Home
ಮೊಬೈಲ್

ದೈತ್ಯ HUAWEI Mate XT ಲಾಂಚ್; ಮೂರು ಡಿಸ್ಪ್ಲೇಗಳು.. 1TB ಸ್ಟೋರೇಜ್.. ಬೆಲೆ ತಿಳಿದ್ರೆ ಶಾಕ್‌ ಆಗುತ್ತೆ!

ಹುವಾವೇ ಕಂಪನಿಯು ಹೊಸ ಫೋಲ್ಡಬಲ್ ಫೋನನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ಡಿಸ್ಪ್ಲೇಯೊಂದಿಗೆ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಹೌದು, ಹುವಾವೇ ಮೇಟ್ XT (HUAWEI Mate XT) ಸ್ಮಾರ್ಟ್‌ಫೋನ್ ಇಂದು ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ. ಇದು ವಿಶ್ವದ ಮೊದಲ ವಾಣಿಜ್ಯ ತ್ರಿ-ಮಡಿಸುವ ಫೋನ್ ಆಗಿದೆ. ಕಳೆದ ವರ್ಷ ಬಿಡುಗಡೆಯಾದ ಈ ಟ್ರೈ ಫೋಲ್ಡಿಂಗ್ ಫೋನನ್ನು ಸದ್ಯ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಬನ್ನಿ, ಈ ಹೊಸ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಹುವಾವೇ ಮೇಟ್ XT ಸ್ಮಾರ್ಟ್‌ಫೋನ್ ಟ್ರೈ-ಫೋಲ್ಡಿಂಗ್ (ಮೂರು ಡಿಸ್ಪ್ಲೇಗಳು) ಫೋನ್ ಆಗಿದೆ. ಇದು 10.2 ಇಂಚಿನ 3K ಡಿಸ್ಪ್ಲೇ ಹೊಂದಿದೆ. ಜೊತೆಗೆ 7.9 ಇಂಚು ಮತ್ತು 6.4 ಇಂಚಿನ ಡಿಸ್ಪ್ಲೇ ಕೂಡ ಲಭ್ಯವಿದೆ. ಇದು ಕಿರಿನ್ 9010 5G ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಜೊತೆಗೆ 5,600mAh ಬ್ಯಾಟರಿ, 66W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಒಳಗೊಂಡಿದೆ.

HUAWEI Mate XT ಲಾಂಚ್; ಮೂರು ಡಿಸ್ಪ್ಲೇಗಳು, 1TB ಸ್ಟೋರೇಜ್.. ಬೆಲೆ ನೋಡಿ

ಹುವಾವೇ ಮೇಟ್ XT ಬೆಲೆ

ಹುವಾವೇ ಮೇಟ್ XT ಫೋನಿನ 16GB RAM + 1TB GB ಸ್ಟೋರೇಜ್ ರೂಪಾಂತರವು 3,17,900 ರೂ.ಗಳ ಬೆಲೆಯಲ್ಲಿ ಬಿಡುಗಡೆಯಾಗಿದೆ. ಇದೇ ಸ್ಮಾರ್ಟ್‌ಫೋನ್ ಮಲೇಷ್ಯಾದಲ್ಲಿ 2,93,500 ರೂ. (RM 14,999) ಬೆಲೆ ಹೊಂದಿದೆ. ಪ್ರಸ್ತುತ, ಈ ಫೋಲ್ಡಬಲ್ ಮೊಬೈಲ್ ಮಲೇಷ್ಯಾದಲ್ಲಿ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟವಾಗಲಿದೆ. ಇದು ಸೌದಿ ಅರೇಬಿಯಾ, ಮೆಕ್ಸಿಕೊ, ಫಿಲಿಪೈನ್ಸ್ ಮತ್ತು ಯುಎಇ ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತದೆ. ಭಾರತದಲ್ಲಿ ಹುವಾವೇ ಮೇಟ್ ಎಕ್ಸ್‌ಟಿ ಲಭ್ಯತೆಯ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ. ಈ ಹುವಾವೇ ಫೋಲ್ಡಬಲ್ ಫೋನ್ ಕಪ್ಪು ಮತ್ತು ಕೆಂಪು ಬಣ್ಣಗಳಲ್ಲಿ ಬರುತ್ತದೆ.

ಹುವಾವೇ ಮೇಟ್ XT ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಹುವಾವೇ ಮೇಟ್ XT ಸ್ಮಾರ್ಟ್‌ಫೋನ್ 6.4 ಇಂಚಿನ OLED ಸಿಂಗಲ್ ಡಿಸ್ಪ್ಲೇ ಹೊಂದಿದೆ. ಇದು 2,232 × 1,008 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಜೊತೆಗೆ 7.9 ಇಂಚಿನ 2K ಡ್ಯುಯಲ್ ಡಿಸ್ಪ್ಲೇ ಲಭ್ಯವಿದೆ. ಇದು 2,232 × 3,184 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ. ಮತ್ತು 2,232 × 3,184 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 10.2 ಇಂಚಿನ ದೊಡ್ಡ 3K OLED ಡಿಸ್ಪ್ಲೇ ಸಹ ಇದೆ. ಮೂರು ಡಿಸ್ಪ್ಲೇಗಳು 90Hz ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರದ ಬೆಂಬಲ ಪಡೆದಿವೆ.

ಪ್ರೊಸೆಸರ್ ಸಾಮರ್ಥ್ಯ

ಹೊಸ ಹುವಾವೇ ಮೇಟ್ XT ಮೊಬೈಲ್ ಕಿರಿನ್ 9010 5G ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಫೋನ್ ಮೇಟ್ XT EMUI 14.2 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಈ ಮೊಬೈಲ್ 16GB RAM ನೊಂದಿಗೆ ಬರುತ್ತದೆ. ಇದಕ್ಕೆ ಪೂರಕವಾಗಿ 1TB ಸ್ಟೋರೇಜ್ ಆಯ್ಕೆ ಲಭ್ಯವಿದೆ.

HUAWEI Mate XT ಲಾಂಚ್; ಮೂರು ಡಿಸ್ಪ್ಲೇಗಳು, 1TB ಸ್ಟೋರೇಜ್.. ಬೆಲೆ ನೋಡಿ

ಕ್ಯಾಮೆರಾ ಸೆಟಪ್

ಹುವಾವೇ ಮೇಟ್ XT ಅಲ್ಟಿಮೇಟ್ ಡಿಸೈನ್ ಫೋನ್ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಜೊತೆಗೆ 12 ಮೆಗಾಪಿಕ್ಸೆಲ್ 5.5x ದ್ವಿತೀಯ (ಅಲ್ಟ್ರಾ ವೈಡ್ ಆಂಗಲ್ ಲೆನ್ಸ್) ಕ್ಯಾಮೆರಾ ಮತ್ತು 5.5x ಜೂಮ್ ಮತ್ತು OIS ಜೊತೆಗೆ 12 ಮೆಗಾಪಿಕ್ಸೆಲ್ (ಪೆರಿಸ್ಕೋಪ್ ಟೆಲಿಫೋಟೋ ಸೆನ್ಸಾರ್) ತೃತೀಯ ಕ್ಯಾಮೆರಾ ಇದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ನೂತನ ಹುವಾವೇ ಮೇಟ್ XT ಸ್ಮಾರ್ಟ್‌ಫೋನ್ 5,600mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 66W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಹುವಾವೇ ಮೇಟ್ XT ಮೊಬೈಲ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G, ವೈ-ಫೈ 802.11, ಬ್ಲೂಟೂತ್ 5.2 LE, ಜಿಪಿಎಸ್, ಎನ್‌ಎಫ್‌ಸಿ ಮತ್ತು ಯುಎಸ್‌ಬಿ 3.1 ಟೈಪ್ ಸಿ ಪೋರ್ಟ್‌ ಸೇರಿಂದತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Huawei Mate XT launched globally, but it is not coming to India for now: price, specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+