ಸ್ಪರ್ಧೆಯಲ್ಲಿದೆ ಎಚ್ ಟಿಸಿ ಮತ್ತು ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್

By Super
|
ಸ್ಪರ್ಧೆಯಲ್ಲಿದೆ ಎಚ್ ಟಿಸಿ ಮತ್ತು ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್

ಆಧುನಿಕ ಮೊಬೈಲ್ ಗಳಿಗೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿರುವುದರಿಂದ ಮೊಬೈಲ್ ತಯಾರಕರ ನಡುವೆ ಇದೀಗ ಸ್ಪರ್ಧೆ ಏರ್ಪಟ್ಟಿದೆ. ಈ ನಿಟ್ಟಿನಲ್ಲಿ ಮೊಬೈಲ್ ಮಾರುಕಟ್ಟೆಗೆ ಹಲವು ಮೊಬೈಲ್ ಗಳು ಬರುತ್ತಲೇ ಇವೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಸ್ಪರ್ಧೆಗಿಳಿದಿರುವ ಎರಡು ಮೊಬೈಲ್ ಕಂಪನಿಗಳೆಂದರೆ ಎಚ್ ಟಿಸಿ ಮತ್ತು ಸ್ಯಾಮ್ ಸಂಗ್.

ಎಚ್ ಟಿಸಿ ವಿವಿದ್ ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಸ್ಕೈ ರಾಕೆಟ್ ಮೊಬೈಲ್ ಎರಡೂ ಕೂಡ ಒಳ್ಳೆ ವಿನ್ಯಾಸ ಮತ್ತು ಉತ್ತಮ ಲುಕ್ ಪಡೆದುಕೊಂಡಿದೆ. ಸ್ಯಾಮ್ ಸಂಗ್ SII ಸ್ಕೈ ರಾಕೆಟ್ ಮತ್ತು HTC ವಿವಿದ್ ಎರಡೂ ಮೊಬೈಲ್ ಗಳು ಆಂಡ್ರಾಯ್ಡ್ 2.3.5 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದೆ. ಸ್ಯಾಮ್ ಸಂಗ್ ನಲ್ಲಿ TouchWiz ಯೂಸರ್ ಇಂಟರ್ ಫೇಸ್ ನೀಡಲಾಗಿದ್ದು, ಎಚ್ ಟಿಸಿ ನಲ್ಲಿ ಸೆನ್ಸ್ ಯೂಸರ್ ಇಂಟರ್ ಫೇಸ್ ಇದೆ. ಎರಡೂ ಫೋನ್ ಗಳು 4ಜಿ ಸಾಮರ್ಥ್ಯ ಹೊಂದಿದ್ದು, ಅನೇಕ ನೆಟ್ ವರ್ಕ್ ಫ್ರಿಕ್ವೆನ್ಸಿಗಳನ್ನು ಬೆಂಬಲಿಸುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ SII ಸ್ಕೈ ರಾಕೆಟ್ ಮೊಬೈಲ್ 1.5 GHz ವೇಗದ ಡ್ಯೂಯಲ್ ಕೋರ್ ಪ್ರೊಸೆಸರ್ ಪಡೆದುಕೊಂಡಿದೆ. ವಿವಿದ್ ಮೊಬೈಲ್ 1.2 GHz ಡ್ಯೂಯಲ್ ಕೋರ್ ಪ್ರೊಸೆಸರ್, ಕ್ವಾಲ್ಕಂ APQ8060 ಮತ್ತು ಸ್ಯ್ನಾಪ್ ಡ್ರಾಗನ್ ಚಿಪ್ ಸೆಟ್ ಹೊಂದಿದೆ.

ಎಚ್ ಟಿಸಿ ವಿವಿದ್ ಮೊಬೈಲ್ ವಿಶೇಷತೆ:

* 128.8 ಎಂಎಂ x 67.1 ಎಂಎಂ x 11.2 ಎಂಎಂ ಸುತ್ತಳತೆ

* 176.9 ಗ್ರಾಂ ತೂಕ

* 4.5 ಇಂಚಿನ ಡಿಸ್ಪ್ಲೇ, 540 x 960 ಪಿಕ್ಸಲ್ ರೆಸೊಲ್ಯೂಷನ್

* S-LCD ಟಚ್ ಸ್ಕ್ರೀನ್ ಡಿಸ್ಪ್ಲೇ

* ಡ್ಯೂಯಲ್ ಕ್ಯಾಮೆರಾ, ಆಟೊ ಫೋಕಸ್, LED ಫ್ಲಾಶ್

* 8 ಮೆಗಾ ಪಿಕ್ಸಲ್ ಕ್ಯಾಮೆರಾ

* ಆಂತರಿಕ ಮೆಮೊರಿಯಲ್ಲಿ ಎರಡು ಆಯ್ಕೆ: 16 ಜಿಬಿ ಮತ್ತು 32 ಜಿಬಿ

* 1ಜಿಬಿ ಸಿಸ್ಟಮ್ ಮೆಮೊರಿ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* ವೈ-ಫೈ, ಬ್ಲೂಟೂಥ್

ಸ್ಯಾಮ್ ಸಂಗ್ ಗ್ಯಾಲಕ್ಸಿ SII ಸ್ಕೈ ರಾಕೆಟ್ ವಿಶೇಷತೆ:

* 5.15 x 2.75 x 0.37 ಎಂಎಂ ಸುತ್ತಳತೆ

* 132.1 ಗ್ರಾಂ ತೂಕ

* 4.5 ಇಂಚಿನ ಡಿಸ್ಪ್ಲೇ, 800 x 480 ಪಿಕ್ಸಲ್ ರೆಸೊಲ್ಯೂಷನ್

* ಅಮೊಲೆಡ್ ಡಿಸ್ಪ್ಲೇ

* 16 ಜಿಬಿ ಆಂತರಿಕ ಮೆಮೊರಿ

* 1ಜಿಬಿ ಸಿಸ್ಟಮ್ ಮೆಮೊರಿ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* ವೈ-ಫೈ, ಬ್ಲೂಟೂಥ್

ಎಚ್ ಟಿಸಿ ವಿವಿದ್ ಮೊಬೈಲ್ 30,000ರು ಆಗಿದ್ದರೆ ಸ್ಯಾಮ್ ಸಂಗ್ ಗ್ಯಾಲಕ್ಸಿ SII ಸ್ಕೈ ರಾಕೆಟ್ ಮೊಬೈಲ್ ಬೆಲೆ ಕೂಡ ಅದೇ ಬೆಲೆಯಲ್ಲಿ ದೊರೆಯಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X