Home
ಮೊಬೈಲ್

ಸುದ್ದಿ ಮಾಡಲಿದೆ ಹ್ಯುವೈ ಟ್ರೆಂಡಿ ಮೊಬೈಲ್

By Super
ಸುದ್ದಿ ಮಾಡಲಿದೆ ಹ್ಯುವೈ ಟ್ರೆಂಡಿ ಮೊಬೈಲ್

ಹ್ಯುವೈ ಕಂಪನಿ ಅನೇಕ ಆಕರ್ಷಕ ಮೊಬೈಲ್ ಗಳ ಮೂಲಕ ಗ್ರಾಹಕರ ಮನಗೆದ್ದಿದೆ. ಇದೀಗ ಹ್ಯುವೈ G7005 ಎಂಬ ನೂತನ ಸ್ಮಾರ್ಟ್ ಫೋನ್ ಪರಿಚಯಿಸುವ ಮೂಲಕ ಇನ್ನಷ್ಟು ಸುದ್ದಿಮಾಡಲಿದೆ. ಫುಲ್ ಟಚ್ ಸ್ಕ್ರೀನ್ ಹೊಂದಿರುವ ಈ ಸ್ಮಾರ್ಟ್ ಫೋನನ್ನು ಬಾರ್ ಫೋನ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಕಪ್ಪು ಮತ್ತು ಸಿಲ್ವರ್ ಬಣ್ಣದ ಉತ್ತಮ ಕಾಂಬಿನೇಶನ್ ನಲ್ಲಿರುವ ಈ ಮೊಬೈಲ್ 2ಜಿ ಸಾಧನವಾಗಿದೆ. GSM 850/1900 and GSM 900/1800 ನೆಟ್ ವರ್ಕ್ ಬೆಂಬಲಿತವಾಗಿದೆ.

ಹ್ಯುವೈ G7005 ಮೊಬೈಲ್ ವಿಶೇಷತೆ:

* 93 ಎಂಎಂ x 51 ಎಂಎಂ x 14.2 ಎಂಎಂ ಸುತ್ತಳತೆ

* 75 ಗ್ರಾಂ ತೂಕ

* 2.4 ಇಂಚಿನ TFT LCD ಟಚ್ ಸ್ಕ್ರೀನ್ ಡಿಸ್ಪ್ಲೇ

* 240 x 320 ಪಿಕ್ಸಲ್ ರೆಸೊಲ್ಯೂಷನ್ ಡಿಸ್ಪ್ಲೇ

* 2, 56, 000 ಬಣ್ಣ ಬೆಂಬಲಿಸುವ ಸ್ಕ್ರೀನ್, ಮಲ್ಟಿ ಟಚ್ ಆಯ್ಕೆ

* 1.3 ಮೆಗಾ ಪಿಕ್ಸಲ್ ಕ್ಯಾಮೆರಾ, 1280 x 1024 ಪಿಕ್ಸಲ್ ರೆಸೊಲ್ಯೂಷನ್

* 176x 144 ಪಿಕ್ಸಲ್ ರೆಸೊಲ್ಯೂಷನ್ ವಿಡಿಯೋ ರೆಕಾರ್ಡಿಂಗ್

* ಆಂತರಿಕ ಮೆಮೊರಿ, ಮೆಮೊರಿ ವಿಸ್ತರಣೆಗೆ 4ಜಿಬಿ ಮೈಕ್ರೊ SD ಕಾರ್ಡ್ ಆಯ್ಕೆ

* 2.1 ಬ್ಲೂಟೂಥ್, GPRS ಮತ್ತು USB2.0 ಪೋರ್ಟ್

ಈ ಮೊಬೈಲಲ್ಲಿ 32-48 kbps ವೇಗದ ಕ್ಲಾಸ್ 12 GPRS ಕೂಡ ನೀಡಲಾಗಿದೆ. ಸಂಗೀತ ಅನುಭವಿಸಲು ವೈರ್ ಲೆಸ್ ಸ್ಟಿರಿಯೋ ಬ್ಲೂಟೂಥ್ ಹೆಡ್ ಸೆಟ್ ಅಳವಡಿಸಬಹುದಾದ ಆಯ್ಕೆಯೂ ಇದೆ. ಮನರಂಜನೆಗೆಂದು ಆಡಿಯ, ವಿಡಿಯೋ, ಎಫ್ ಎಂ ಎಲ್ಲವೂ ಇದ್ದು, WAP 2.0 ಬ್ರೌಸರ್ ಕೂಡ ಜೊತೆಗಿದೆ.

ಹ್ಯುವೈ G7005 ಮೊಬೈಲ್ ನಿಖರ ಬೆಲೆ ತಿಳಿದುಬಂದಿಲ್ಲದಿದ್ದರೂ, ಭಾರತದಲ್ಲಿ ಇದರ ಬೆಲೆ 9,000ರು ಗಿಂತ ಕಡಿಮೆಯಿರಬಹುದೆಂದು ಅಂದಾಜಿಸಲಾಗಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+