ಹ್ಯುವೈನಿಂದ ಅತ್ಯಾಕರ್ಷಕ ಸ್ಮಾರ್ಟ್ ಫೋನ್ ಸಿದ್ಧ

Posted By: Staff
ಹ್ಯುವೈನಿಂದ ಅತ್ಯಾಕರ್ಷಕ ಸ್ಮಾರ್ಟ್ ಫೋನ್ ಸಿದ್ಧ

ಸೆಲ್ ಫೋನ್ ಮತ್ತು ವೈರ್ ಲೆಸ್ ಇಂಟರ್ನೆಟ್ ಮಾಡಮ್ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಮುಂದಿರುವ ಹ್ಯುವೈ ಕಂಪನಿ ಹ್ಯುವೈ G7300 ಎಂಬ ಸ್ಮಾರ್ಟ್ ಫೋನನ್ನು ಬಿಡುಗಡೆಗೊಳಿಸಿದೆ.

ಬಾರ್ ಫೋನ್ ಮಾದರಿಯಲ್ಲಿರುವ ಈ ಹ್ಯುವೈ G7300 ಮೊಬೈಲ್ ನಲ್ಲಿ ಗ್ರಾಹಕರನ್ನು ಖುಷಿಪಡಿಸುವ ಅನೇಕ ಅಂಶಗಳಿವೆ. ಈ GSM ಫೋನ್ 850/900/1800/1900 MHz ಫ್ರಿಕ್ವೆನ್ಸಿ ಹೊಂದಿದ್ದು, 312 MHz ಪ್ರೊಸೆಸರ್ ಮತ್ತು MTK 6236 chipset ಒಳಗೊಂಡಿದೆ.

ಹ್ಯುವೈ G7300 ಮೊಬೈಲ್ ವಿಶೇಷತೆ:

* 3.5 ಇಂಚಿನ TFT HVGA ಡಿಸ್ಪ್ಲೇ

* 256K ಬಣ್ಣ ಬೆಂಬಲಿಸುವ ಟಚ್ ಸ್ಕ್ರೀನ್ ಡಿಸ್ಪ್ಲೇ

* 110 ಗ್ರಾಂ ತೂಕ, 106x60x115 ಎಂಎಂ ಸುತ್ತಳತೆ

* 3.2 ಮೆಗಾ ಪಿಕ್ಸಲ್ ಕ್ಯಾಮೆರಾ , ಡಿಜಿಟಲ್ ಝೂಮ್

* 40 ಎಂಬಿ ಆಂತರಿಕ ಮೆಮೊರಿ ಸಾಮರ್ಥ್ಯ

* 16ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್ ಸ್ಲಾಟ್

* A2DP v3.0 ಬ್ಲೂಟೂಥ್, ಮೈಕ್ರೊ USB 2.0 ಪೋರ್ಟ್

ಈ ಮೊಬೈಲ್ ನ 1300 mAh Li-Ion ಬ್ಯಾಟರಿ 3 ಗಂಟೆ 20 ನಿಮಿಷ ಟಾಕ್ ಟೈಂ ಮತ್ತು 200 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡಲಿದೆ. ಬ್ರೌಸರ್ ಗೆಂದು ಮೊಬೈಲ್ ನಲ್ಲಿ WAP 2.0/xHTML ಮತ್ತು HTML ನೀಡಲಾಗಿದೆ. ಜೊತೆಗೆ ಎಫ್ ಎಂ ರೇಡಿಯೋ,  MP4/H.263 ಪ್ಲೇಯರ್, MP3/WAV/AAC+ ಪ್ಲೇಯರ್, ಆರ್ಗನೈಸರ್ ಮತ್ತು ಜಾವಾ ಕೂಡ ಇದರಲ್ಲಿ ಲಭ್ಯವಾಗಲಿದೆ.

ಕಪ್ಪು ಬಣ್ಣದಲ್ಲಿ ಆಕರ್ಷಕವಾಗಿ ಮೂಡಿಬಂದಿರುವ ಈ ಹ್ಯಾಂಡ್ ಸೆಟ್ ನಲ್ಲಿ GPS ಇಲ್ಲದಿರುವುದು ಕೊರತೆಯೆನಿಸಿದರೂ ಇದರಲ್ಲಿರುವ ಅನೇಕ ಆಯ್ಕೆಗಳು ಈ ಕೊರತೆಯನ್ನು ನೀಗಿಸಲಿದೆ.

G7300 ಮೊಬೈಲಲ್ಲಿ ಟ್ವಿಟರ್, ಫೇಸ್ ಬುಕ್, ಜಿಟಾಕ್ ಮತ್ತು ಎಂಎಸ್ ಎನ್ ಸಾಮಾಜಿಕ ತಾಣಗಳ ಆಯ್ಕೆಯಿದ್ದು, SNS ಅಪ್ಲಿಕೇಶನ್ ನೀಡಲಾಗಿದೆ. ಈ ಮೊಬೈಲ್ ಬೆಲೆಯನ್ನು ಕಂಪನಿ ಇನ್ನೂ ಅಧೀಕೃತವಾಗಿ ಘೋಷಿಸಿಲ್ಲದಿದ್ದರೂ ಮೂಲಗಳ ಪ್ರಕಾರ ಇದು ಕೈಗೆಟುಕುವ ದರದಲ್ಲಿಯೇ ಲಭ್ಯವಿದೆ ಎನ್ನಲಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot