ಹುವಾಯಿ ಹೋನರ್ 6 ಪ್ಲಸ್ ಐಫೋನ್ 6 ಪ್ಲಸ್ ಮತ್ತು ಡಿಎಸ್ಎಲ್ಆರ್ ಕ್ಯಾಮೆರಾ ಭಿನ್ನತೆ

By Shwetha
|

ಹೆಚ್ಚಿನ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳು ಉತ್ತಮ ಗುಣಮಟ್ಟದ ಕ್ಯಾಮೆರಾವನ್ನು ತಮ್ಮ ಫೋನ್‌ನಲ್ಲಿ ನೀಡುವ ತವಕದಲ್ಲಿವೆ. ಡಿಎಸ್‌ಎಲ್‌ಆರ್ ಗುಣಮಟ್ಟದ ಕ್ಯಾಮೆರಾಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸುವ ನಿಟ್ಟಿನಲ್ಲಿ ಫೋನ್ ಕಂಪೆನಿಗಳು ಪ್ರಯತ್ನವನ್ನು ಪಡುತ್ತಿವೆಯಾದರೂ ಹೆಚ್ಚಿನ ಯಶಸ್ಸನ್ನು ಕಂಡಿಲ್ಲ ಎಂದೇ ಹೇಳಬಹುದು.

ಆದರೆ ಹೋನರ್ 6 ಪ್ಲಸ್ ಉತ್ತಮ ಕ್ಯಾಮೆರಾ ಗುಣಮಟ್ಟವನ್ನು ತನ್ನಲ್ಲಿ ಒಳಗೊಂಡಿದ್ದು ಮಧ್ಯಮ ಶ್ರೇಯಾಂಕದಲ್ಲ ಈ ಫೋನ್ ಬಳಕೆದಾರರ ಕೈ ಸೇರಲಿದೆ ಎಂಬುದು ಸಂತಸದ ವಿಚಾರವಾಗಿದೆ. ಇದು 8 ಎಮ್‌ಪಿ ರಿಯರ್ ಫೇಸಿಂಗ್ ಶೂಟರ್‌ನೊಂದಿಗೆ ಬಂದಿದ್ದು, ಶ್ರೀಮಂತ ಕ್ಯಾಮೆರಾ ಅಪ್ಲಿಕೇಶನ್‌ಗಳನ್ನು ಇದು ಹೊಂದಿದೆ. ಹುವಾಯಿ ಹೋನರ್ 6 ಪ್ಲಸ್ ಮತ್ತು ಐಫೋನ್ 6 ಪ್ಲಸ್ ಮತ್ತು ಡಿಎಸ್‌ಎಲ್‌ಆರ್ ಕ್ಯಾಮೆರಾ ವಿಶೇಷತೆಗಳನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.

ಹುವಾಯಿ ಹೋನರ್ 6 ಪ್ಲಸ್ ವರ್ಸಸ್ ಐಫೋನ್ 6 ಪ್ಲಸ್

ಹುವಾಯಿ ಹೋನರ್ 6 ಪ್ಲಸ್ ವರ್ಸಸ್ ಐಫೋನ್ 6 ಪ್ಲಸ್

ಹುವಾಯಿ ಹೋನರ್ 6 ಪ್ಲಸ್‌ನಲ್ಲಿ ತೆಗೆದ ಚಿತ್ರವಿದು. ಇದು ನಿಜಕ್ಕೂ ಅದ್ಭುತವಾಗಿದ್ದು ನೋಟವಂತೂ ಮೈನವಿರೇಳಿಸುವಂತಿದೆ. ಐಫೋನ್ 6 ಪ್ಲಸ್ ಫೋಟೋಗೆ ಹೋಲಿಸಿದಾಗ ಆಕಾಶ ಸ್ವಲ್ಪ ನೀಲಿ ಬಣ್ಣಕ್ಕೆ ತಿರುಗಿರುವುದು ಕಂಡುಬರುತ್ತಿದೆ.

ಹುವಾಯಿ ಹೋನರ್ 6 ಪ್ಲಸ್ ವರ್ಸಸ್ ಐಫೋನ್ 6 ಪ್ಲಸ್

ಹುವಾಯಿ ಹೋನರ್ 6 ಪ್ಲಸ್ ವರ್ಸಸ್ ಐಫೋನ್ 6 ಪ್ಲಸ್

ಹೋನರ್ 6 ಪ್ಲಸ್ ಮತ್ತು ಐಫೋನ್ 6 ಪ್ಲಸ್ ಕ್ಯಾಮೆರಾಕ್ಕೆ ಸರಿಯಾದ ಉದಾಹರಣೆ ಇಲ್ಲಿದೆ. ಹುವಾಯಿ ಹೋನರ್ 6 ಪ್ಲಸ್‌ನಲ್ಲಿ ತೆಗೆದ ಚಿತ್ರ ಸ್ವಲ್ಪ ಮಂಕಾಗಿರುವುದನ್ನು ಇಲ್ಲಿ ನಿಮಗೆ ಗಮನಿಸಬಹುದಾಗಿದೆ.

ಹುವಾಯಿ ಹೋನರ್ 6 ಪ್ಲಸ್ ವರ್ಸಸ್ ಐಫೋನ್ 6 ಪ್ಲಸ್

ಹುವಾಯಿ ಹೋನರ್ 6 ಪ್ಲಸ್ ವರ್ಸಸ್ ಐಫೋನ್ 6 ಪ್ಲಸ್

ಡಿಎಸ್‌ಎಲ್ ಆರ್‌ನಲ್ಲಿ ತೆಗೆದ ಫೋಟೋವನ್ನು ನಾವಿಲ್ಲಿ ಹೋಲಿಕೆ ಮಾಡುತ್ತಿದ್ದು ಮತ್ತೆರಡು ಫೋನ್ ಕ್ಯಾಮೆರಾಗಳಿಗೆ ಹೋಲಿಸಿದಾಗ ಡಿಸ್‌ಎಲ್‌ಆರ್ ಚಿತ್ರ ಬ್ಲರ್ ಆಗಿರುವುದನ್ನು ನೀವು ಗಮನಿಸಬಹುದಾಗಿದೆ.

ಹುವಾಯಿ ಹೋನರ್ 6 ಪ್ಲಸ್ ವರ್ಸಸ್ ಐಫೋನ್ 6 ಪ್ಲಸ್

ಹುವಾಯಿ ಹೋನರ್ 6 ಪ್ಲಸ್ ವರ್ಸಸ್ ಐಫೋನ್ 6 ಪ್ಲಸ್

ನೈಟ್ ಮೋರ್ ಚಿತ್ರವನ್ನು ತೆಗೆಯುವುದು ಈ ಬಗೆಯ ಕ್ಯಾಮೆರಾಗಳಲ್ಲಿ ಸ್ವಲ್ಪ ಕಷ್ಟದ ಮಾತಾಗಿದೆ. ರಾತ್ರಿ ವೇಳೆ ತೆಗೆದ ಇಂಡಿಯಾ ಗೇಟ್ ಚಿತ್ರವನ್ನು ನೀವಿಲ್ಲಿ ಗಮನಿಸಬಹುದು. ಐಫೋನ್ 6 ಪ್ಲಸ್‌ಗಿಂತ ಹೋನರ್ 6 ಪ್ಲಸ್‌ನಲ್ಲಿ ತೆಗೆದ ಚಿತ್ರ ಹೆಚ್ಚು ಫೋಕಸ್ ಆಗಿದೆ.

ಹುವಾಯಿ ಹೋನರ್ 6 ಪ್ಲಸ್ ವರ್ಸಸ್ ಐಫೋನ್ 6 ಪ್ಲಸ್

ಹುವಾಯಿ ಹೋನರ್ 6 ಪ್ಲಸ್ ವರ್ಸಸ್ ಐಫೋನ್ 6 ಪ್ಲಸ್

ಇನ್ನು ನೈಟ್ ಶಾಟ್ ತೆಗೆಯಲು ಐಫೋನ್‌ಗಿಂತ ಹೋನರ್ 6 ಪ್ಲಸ್ ಅತ್ಯುತ್ತಮವಾಗಿದೆ.

ಹುವಾಯಿ ಹೋನರ್ 6 ಪ್ಲಸ್ ವರ್ಸಸ್ ಐಫೋನ್ 6 ಪ್ಲಸ್

ಹುವಾಯಿ ಹೋನರ್ 6 ಪ್ಲಸ್ ವರ್ಸಸ್ ಐಫೋನ್ 6 ಪ್ಲಸ್

ಡಿಎಸ್‌ಎಲ್ಆರ್, ಹುವಾಯಿ ಹೋನರ್ 6 ಪ್ಲಸ್, ಐಫೋನ್ 6 ಪ್ಲಸ್ ಬಳಸಿ ತೆಗೆದ ಚಿತ್ರವನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ. ಇಲ್ಲಿ ಕೂಡ ಹೋನರ್ 6 ಪ್ಲಸ್ ನೈಟ್ ಶಾಟ್‌ನಲ್ಲಿ ಉಳಿದೆರಡಕ್ಕಿಂತ ಮೇಲುಗೈಯನ್ನು ಸಾಧಿಸಿದೆ.

ಹುವಾಯಿ ಹೋನರ್ 6 ಪ್ಲಸ್ ವರ್ಸಸ್ ಐಫೋನ್ 6 ಪ್ಲಸ್

ಹುವಾಯಿ ಹೋನರ್ 6 ಪ್ಲಸ್ ವರ್ಸಸ್ ಐಫೋನ್ 6 ಪ್ಲಸ್

ಹುವಾಯಿನಲ್ಲಿ ತೆಗೆದ ಈ ಸ್ಮಾರಕದ ಚಿತ್ರ ಹೆಚ್ಚು ಸ್ಪಷ್ಟ ಮತ್ತು ನಿಖರವಾಗಿದೆ.

ಹುವಾಯಿ ಹೋನರ್ 6 ಪ್ಲಸ್ ವರ್ಸಸ್ ಐಫೋನ್ 6 ಪ್ಲಸ್

ಹುವಾಯಿ ಹೋನರ್ 6 ಪ್ಲಸ್ ವರ್ಸಸ್ ಐಫೋನ್ 6 ಪ್ಲಸ್

ಮೂರು ಡಿವೈಸ್‌ಗಳ ನಡುವಿನ ಹೋಲಿಕೆಯನ್ನು ಮಾಡುವ ಸಮಯ ಇದಾಗಿದೆ. ಈ ಮೂರು ಶಾಟ್‌ಗಳನ್ನು ನಾವು ಗಮನಿಸುವಾಗ ಹೋನರ್ 6 ಪ್ಲಸ್ ಶಾಟ್ ನಮಗೆ ಹೆಚ್ಚು ಪ್ರಿಯವಾಗುತ್ತದೆ. ಉಳಿದೆರಡು ಡಿವೈಸ್‌ಗಳಿಗಿಂತ ಹೋನರ್ 6 ಪ್ಲಸ್ ಶಾಟ್ ಹೆಚ್ಚು ನಿಖರವಾಗಿದೆ.

ಹುವಾಯಿ ಹೋನರ್ 6 ಪ್ಲಸ್ ವರ್ಸಸ್ ಐಫೋನ್ 6 ಪ್ಲಸ್

ಹುವಾಯಿ ಹೋನರ್ 6 ಪ್ಲಸ್ ವರ್ಸಸ್ ಐಫೋನ್ 6 ಪ್ಲಸ್

ಯಾವಾಗಲೂ ಹೆಚ್ಚು ವಿಶೇಷ ಅಂಶಗಳಿಂದ ಗಮನಸೆಳೆಯುವ ಹುವಾಯಿ ಬೇರೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಸಡ್ಡು ಹೊಡೆದು ನಿಲ್ಲುತ್ತದೆ. ಪನೋರಮಿಕ್ ಸೆಲ್ಫಿ ಎಂಬ ವಿಶೇಷ ಅಂಶವನ್ನು ಹುವಾಯಿ ಹೋನರ್ 6 ಪ್ಲಸ್ ತಂದಿದೆ.

ಹುವಾಯಿ ಹೋನರ್ 6 ಪ್ಲಸ್ ವರ್ಸಸ್ ಐಫೋನ್ 6 ಪ್ಲಸ್

ಹುವಾಯಿ ಹೋನರ್ 6 ಪ್ಲಸ್ ವರ್ಸಸ್ ಐಫೋನ್ 6 ಪ್ಲಸ್

ಹುವಾಯಿ ಹೋನರ್ 6 ಪ್ಲಸ್ "ಕ್ರಿಯೇಟೀವ್ ಶಾಟ್" ಫೀಚರ್ ಅನ್ನು ಹೊರತಂದಿದ್ದು ಚಿತ್ರವನ್ನು ಕ್ಲಿಕ್ ಮಾಡಿದ ನಂತರವೂ ಮುಖ್ಯ ಫೋಕಸ್ ಪಾಯಿಂಟ್ ಅನ್ನು ಶಿಫ್ಟ್ ಮಾಡುವ ಸಾಮರ್ಥ್ಯವನ್ನು ಬಳಕೆದಾರರಿಗೆ ಇದು ಒದಗಿಸುತ್ತದೆ. ಇಲ್ಲಿದೆ ಇದಕ್ಕೆ ಉದಾಹರಣೆಗಳು.

Best Mobiles in India

English summary
In order to give you a better understanding of how the DSLR, Huawei Honor 6 Plus, and iPhone 6 Plus cameras holds up in the real world, we took a bunch of shots.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X