ಹುವಾಯಿಯ ಅಸ್ಕೆಂಡ್ ಮೇಟ್ 3ನ ಕಿಟ್‌ಕ್ಯಾಟ್ ಮೋಡಿ

By Shwetha
|

ಈ ದಿನಗಳಲ್ಲಿ ಹೆಚ್ಚಿನ ದುಬಾರಿ ಫೋನ್‌ಗಳು ಕಡಿಮೆ ಸ್ಪರ್ಧೆಯಲ್ಲಿ ಮುಂದುವರಿಯುತ್ತಿದ್ದು, ಈ ಪಟ್ಟಿಗೆ ಹೊಸ ಸೇರ್ಪಡೆ ಎಂಬಂತೆ ಹುವಾಯಿ ತನ್ನ ಫೋನ್ ಅನ್ನು ಲಾಂಚ್ ಮಾಡುತ್ತಿದೆ.

ಈ ಚೀನಾದ ಕಂಪೆನಿ ತನ್ನ ಹೊಸ ಫೋನ್ ಆದ ಹುವಾಯಿ ಸಿ 199 ನ ಮೂಲಕ ಭಾರೀ ಸದ್ದನ್ನೇ ಮಾಡ ಹೊರಟಿದೆ. ಅದಾಗ್ಯೂ ತನ್ನ ಹ್ಯಾಂಡ್‌ಸೆಟ್ ಅನ್ನು ಸಪ್ಟೆಂಬರ್‌ನಲ್ಲಿ ಲಾಂಚ್ ಮಾಡಲಿರುವ ಕಂಪೆನಿ ಹೆಚ್ಚುವರಿ ಸಂಚಲನವನ್ನು ಉಂಟುಮಾಡಲಿದೆ ಎಂಬುದು ಖಾತ್ರಿಯಾಗಿದೆ.

ಹುವಾಯಿ ತರಲಿದೆ ಮಾರುಕಟ್ಟೆಯಲ್ಲಿ ಕಿಟ್‌ಕ್ಯಾಟ್ ಸುಗ್ಗಿ

ಅಸ್ಕೆಂಡ್ ಮೇಟ್ 2 ನ ಯಶಸ್ಸಿನ ನಂತರದ ಫೋನ್ ಇದಾಗಿದ್ದು ಈ ವರ್ಷದ ಸಪ್ಟೆಂಬರ್‌ನಲ್ಲಿ ಇದು ಗ್ರಾಹಕರನ್ನು ಸಮೀಪಸಲಿದೆ. ಅಸ್ಕೆಂಡ್ ಮೇಟ್ 3 ಎಂಬುದು ವರದಿಯ ಪ್ರಕಾರ ಈ ಹ್ಯಾಂಡ್‌ಸೆಟ್ ಹೆಸರಾಗಿದ್ದು ಇದು ದೊಡ್ಡದಾದ 6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು 1,920 x 1,080 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಹೊಂದಿದೆ.

ಇನ್ನೂ ಹೆಚ್ಚಾಗಿ, ಈ ಫೋನ್ ಪರದೆಯು ತೆಳುವಾದ ಬೆಜಲ್‌ಗಳನ್ನು ಹೊಂದಿದೆ. ಇದರ ಡಿಸ್‌ಪ್ಲೇ ಹೊರತಾಗಿ ಅಸ್ಕೆಂಡ್ ಮೇಟ್ 3 ಓಕ್ಟಾ ಕೋರ್ HiSilicon Kirin 920 ಪ್ರೊಸೆಸರ್ ಅನ್ನು ಹೊಂದಿದ್ದು, 2 ಜಿಬಿ RAM ಡಿವೈಸ್‌ನಲ್ಲಿದೆ. ಸಂಗ್ರಹಣಾ ಸಾಮರ್ಥ್ಯ 16 ಜಿಬಿಯಾಗಿದ್ದು ಫೋನ್ 4.4.2 ಕಿಟ್‌ಕ್ಯಾಟ್ ಓಎಸ್‌ನಲ್ಲಿ ಚಾಲನೆಯಾಗುತ್ತಿದೆ. LTE ಸಂಪರ್ಕವನ್ನು ಕೂಡ ಇದು ಬೆಂಬಲಿಸಬಹುದು.

ಇನ್ನು ಡಿವೈಸ್‌ನ ಕ್ಯಾಮೆರಾ 13 ಮೆಗಾಪಿಕ್ಸೆಲ್‌ಗಳಾಗಿದ್ದು, 5 ಮೆಗಾಪಿಕ್ಸೆಲ್ ಫ್ರಂಟ್ ಶೂಟರ್ ಇದರಲ್ಲಿದೆ. Shenzhen ಮೂಲದ ಕಂಪೆನಿ ಅಸ್ಕೆಂಡ್ ಮೇಟ್ 4ಜಿಯನ್ನು ಜಗತ್ತಿನಾದ್ಯಂತವಿರುವ ಆಯ್ಕೆಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಿದೆ. ಯುಎಸ್‌ನಲ್ಲಿ ಅತ್ಯಧಿಕ ಬೆಲೆಯಲ್ಲಿ ಈಗಾಗಲೇ ಇದು ಮಾರಾಟವಾಗಲಿದೆ.

ಈ ವರ್ಷದ ಮುಂಚೆ ಮೇನಲ್ಲಿ, ಹುವಾಯಿ ಅಸ್ಕೆಂಡ್ P7 ಹ್ಯಾಂಡ್‌ಸೆಟ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದ್ದು ಇದು ಜಗತ್ತಿನ ಸ್ಲಿಮ್ ಫೋನ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. 6.5 mm ದಪ್ಪವಾಗಿದ್ದು, ಅಸ್ಕೆಂಡ್ P7 ಕಳೆದ ವರ್ಷ ಬಿಡುಗಡೆಯಾಗಿರುವ ಅಸ್ಕೆಂಡ್ P6 ನ ಯಶಸ್ವಿ ಹರಿಕಾರನೆನೆಸಿದೆ.

Best Mobiles in India

Read more about:
English summary
This article tells about Huawei Ascend Mate To Go Official in September 6 Inch FHD Smartphone Tipped releasing in this September.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X