Subscribe to Gizbot

ಹುವೈ ಹಾನರ್ ನಲ್ಲಿ ಈಗ ಐಸ್ ಕ್ರೀಮ್ ಸ್ಯಾಂಡ್ ವಿಚ್

Posted By:
ಹುವೈ ಹಾನರ್ ನಲ್ಲಿ ಈಗ ಐಸ್ ಕ್ರೀಮ್ ಸ್ಯಾಂಡ್ ವಿಚ್
ಆಂಡ್ರಾಯ್ಡ್ v2.3, v3.0, ಜಿಂಜರ್ ಬರ್ಡ್ ಹೀಗೆ ಅಧಿಕ ಸಾಮರ್ಥ್ಯದ ಆಪರೇಟಿಂಗ್ ಸಿಸ್ಟಮ್ ಇರುವ ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಒಂದು ಹೊಸ ಅಲೆಯನ್ನೇ ಸೃಷ್ಠಿಸಿತು. ಹೊಸ ಆಂಡ್ರಾಯ್ಡ್ v4.0 ಐಸ್ ಕ್ರೀಮ್ ಸ್ಯಾಂಡ್ ವಿಚ್ ಆಪರೇಟಿಂಗ್ ಸಿಸ್ಟಮ್ ಜನಪ್ರಿಯತೆಯನ್ನು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಇದೀಗ ಹುವೈ ಈ ಹೊಸ ಆಪರೇಟಿಂಗ್ ಸಿಸ್ಟಮ್ ಇರುವ ಮೊಬೈಲ್ ಅನ್ನು ಮಾರುಕಟ್ಟೆಗೆ ತರಲಿದೆ. ಇದರ ಕಾರ್ಯವೈಖರಿ ಅತ್ಯುತ್ತಮವಾಗಿದ್ದು ಜಿಂಜರ್ ಬರ್ಡ್ ಆಪರೇಟಿಂಗ್ ಬಳಸುತ್ತಿರುವ ಬಳಕೆದಾರರು ಇದರತ್ತ ಆಕರ್ಷಿತರಾಗುತ್ತಾರೆ ಎಂದು ಕಂಪನಿಯು ವಿಶ್ವಾಸದಿಂದ ಹೇಳುತ್ತಿದೆ. ಆಂಡ್ರಾಯ್ಡ್ v4.0 ಐಸ್ ಕ್ರೀಮ್ ಸ್ಯಾಂಡ್ ವಿಚ್ ಆಪರೇಟಿಂಗ್ ಸಿಸ್ಟಮ್ ಬಳಕೆ ಮಾಡಲು ಸುಲಭವಾಗಿದ್ದು ಇದರ ಸಾಫ್ಟ್ ವೇರ್ ಅನ್ನು ಅದರದೆ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಬಹುದಾಗಿದೆ.

ಈ ಹುವೈ ಹಾನರ್ ಮೊಬೈಲ್ ಈ ಕೆಳಗಿನ ಗುಣಲಕ್ಷಣದಿಂದಾಗಿ ಅತ್ಯುತ್ತಮವಾದ ಮೊಬೈಲ್ ಎಂದು ಗುರುತಿಸಲಾಗಿದೆ.

* ಗೂಗಲ್ ಮ್ಯಾಪ್ ಜೊತೆ ಇಂಟಿಗ್ರೇಟಡ್ GPS ಫೀಚರ್

* A2DP ಇರುವ ಬ್ಲೂಟೂಥ್ v2.1

* ಮೈಕ್ರೊ USB v2.0

* ಸ್ಟಿರಿಯೊ FM ರೇಡಿಯೊದ ಜೊತೆ RDS

* 480 x 854 ಪಿಕ್ಸಲ್ ನ 4 ಇಂಚಿನ TFT ಮಲ್ಟಿ ಟಚ್ ಸ್ಕ್ರೀನ್

* ವಿಸ್ತರಿಸಬಹುದಾದ ಮೆಮೊರಿ ಸಾಮರ್ಥ್ಯ 32 GB

* 3.5mm ಆಡಿಯೊ ಜಾಕ್

* ಆಂಡ್ರೆನೊ 205 GPUನೊಂದಿಗೆ 1.4 GHz ಸ್ಕ್ರಾಪಿಯೊನ್ CPU

* 512 MB RAM, 4 GB ROM

* ಕ್ವಾಲಕಮ್ MSM8255T ಸ್ನ್ಯಾಪ್ ಡ್ರ್ಯಾಗೆನ್ ಚಿಪ್ ಸೆಟ್

* 8 ಮೆಗಾ ಪಿಕ್ಸಲ್ 2 ಕ್ಯಾಮೆರಾ

8 ಮೆಗಾ ಪಿಕ್ಸಲ್ ಕ್ಯಾಮೆರಾ

2 ಮೆಗಾ ಪಿಕ್ಸಲ್ ಕ್ಯಾಮೆರಾ

* LED ಪ್ಲಾಷ್ ಸಪೋರ್ಟಿಂಗ್ ಮ್ಯಾಕ್ಸ್

* 3264 x 2448 ಪಿಕ್ಸಲ್ ರೆಸ್ಯೂಲೇಶನ್

* 720p HD ವೀಡಿಯೊ ರೆಕಾರ್ಡಿಂಗ್

* ಕ್ಯಾಮೆರಾದಲ್ಲಿ ಜಿಯೊ ಟಾಗಿಂಗ್ ಮತ್ತು HDR ಫೀಚರ್

* ಗೂಗಲ್ ಸರ್ಚ್, ಜಿ-ಮೇಲ್, ಜಿ-ಟಾಕ್ ಸೌಲಭ್ಯ

* GPRS/EDGE/ 3G

* 802.11 b/g/n ವೈಫೈ, ವೈಫೈ ಹಟ್ ಸ್ಪಾಟ್ , DLNA

* ಅಡೊಬೆ ಫ್ಲಾಷ್ ಇರುವ ಇಂಟಿಗ್ರೇಟಡ್ HTML ಬ್ರೌಸರ್

*1900 mAh ಲೀ-ಪೊ ಐಯಾನ್ ಬ್ಯಾಟರಿ

BETA ಆಯಾಮದ, ಸರಿಸುಮಾರು 148 MB ಗಾತ್ರವನ್ನು ಹೊಂದಿರುವ ಹುವೈ ಮೊಬೈಲ್ ಸಧ್ಯದಲ್ಲಿಯೆ ಮಾರುಕಟ್ಟೆಗೆ ಬರಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot