ಅಕ್ಟೋಬರ್ 16ಕ್ಕೆ ಲಾಂಚ್ ಆಗಲಿದೆ ಹುವಾಯಿ ಮೇಟ್ ಪ್ರೋ..!
ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ಹುವಾಯಿ ತನ್ನ ಹುವಾಯಿ ಮೇಟ್ 20 ಸರಣಿಯ ಫೋನ್ ಗಳನ್ನು ಈ ವರ್ಷದ ಅಕ್ಟೋಬರ್ ನಲ್ಲಿ ಬಿಡುಗಡೆಗೊಳಿಸುವುದಕ್ಕೆ ನಿರ್ಧರಿಸಿದೆ.ಬರ್ಲಿನ್ ನಲ್ಲಿ ನಡೆದ ಆನ್ ಗೋಯಿಂಗ್ ಟೆಕ್ನಾಲಜಿ ಟ್ರೇಡ್ ಶೋ IFA 2018 ನಲ್ಲಿ ಹುವಾಯಿ ಸಂಸ್ಥೆ ಈ ಪ್ರಕಟಣೆಯನ್ನು ಮಾಡಿದೆ.
ಅಕ್ಟೋಬರ್ 16 ರಂದು ಹುವಾಯಿ ಸಂಸ್ಥೆ ಲಂಡನ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಹೊಸ ಡಿವೈಸ್ ಗಳನ್ನು ಅಂದೇ ಮಾರುಕಟ್ಟೆಗೆ ಪರಿಚಯಿಸುತ್ತದೆ. ಹುವಾಯಿ ಮೇಟ್ 20 ಸರಣಿಯ ಫೋನ್ ಗಳು ಇದೇ ಮೊದಲ ಬಾರಿಗೆ Kirin 980 ಪ್ರೊಸಸರ್ ನೊಂದಿಗೆ ಬರುವ ಹುವಾಯಿ ಫೋನ್ ಗಳಾಗಿವೆ.

Kirin 980 ವಿಶ್ವದ ಮೊದಲ 7nm ಪ್ರೊಸೆಸರ್ ಆಗಿದೆ.ಇದು 5ಜಿ ಗೂ ಕೂಡ ಬೆಂಬಲ ನೀಡುತ್ತದೆ ಮತ್ತು ಹಿಂದಿನ ಜನರೇಷನ್ನಿನ ಪ್ರೊಸೆಸರ್ ಗಳಿಗೆ ಹೋಲಿಸಿದರೆ ಇದು ಅತ್ಯಂತ ಹೆಚ್ಚು ಶಕ್ತಿಶಾಲಿಯಾಗಿದೆ ಮತ್ತು ಹೆಚ್ಚು ಪವರ್ ಎಫೀಶಿಯಂಟ್ ಕೂಡ ಆಗಿದೆ.
ಈಗಾಗಲೇ ಹರಡಿರುವ ವದಂತಿ ಅನುಸಾರವೇ ಹೇಳುವುದಾದರೆ, ಹುವಾಯಿ ಮೇಟ್ 20 ಡುಯಲ್ ಹಿಂಭಾಗದ ಕ್ಯಾಮರಾವನ್ನು ಹೊಂದಿರುತ್ತದೆ ಮತ್ತು ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಕೂಡ ಹಿಂಭಾಗದಲ್ಲಿಯೇ ಹೊಂದಿರಲಿದೆ ಎಂದು ಹೇಳಲಾಗಿದೆ.ನಾಚ್ ನಿಂದ ಕೂಡಿರುವ ಅತ್ಯಂತ ಚಿಕ್ಕ ಡಿಸ್ಪ್ಲೇಗಳನ್ನು ಈ ಫೋನ್ ಗಳು ಹೊಂದಿರಲಿವೆ ಎಂದು ತಿಳಿದುಬಂದಿದ್ದು ಮೂರು ಬಣ್ಣಗಳ ವೇರಿಯಂಟ್ ನಲ್ಲಿ ಲಭ್ಯವಾಗಲಿದೆ.
ಹುವಾಯಿ ಮೇಟ್ 20 ಪ್ರೋ ಜೊತೆಗೆ ಕಂಪೆನಿಯು ಇನ್ನೊಂದು ಮೇಟ್ 20 ಲೈಟ್ ನ್ನು ಕೂಡ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್ ಫೋನ್ 6.3-ಇಂಚಿನ FHD+ ಡಿಸ್ಪ್ಲೇ ಹೊಂದಿರಲಿದ್ದು ಐಫೋನ್ ಎಕ್ಸ್ ನಂತಹ ನಾಚ್ ನ್ನು ಹೊಂದಿರಲಿದೆ.

ಈ ಸ್ಮಾರ್ಟ್ ಫೋನ್ ಕಂಪೆನಿ ಮಿಡ್ ಸೆಗ್ಮೆಂಟ್ Kirin 710 ಪ್ರೊಸೆಸರ್ ನಿಂದ ಪವರ್ಡ್ ಆಗಿರಲಿದೆ. ಆಂಡ್ರಾಯ್ಡ್ 8.0 ಓರಿಯೋ ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುತ್ತದೆ. 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಒಳಗೊಂಡಿರಲಿದೆ.
ಡುಯಲ್ ಕ್ಯಾಮರಾ ಸೆಟ್ ಅಪ್ ನೊಂದಿಗೆ ಬರುವ ಈ ಫೋನ್ ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ ಕ್ಯಾಮರಾವನ್ನು ಒಳಗೊಂಡಿರುತ್ತದೆ. 3750mAh ಬ್ಯಾಟರಿಯನ್ನು ಇದು ಹೊಂದಿರುತ್ತದೆ ಎಂದು ಹೇಳಲಾಗಿದೆ.


Click it and Unblock the Notifications








