ನೂತನ ಹೆಚ್‌ಟಿಸಿ ವನ್ X+ ಹೀಗಿದೆ ನೋಡಿ
ಥೈವಾನ್ ಮೂಲದ ಹ್ಯಾಂಡ್‌ಸೆಟ್ ತಯಾರಿಕಾ ಸಂಸ್ಥೆಯಾದ ಹೆಚ್‌ಟಿಸಿ ತನ್ನಯ ಇತ್ತೀಚಿನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಹೆಚ್‌ಟಿಸಿ ವನ್ ಎಕ್ಸ್‌ನ ನವೀಕೃತ ಮಾದರಿಯಾದ ಆಂಡ್ರಯ್ಡ್ ಜೆಲ್ಲಿಬೀನ್ ಚಾಲಿತ ಹೆಚ್‌ಟಿಸಿ ವನ್ ಎಕ್ಸ್+ ಸ್ಮಾರ್ಟ್‌ಫೋನ್ ಅನಾವರಣ ಗೊಳಿಸಿದೆ.
ಅಂದಹಾಗೆ ನವೀಕೃತ ಹೆಚ್‌ಟಿಸಿ ಕೊಂಚ ವನ್ ಎಕ್ಸ್ ಮಾದರಿಯಂತೇ ಫೀಚರ್ಸ್‌ಗಳನ್ನು ಒಳಗೊಂಡಿದ್ದು ಸಾಕಷ್ಟು ಆಂತರಿಕ ಬದಲಾವಣೆಗಳನ್ನು ಹೊಂದಿದೆ.
ಅಂದಹಾಗೆ ಹೆಚ್‌ಟಿಸಿಯ ನೂತನ ಸ್ಮಾರ್ಟ್‌ಫೋನ್ ವನ್ ಎಕ್ಸ್+ ನಲ್ಲಿ ಹಿಂದಿನ ಮಾದರಿಗಿಂತ ಏನೆಲ್ಲಾ ಬದಲಾವಣೆ ಹೋದಿದೆ ಎಂಬುದನ್ನು ಗಿಜ್ಬಾಟ್ ಓದುಗರಿಗಾಗಿ ತರಲಾಗಿದೆ.
ತೂಕ ಹಾಗೂ ಗಾತ್ರ: ಹೆಚ್‌ಟಿಸಿ ವನ್ ಎಕ್ಸ್+ ಸ್ಮಾರ್ಟ್‌ಪೊನ್ 134.36 x 69.9 x 8.9 ಸುತ್ತಳತೆಯೊಂದಿಗೆ 135 ಗ್ರಾಂ ತೂಕವಿದೆ.
ದರ್ಶಕ: 4.7 ಇಂಚಿನ ಸೂಪರ್ LCD 2 ಸಾಮರ್ತ್ಯದ ಟಚ್‌ಸ್ಕ್ರೀನ್ ದರ್ಶಕದೊಂದಿಗೆ 1280 x 720 ಪಿಕ್ಸೆಲ್ ರೆಸೆಲ್ಯೂಷನ್ ಸೇರಿದಂತೆ ಗೊರಿಲ್ಲಾಗ್ಲಾಸ್ 2 ಪ್ರೊಟೆಕ್ಷನ್ ಹೊಂದಿದೆ.
ಪ್ರೊಸೆಸರ್: ಹೆಚ್‌ಟಿಸಿ ವನ್ ಎಕ್ಸ್+ ನಲ್ಲಿ ಕ್ವಾಡ್ ಕೋರ್ 1.7GHz Nvidia ಟೆಗ್ರಾ 3 AP37 ಪ್ರೊಸೆಸರ್ ಹೊಂದಿದೆ.
ಆಪರೇಟಿಂಗ್ ಸಿಸ್ಟಂ: ಹೆಚ್‌ಟಿಸಿ ವನ್ ಎಕ್ಸ್ ನ ಆಂಡ್ರಾಯ್ಡ್ 4.0 ICS OS ನ ಯಶಸ್ಸಿನ ಹಿನ್ನಲೆಯಲ್ಲಿ ನೂತನ, ಹೆಚ್‌ಟಿಸಿ ವನ್ ಎಕ್ಸ್+ಗೆ ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಆಪರೇಟಿಂಗ್ ಸಿಸ್ಟಂಗೆ ನವೀಕರಿಸಲಾಗಿದೆ.
ಕ್ಯಾಮೆರಾ: ಹೆಚ್‌ಟಿಸಿ ವನ್ ಎಕ್ಸ್+ ನಲ್ಲಿ 8MP ಹಿಂಬದಿಯ ಕ್ಯಾಮೆರಾ ಹಾಗೂ ಆಟೋ ಫೋಕಸ್, LED ಫ್ಲಾಷ್, ಹಾಗೂ BSI ಸೆನ್ಸಾರ್ ಸೇರಿದಂತೆ ವಿಡಿಯೋ ಕರೆಗಾಗಿ ಮುಂಬದಿಯ 1.6MP ಕ್ಯಾಮೆರಾ ಹೊಂದಿದೆ.
ಸ್ಟೋರೇಜ್: ಹೆಚ್‌ಟಿಸಿ ವನ್ ಎಕ್ಸ್+ ನಲ್ಲಿ 1GB RAM ಹಾಗೂ 64GB ಆಂತರಿಕ ಸ್ಟೋರೇಜ್ ನಿಂದ ಕೂಡಿದೆ. ಅಂದಹಾಗೆ ಮೈಕ್ರೋ ಎಸ್‌ಡಿ ಕಾರ್ಡ್ ಸೌಲಭ್ಯವಿಲ್ಲ.
ಕನೆಕ್ಟಿವಿಟಿ: NFC, ಬ್ಲೂಟೂತ್ 4.0, aptX, 4G LTE, Wi-Fi IEEE 802.11 a/b/g/n, DLNA ಹಾಗೂ micro-USB 2.0 ಹೊಂದಿದೆ.
ಬ್ಯಾಟರಿ: ಹೆಚ್‌ಟಿಸಿ ವನ್ ಎಕ್ಸ್+ ನಲ್ಲಿ 2,100 mAh Li-Po ಬ್ಯಾಟರಿ ಇದ್ದು 6 ಗಂಟೆಗಳ ಟಾಕ್ ಟೈಮ್ ನೀಡುತ್ತದೆ.
ಬೆಲೆ ಹಾಗೂ ಲಭ್ಯತೆ: ಹೆಚ್‌ಟಿಸಿ ವನ್ ಎಕ್ಸ್+ ಯೂರೋಪ್ ಸೇರಿದಂತೆ ಉತ್ತರ ಏಷ್ಯಾ ಭಾಗಗಳಲ್ಲಿ ಅಕ್ಟೋಬರ್‌ನಿಂದ ಹಾಗೂ ದಕ್ಷಿಣ ಏಷ್ಯಾ ಭಾಗಗಳಲ್ಲಿ ನವೆಂಬರ್‌ನಿಂದ ಲಭ್ಯವಾಗಲಿದೆ. ಬೆಲೆ ಹಾಗೂ ಬಿಡುಗಡೆಯ ದಿನಾಂಕವನ್ನು ಸಂಸ್ಥೆಯು ಶೀಘ್ರದಲ್ಲೇ ಬಹಿರಂಗಪಡಿಸಲಿದೆ.


Click it and Unblock the Notifications
