. ಹೌದು, ಫೋನ್ ಅಪ್‌ಡೇಟ್ ಮಾಡಿಕೊಂಡ ನಂತರ ನಾವು ಮಾಡುವ ಸಣ್ಣ ತಪ್ಪುಗಳು ಸ್ಮಾರ್ಟ್‌ಫೋನ್‌ಗಳು ನಿಧಾನವಾಗುವಂತೆ ಮಾಡುತ್ತವೆ.!
ಫೋನ್ ಅಪ್‌ಡೇಟ್ ಮೂಲಕ ಹೊಸಹೊಸ ಸೇವೆಗಳ ಜೊತೆಯಲ್ಲಿಯೇ ಸುರಕ್ಷತೆ ಸಿಕ್ಕಿದರೂ ತೊಂದರೆ ಕೂಡ ಎದುರಾಗುತ್ತದೆ.! ಹಾಗಾದರೆ, ಸ್ಮಾರ್ಟ್‌ಪೋನ್ ಅಪ್‌ಡೇಟ್ ಮಾಡುವ ಮುನ್ನ ನಾವು ಅನುಸರಿಸಬೇಕಾದ ಕಾರ್ಯಗಳು ಮತ್ತು ಅಪ್‌ಡೇಟ್ ನಂತರ ಮಾಡಬೇಕಾದ ಕಾರ್ಯಗಳು ಯಾವುವು ಎಂಬುದನ್ನು ತಿಳಿಯಿರಿ.!!

ಕ್ಲೀನ್ ಇನ್‌ಸ್ಟಾಲ್ ಮಾಡಿ!!
ಎಲ್ಲಾ ಮೊಬೈಲ್ ಕಂಪೆನಿಗಳು ಒಂದೆ ಕ್ಲಿಕ್‌ನಲ್ಲಿ ಹೊಸ ಆಪರೇಟಿಂಗ್ ಸಿಸ್ಟಂಗೆ ಅಪ್‌ಗ್ರೇಡ್ ಮಾಡಲು ಸೂಚಿಸುತ್ತವೆ. ಹಾಗಾಗಿ, ಮೊಬೈಲ್ ಅಪ್‌ಡೇಟ್ ಮಾಡುವ ಮುನ್ನ ನಿಮ್ಮೆಲ್ಲಾ ಮೊಬೈಲ್ ಡೇಟಾ ಖಾಲಿ ಮಾಡಿ ಅಪ್‌ಡೇಟ್ ಮಾಡಿ.! ಮೊಬೈಲ್ ಅನ್ನು ಹಾಗೆಯೇ ಅಪ್‌ಡೇಟ್ ಮಾಡಿದರೆ ಒಎಸ್ ಕ್ರಾಶ್ ಆಗುವ ಸಂಭವ ಹೆಚ್ಚಿರುತ್ತದೆ.!!

ಮೆಮೊರಿ ಬಗ್ಗೆ ಗಮನವಿರಲಿ!!
16GB, 32GB ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಇಂದು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB ಮೆಮೊರಿ ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ ಹೆಚ್ಚು ಸ್ಟೋರೇಜ್‌ನಿಂದಾಗಿ ಸ್ಮಾರ್ಟ್‌ಫೋನ್‌ಗಳು ನಿಧಾನವಾಗುತ್ತವೆ.! ಹಾಗಾಗಿ, ಮೆಮೊರಿ ಇರುವ ಅರ್ಧಕ್ಕಿಂತ ಕಡಿಮೆ ಸ್ಟೋರೇಜ್ ಇರಲಿ.!!

ಆನ್‌ಲೈನ್ ಸೇವೆ ಬಳಸಿಕೊಳ್ಳಿ.!!
ಯಾವುದೇ ಡಾಕ್ಯುಮೆಂಟ್ ಮತ್ತು ಇನ್ನಿತರ ಫೈಲ್‌ಗಳನ್ನು ಗೂಗಲ್ ಡ್ರೈವ್‌ನಂತಹ ಆನ್‌ಲೈನ್ ಸ್ಟೋರೇಜ್‌ನಲ್ಲಿ ಸೇವ್ ಮಾಡಿಕೊಳ್ಳಬಹುದು.ಇನ್ನು ಫೋಟೊಗಳು ಹೆಚ್ಚಿದ್ದಷ್ಟು ಫೋನ್ ನಿಧಾನವಾಗುವ ಸಾಧ್ಯತೆ ಇದ್ದು, ಫೋಟೊ ಲೈಬ್ರೆರಿಯನ್ನು ಗೂಗಲ್ ಫೋಟೊಸ್‌ನಂಥ ತಾಣಗಳಿಗೆ ಮೂವ್ ಮಾಡುವ ಮೂಲಕ ಮೆಮೊರಿ ಸಾಮರ್ಥ್ಯ ಹೆಚ್ಚಿಸಬಹುದು.!!

ಕ್ಲೀನಿಂಗ್ ಅಪ್ ಮಾಡಿ!!
ದೀರ್ಘ ಅವಧಿಯಲ್ಲಿ ಕೆಲವು ಅನವಶ್ಯಕ ಫೈಲ್‌ಗಳು ಫೋನ್ ಮೆಮೊರಿಯಲ್ಲಿ ಸಂಗ್ರಹಗೊಂಡು ಮೊಬೈಲ್‌ನ ವೇಗ ಕುಂಠಿತವಾಗುತ್ತದೆ. ಹಾಗಾಗಿ, ಫೋನ್‌ನಲ್ಲಿರುವ ಅನವಶ್ಯಕ ಫೈಲ್‌ಗಳನ್ನು ಡಿಲೀಟ್ ಮಾಡಿ ಫೋನ್ ವೇಗ ಹೆಚ್ಚಿಸಿ.! ಫೋನ್ ಸೆಟ್ಟಿಂಗ್ಸ್ ತೆರೆದು ಫೋನ್ ರಿಸೆಟ್ ಮಾಡಿದರೆ ಅನವಶ್ಯಕ ಫೈಲ್‌ಗಳು ಡಿಲೀಟ್ ಆಗಲಿದೆ.!! ಆದರೆ, ಫೋನ್ ರಿಸೆಟ್ ಮಾಡುವ ಮುನ್ನ ಉಪಯುಕ್ತ ಡೇಟಾವನ್ನು ಸೇವ್ ಮಾಡಿಕೊಳ್ಳಿ.!!

ಕಡಿಮೆ ಆಪ್‌ಗಳನ್ನು ಬಳಸಿ.!!
ಒಂದೇ ಸಾರಿ ಹಲವು ಆಪ್‌ಗಳನ್ನು ಬಳಕೆ ಮಾಡಬಹುದಾದ ಶಕ್ತಿ ಸ್ಮಾರ್ಟ್‌ಫೋನ್‌ಗಳಿಗಿದ್ದರೂ ಸಹ, ಒಮ್ಮೆಲೆ ಹೆಚ್ಚು ಆಪ್‌ಗಳನ್ನು ಬಳಕೆ ಮಾಡುವುದು ಫೋನ್ ಸ್ಲೋ ಆಗಲು ಕಾರಣವಾಗಿರುತ್ತದೆ. ಹಾಗಾಗಿ, ಒಂದೇ ಸಾರಿ ಹಲವು ಆಪ್‌ಗಳನ್ನು ಬಳಕೆ ಮಾಡದಿರುವುದು ಒಳ್ಳೆಯದು.!!


Click it and Unblock the Notifications








