Huawei: ಹೊಸ ಫೋನ್ ಲಾಂಚ್; 108MP ಮುಖ್ಯ ಮತ್ತು 32MP ಸೆಲ್ಫಿ ಕ್ಯಾಮೆರಾ.. ಕಡಿಮೆ ಬೆಲೆ
ಹುವಾವೇ (Huawei) ಸಂಸ್ಥೆ ಸದ್ದಿಲ್ಲದೇ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಟೈಲಿಶ್ ಸ್ಮಾರ್ಟ್‌ಫೋನ್ 108MP ಮುಖ್ಯ ಮತ್ತು 32MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಹೌದು, ಟೆಕ್ ಬ್ರ್ಯಾಂಡ್ ಹುವಾವೇ ಇಂದು ಹೊಸ ಹುವಾವೇ ಹಾಯ್ ನೋವಾ 12z (Huawei Hi Nova 12z) ಫೋನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ನ ಸಂಪೂರ್ಣ ವಿವರಗಳು ಲಭ್ಯವಿದೆ. ಈ ಫೋನಿನ ವಿಶೇಷತೆ ಎಂದರೆ, ಇದರ ಸ್ಟೈಲಿಶ್ ಲುಕ್ ಮತ್ತು ಕ್ಯಾಮೆರಾ ಸೆಟಪ್ ಆಗಿದೆ. ಬನ್ನಿ ಈ ಹೊಸ ಹುವಾವೇ ಸ್ಮಾರ್ಟ್‌ಫೋನ್ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಹುವಾವೇ ಹೈ ನೋವಾ 12Z ಸ್ಮಾರ್ಟ್‌ಫೋನ್ ಒಂದೇ ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆಯಾಗಿದೆ. ಇದು 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನ್ ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 4,500mAh ಬ್ಯಾಟರಿ ಮತ್ತು 66W ವೇಗದ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಈ ಹುವಾವೇ ಹೈ ನೋವಾ 12z ಸ್ಮಾರ್ಟ್‌ಫೋನ್ ಬೆಲೆ 26 ಸಾವಿರ ರೂ. ಆಗಿದೆ. ಇದು 8GB RAM ಮತ್ತು 256GB ಸ್ಟೋರೇಜ್ ಬೆಲೆ ಆಗಿದೆ. ಈ ಹುವಾವೇ ಫೋನ್ ಭಾರತದಲ್ಲಿ ಬಿಡುಗಡೆಯಾಗುವ ಬಗ್ಗೆ ಕಂಪನಿಯು ಯಾವುದೇ ಮಾಹಿತಿ ನೀಡಿಲ್ಲ. ಪ್ರಸ್ತುತ ಚೀನಾದಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ.

ಹುವಾವೇ ಹೈ ನೋವಾ 12Z ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಹುವಾವೇ ಹೈ ನೋವಾ 12Z ಸ್ಮಾರ್ಟ್‌ಫೋನ್ 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 1080 × 2400 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಇದು OLED ಪ್ಯಾನೆಲ್‌ನಲ್ಲಿ ನಿರ್ಮಿಸಲಾದ 10 ಟಚ್ ಪಾಯಿಂಟ್ ಮಲ್ಟಿ ಟಚ್ ಡಿಸ್ಪ್ಲೇ ಆಗಿದೆ. ಇದು 1.07 ಬಿಲಿಯನ್ ಬಣ್ಣಗಳು, 100% P3 ಬಣ್ಣದ ಗ್ಯಾಮಟ್ ಮತ್ತು 395 ppi ಬೆಂಬಲ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಹೊಸ ಹುವಾವೇ ಹೈ ನೋವಾ 12Z ಫೋನ್ ಆಂಡ್ರಾಯ್ಡ್ 15 (Android 15) ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ಮಾಡುತ್ತದೆ. ಪ್ರಸ್ತುತ, ಈ ಮೊಬೈಲ್ ಪ್ರೊಸೆಸರ್ ಬಗ್ಗೆ ಕಂಪನಿಯು ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಈ ಫೋನ್ ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ ಎಂಬುದು ಖಚಿತಪಡಿಸಲಾಗಿದೆ. ಈ ಸ್ಮಾರ್ಟ್‌ಫೋನ್ 8GB RAM ಜೊತೆಗೆ 256GB ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದೆ.
ಕ್ಯಾಮೆರಾ ಸೆಟಪ್
ಹುವಾವೇ ಹೈ ನೋವಾ 12Z ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಹುವಾವೇ ಹೈ ನೋವಾ 12z ಮೊಬೈಲ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಮೊಬೈಲ್ 66W ವೇಗದ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಈ ಫೋನ್ ಕೇವಲ 36 ನಿಮಿಷಗಳಲ್ಲಿ 0 ರಿಂದ ಶೇ.100 ರಷ್ಟು ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿದೆ.
ಇತರೆ ವೈಶಿಷ್ಟ್ಯಗಳು
ಹುವಾವೇ ಹೈ ನೋವಾ 12z ಸ್ಮಾರ್ಟ್‌ಫೋನ್ 3.5mm ಹೆಡ್‌ಫೋನ್ ಜ್ಯಾಕ್, ಯುಎಸ್‌ಬಿ ಟೈಪ್ ಸಿ ಪೋರ್ಟ್, 4G LTE, ಡ್ಯುಯಲ್ ಸಿಮ್ ಫಂಕ್ಷನ್ ಸಪೋರ್ಟ್, ಡ್ಯುಯಲ್ ಬ್ಯಾಂಡ್ ವೈ-ಫೈ, ಬ್ಲೂಟೂತ್ 5.1, ಜಿಪಿಎಸ್ ಮತ್ತು ಗೆಲಿಲಿಯೊ ಸೇರಿದಂತೆ ಹಲವು ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದೆ. ಈ ಫೋನ್ ಸ್ಪ್ಲಾಶ್ ಮತ್ತು ಧೂಳಿನ ವಿರುದ್ಧ ರಕ್ಷಣೆಗೆ ಉತ್ತಮ ರೇಟಿಂಗ್ ಪಡೆದಿದೆ.


Click it and Unblock the Notifications








