Subscribe to Gizbot

3 ರಿಯರ್ ಕ್ಯಾಮೆರಾ ಹೊಂದಿರುವ ವಿಶ್ವದ ಮೊದಲ ಫೋನ್ ಮಾರುಕಟ್ಟೆಗೆ!!

Written By:

ಜಗತ್ತಿನ ಮೊಬೈಲ್ ದಿಗ್ಗಜ ಕಂಪೆನಿಗಳಾದ ಆಪಲ್ ಮತ್ತು ಸ್ಯಾಮ್‌ಸಂಗ್‌ಗೆ ಸೆಡ್ಡು ಹೊಡೆದು ವಿಶ್ವದ ನಂಬರ್ ಒನ್ ಮೊಬೈಲ್ ಮಾರಾಟ ಕಂಪೆನಿ ಸ್ಥಾನ ಪಡೆದಿರುವ ಚೀನಾದ ಹುವಾವೆ ಕಂಪೆನಿ ಇದೀಗ ಮತ್ತೆ ಸುದ್ದಿಯಲ್ಲಿದೆ.! ಮೂರು ರಿಯರ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಇದೇ ಮಾರ್ಚ್ ತಿಂಗಳ ವೇಳೆಗೆ ಹುವಾವೆ ಬಿಡುಗಡೆ ಮಾಡಲಿದೆ.!!

ಹೌದು, ಟೆಕ್ ಮಾಧ್ಯಮಗಳ ವರದಿಗಳ ಪ್ರಕಾರ ಹುವಾವೆಯ ಹೈ ಎಂಡ್ ಫ್ಲಾಗ್‌ಶಿಪ್ ಫೋನ್ "ಹುವಾವೆ ಪಿ20" ಸ್ಮಾರ್ಟ್‌ಫೋನ್ ಮೂರು ರಿಯರ್ ಕ್ಯಾಮೆರಾ, ಆಂಡ್ರಾಯ್ಡ್ ಓರಿಯೋ ಹಾಗೂ ಇತ್ತೀಚಿನ EMUI 8.1 ವರ್ಷನ್ ಸಾಫ್ಟ್‌ವೇರ್ ಫೀಚರ್‌ಗಳನ್ನು ಹೊತ್ತು ಶೀಘ್ರದಲ್ಲಿಯೇ ಮಾರುಕಟ್ಟೆಗೆ ಎಂಟ್ರಿ ನೀಡುತ್ತಿದೆ ಎಂದು ಹೇಳಲಾಗಿದೆ.!!

3 ರಿಯರ್ ಕ್ಯಾಮೆರಾ ಹೊಂದಿರುವ ವಿಶ್ವದ ಮೊದಲ ಫೋನ್ ಮಾರುಕಟ್ಟೆಗೆ!!

ಹಾಗಾಗಿ, ಮೂರು ರಿಯರ್ ಕ್ಯಾಮೆರಾಗಳನ್ನು ಹೊಂದಲಿರುವ ವಿಶ್ವದ ಮೊದಲ ಫೋನ್ ಎಂಬ ಹೆಗ್ಗಳಿಕೆಯನ್ನು "ಹುವಾವೆ ಪಿ20" ಸ್ಮಾರ್ಟ್‌ಫೋನ್ ಪಡೆಯದೆ. ಹಾಗಾದರೆ, ಹುವಾವೆ ಪಿ20 ಸ್ಮಾರ್ಟ್‌ಫೋನ್ ಫೀಚರ್ಸ್ ಏನು? ಈ ಫೋನಿನಲ್ಲಿ ಮೂರು ಕ್ಯಾಮೆರಾ ನೀಡಲು ಕಾರಣಗಳೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೇಜೆಲ್ ಲೆಸ್ ಸ್ಕ್ರಿನ್!!

ಬೇಜೆಲ್ ಲೆಸ್ ಸ್ಕ್ರಿನ್!!

ಆಪಲ್ ಕಂಪೆನಿ ಐಫೋನ್ X ನಲ್ಲಿ ಅಳವಡಿಸಿದ್ದ OLED ಡಿಸ್‌ಪ್ಲೇ ಪ್ಯಾನಲ್ ಅನ್ನು "ಹುವಾವೆ ಪಿ20" ಸ್ಮಾರ್ಟ್‌ಫೋನ್ ಎಂದು ಹೇಳಲಾಗಿದೆ. ಬೇಜೆಲ್ ಲೆಸ್ ಸ್ಕ್ರಿನ್ ಸೂಪರ್ ರೆಟೀನಾ 2436 x 1125 ಪಿಕ್ಸಲ್ ಗುಣಮಟ್ಟದ ಡಿಸ್‌ಪ್ಲೇಯನ್ನು ಆಪಲ್‌ಗೆ ಸೆಡ್ಡುಹೊಡೆಯಲು ಹುವಾವೆ ಸಹ ತರುತ್ತಿದೆ ಎಂದು ಹೇಳಲಾಗಿದೆ.!!

ಪ್ರೊಸೆಸರ್ ಯಾವುದು!!

ಪ್ರೊಸೆಸರ್ ಯಾವುದು!!

ಪ್ರಸ್ತುತ ನಂಬರ್ ಒನ್ ಪ್ರೊಸೆಸರ್ ಎಂದು ಹೆಸರಾಗಿರುವ ಕ್ವಾಲ್ಕಮ್ ಕಂಪೆನಿಯ ಸ್ನ್ಯಾಪ್‌ಡ್ರಾಗನ್ 830SOC ಪ್ರೊಸೆಸರ್ ಅನ್ನು ಹುವಾವೆ ಪಿ20 ಫೋನಿನಲ್ಲಿ ತರಲಾಗುತ್ತಿದೆ ಎನ್ನಲಾಗಿದೆ. ಜೊತೆಗೆ ಆಂಡ್ರಾಯ್ಡ್ ಓರಿಯೋ ಹಾಗೂ ಇತ್ತೀಚಿನ EMUI 8.1 ವರ್ಷನ್ ಸಾಫ್ಟ್‌ವೇರ್ ಫೀಚರ್ಸ್ ಈ ಫೋನಿನಲ್ಲಿರಲಿವೆ.!!

Do you know what all u can do by Downloading Hike Messenger app.?
3 ರಿಯರ್ ಕ್ಯಾಮೆರಾ!!

3 ರಿಯರ್ ಕ್ಯಾಮೆರಾ!!

ಐಫೋನ್ X ಗಿಂತ ಸಣ್ಣ ಮತ್ತು ಹೆಚ್ಚು ವಿವೇಚನಾಯುಕ್ತ ಡೆಪ್ತ್ ಚಿತ್ರಗಳನ್ನು ತೆಗೆಯಲು RGB ಮತ್ತು AI ತಂತ್ರಜ್ಞಾನವಿರುವ ಮೂರು ಕ್ಯಾಮೆರಾ ನೀಡಲಾಗಿದೆ ಎಂದು ಕಂಪೆನಿಯ ಮೂಲಗಳಿಂದಲೇ ತಿಳಿದುಬಂದಿದೆ.!! RGB ಎಲ್‌ಇಡಿ ವಿಶೇಷ ಆಯ್ಕೆಯ 3 ರಿಯರ್ ಕ್ಯಾಮೆರಾಗಳ ವಿಶ್ವದ ಮೊದಲ ಫೋನ್ ಕ್ಯಾಮೆರಾ ಕಾರ್ಯನಿರ್ವಹಣೆ ಬಗ್ಗೆ ಕುತೋಹಲ ಏರ್ಪಟ್ಟಿದೆ.!!

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಹುವಾವೆ ಪಿ20 ಫೋನಿನ ಬಗ್ಗೆ EMUI 8 ಮತ್ತು ಆಂಡ್ರಾಯ್ಡ್ 8.0 ಹಾಗೂ ಮೂರು ಕ್ಯಾಮೆರಾಗಳ ಬಗ್ಗೆ ಮಾತ್ರ ಮಾಹಿತಿ ಹೊರಬಿದ್ದಿದೆ. ಚಿತ್ರಗಳು ಹೇಳುವಂತೆ ಮುಂಬಾಗದಲ್ಲಿ ಫಿಂಗರ್‌ಪ್ರಿಂಟ್ ಫೀಚರ್ಸ್ ಹೊಂದಿರುವ ಫೋನಿನ RAM ಮೆಮೊರಿ ಮತ್ತು ಬ್ಯಾಟರಿ ಬಗ್ಗೆ ಇಲ್ಲಿಯವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ.!!

ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ!!

ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ!!

ಹೈ ಎಂಡ್ ಸ್ಮಾರ್ಟ್‌ಫೋನ್ ಹುವಾವೆ ಪಿ20 ಮುಂದಿನ ತಿಂಗಳು ಪ್ಯಾರಿಸ್‌ನಲ್ಲಿ ಬಿಡುಗಡೆಯಾಗುದು ಪಕ್ಕಾ ಆಗಿದೆ.! ಮಾರ್ಚ್ 27ರಂದು ಹುವಾವೆ ಪಿ20 ಮಾರುಕಟ್ಟೆಗೆ ಎಂಟ್ರಿ ನೀಡಲಿದ್ದು, ಸ್ಮಾರ್ಟ್‌ಫೋನ್ ಪ್ರಿಯರ ಬಯಕೆಗಳನ್ನು ಮತ್ತು ಕುತೋಹಲಗಳನ್ನು ಈಡೇರಿಸುವುದೇ ಎಂಬುದನ್ನು ಕಾದುನೋಡಬೇಕು.!!

ಓದಿರಿ:ನಿರೀಕ್ಷಿತ ಮಾರಾಟವಾಗದ ನೋಕಿಯಾ ಫೋನ್‌ಗಳ ಬೆಲೆ ಇಳಿಕೆ!?..ನೋಕಿಯಾ 8 ಮೇಲೆ 8000 ಡಿಸ್ಕೌಂಟ್ಸ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
According to the latest reports, the well-known Chinese smartphone manufacturer Huawei will soon launch its new flagship Huawei P20. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot