Huawei: 2 ಸೊಗಸಾದ ಫೋನ್ ಲಾಂಚ್; 60MP ಸೆಲ್ಫಿ ಕ್ಯಾಮೆರಾ.. 512GB ಸ್ಟೋರೇಜ್.. ಬೆಲೆ ಇಷ್ಟು!
ಟೆಕ್ ಬ್ರಾಂಡ್ ಹುವಾವೇ (Huawei) ಸದ್ದಿಲ್ಲದೆ 'ನೋವಾ 13' ಸರಣಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಎರಡು ಹೊಸ ಮೊಬೈಲ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವುಗಳೇ, ಹುವಾವೇ ನೋವಾ 13 (Huawei Nova 13) ಮತ್ತು ಹುವಾವೇ ನೋವಾ 13 ಪ್ರೊ (Huawei Nova 13 Pro) ಸ್ಮಾರ್ಟ್‌ಫೋನ್‌ಗಳು. ವಿಶೇಷವೆಂದರೆ, ಎರಡೂ ಫೋನ್‌ಗಳಲ್ಲಿ 60MP ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಬನ್ನಿ, ನೂತನ ಫೋನ್‌ಗಳ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಕಂಪನಿಯು ಪ್ರಸ್ತುತ, ಹುವಾವೇ ನೋವಾ 13 ಸರಣಿಯನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಮುಂಬರುವ ದಿನಗಳಲ್ಲಿ ಭಾರತ ಸೇರಿದಂತೆ ಇನ್ನಿತರೆ ಮಾರುಕಟ್ಟೆಗಳಿಗೆ ಪರಿಚಯಿಸಲಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು ಹುವಾವೇ ಕಿರಿನ್ 8000 ಆಕ್ಟಾಕೋರ್ ಪ್ರೊಸೆಸರ್ ಹೊಂದಿವೆ. ಜೊತೆಗೆ, ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಎರಡು ಫೋನ್‌ಗಳಲ್ಲಿ 5,000mAh ಬ್ಯಾಟರಿಯನ್ನು ಒದಗಿಸಲಾಗಿದೆ. ನೋವಾ 13 ಫೋನ್ 6.7 ಇಂಚಿನ ಡಿಸ್ಪ್ಲೇ ಮತ್ತು ನೋವಾ 13 ಪ್ರೋನಲ್ಲಿ 6.76 ಇಂಚಿನ ಡಿಸ್ಪ್ಲೇ ಹೊಂದಿದೆ.

ಹುವಾವೇ ನೋವಾ 13 ಸರಣಿಯ ಬೆಲೆ
ಹುವಾವೇ ನೋವಾ 13 ಫೋನಿನ 256GB ಸ್ಟೋರೇಜ್ ರೂಪಾಂತರವನ್ನು 31,800 ರೂ.ಗೆ (2699 ಯುವಾನ್) ಬಿಡುಗಡೆ ಮಾಡಲಾಗಿದೆ. 512GB ಸ್ಟೋರೇಜ್ ರೂಪಾಂತರದ ಬೆಲೆ 35,300 ರೂ. (2999 ಯುವಾನ್) ಆಗಿದೆ. ಇನ್ನೂ, 1TB ಸ್ಟೋರೇಜ್ ಬೆಲೆ 41,200 ರೂ. (3499 ಯುವಾನ್) ಇದೆ.
ಹುವಾವೇ ನೋವಾ 13 ಪ್ರೊನ ಆರಂಭಿಕ ಬೆಲೆ 43,600 ರೂ. (3699 ಯುವಾನ್) ಆಗಿದೆ. ಇದು ಫೋನಿನ 256GB ಸ್ಟೋರೇಜ್ ರೂಪಾಂತರದ ಬೆಲೆ ಆಗಿದೆ. 512GB ಸ್ಟೋರೇಜ್ ರೂಪಾಂತರವನ್ನು 47,100 ರೂ.ಗೆ (3999 ಯುವಾನ್) ಬಿಡುಗಡೆ ಮಾಡಲಾಗಿದೆ. 1TB ಸ್ಟೋರೇಜ್ ಬೆಲೆ 53,000 ರೂ. (4499 ಯುವಾನ್) ಆಗಿದೆ.
ಎಐ ವೈಶಿಷ್ಟ್ಯಗಳು
ಈ ಎರಡೂ ಸ್ಮಾರ್ಟ್‌ಫೋನ್‌ಗಳು ಹಲವು ಎಐ (AI) ಫೀಚರ್ಸ್‌ಗಳನ್ನು ಹೊಂದಿವೆ. ಇದರಲ್ಲಿ ಎಐ ಬೆಸ್ಟ್ ಎಕ್ಸ್‌ಪ್ರೆಶನ್, ಎಐ ಅಪ್‌ಸ್ಕೇಲಿಂಗ್, ಎಐ ಆಬ್ಜೆಕ್ಟ್ ರಿಮೂವಲ್ ಮತ್ತು ಎಐ ಸ್ಮಾರ್ಟ್ ಕಟೌಟ್ ಸೇರಿದಂತೆ ಇನ್ನಿತರ ಎಐ ವೈಶಿಷ್ಟ್ಯಗಳು ಲಭ್ಯವಿದೆ. ಇದು ಫೋನಿನಲ್ಲಿ ಫೋಟೋ ಎಡಿಟಿಂಗ್ ವಿಶೇಷವಾಗಿಸುತ್ತದೆ.
ಹುವಾವೇ ನೋವಾ 13 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಹುವಾವೇ ನೋವಾ 13 ಸ್ಮಾರ್ಟ್‌ಫೋನ್ 6.7 ಇಂಚಿನ ಪೂರ್ಣ ಎಚ್‌ಡಿ ಪಂಚ್ ಹೋಲ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಓಎಲ್‌ಇಡಿ ಪ್ಯಾನೆಲ್ ಆಗಿದೆ. 1084 x 2412 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 1440Hz PWM ಮಬ್ಬಾಗಿಸುವಿಕೆಯೊಂದಿಗೆ ಬರುತ್ತದೆ. ಜೊತೆಗೆ, ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಲಭ್ಯವಿದೆ.
ಪ್ರೊಸೆಸರ್ ಸಾಮರ್ಥ್ಯ
ಹೊಸ ಸ್ಮಾರ್ಟ್‌ಫೋನ್ ಕಂಪನಿಯ ಹುವಾವೇ ಕಿರಿನ್ 8000 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ ಫೋನ್ ಹಾರ್ಮನಿ 4.2 ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 12GB LPDDR4X RAM ಒಳಗೊಂಡಿದೆ.
ಕ್ಯಾಮೆರಾ ಸೆಟಪ್
ಹುವಾವೇ ನೋವಾ 13 ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಈ ಫೋನಿನಲ್ಲಿ 60 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ ಚಾರ್ಜಿಂಗ್
ಹುವಾವೇ ನೋವಾ 13 ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಸಿಲಿಕಾನ್ ಕಾರ್ಬನ್ ಋಣಾತ್ಮಕ ಎಲೆಕ್ಟ್ರೋಡ್ ಬ್ಯಾಟರಿಯಾಗಿದೆ. ಇತರ ಲಿಥಿಯಂ ಐಯಾನ್ ಬ್ಯಾಟರಿಗಳಿಗಿಂತ ವೇಗವಾಗಿ ಚಾರ್ಜ್ ಆಗುತ್ತದೆ. ಇದನ್ನು ಚಾರ್ಜ್ ಮಾಡಲು, 100W ಟರ್ಬೊ ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಹುವಾವೇ ನೋವಾ 13 ಪ್ರೊ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಹುವಾವೇ ನೋವಾ 13 ಪ್ರೊ ಸ್ಮಾರ್ಟ್‌ಫೋನ್ 6.76 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು LTPO ಓಎಲ್‌ಇಡಿ ಪ್ಯಾನೆಲ್ ಆಗಿದೆ. ಡಿಸ್ಪ್ಲೇಯು 1224 x 2776 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ ಹೊಂದಿದೆ. ಜೊತೆಗೆ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಲಭ್ಯವಿದೆ.
ಪ್ರೊಸೆಸರ್ ಸಾಮರ್ಥ್ಯ
ಹುವಾವೇ ನೋವಾ 13 ಪ್ರೊ ಕಂಪನಿಯ ಹುವಾವೇ ಕಿರಿನ್ 8000 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ ಫೋನ್ ಹಾರ್ಮನಿ 4.2 ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ಸೆಟಪ್
ಹುವಾವೇ ನೋವಾ 13 ಪ್ರೊ ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 60 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಜೊತೆಗೆ, 5x ಜೂಮ್ ಲೆನ್ಸ್ ಸಹ ಲಭ್ಯವಿದೆ. ಇದು 12 ಮೆಗಾಪಿಕ್ಸೆಲ್ 3x ಟೆಲಿಫೋಟೋ ಪೋರ್ಟ್ರೇಟ್ ಲೆನ್ಸ್ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಮ್ಯಾಕ್ರೋ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಹುವಾವೇ ನೋವಾ 13 ಪ್ರೊ ಕೂಡ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಸಿಲಿಕಾನ್ ಕಾರ್ಬನ್ ಋಣಾತ್ಮಕ ಎಲೆಕ್ಟ್ರೋಡ್ ಬ್ಯಾಟರಿ ಆಗಿದೆ. ಇದನ್ನು ಚಾರ್ಜ್ ಮಾಡಲು, 100W ಟರ್ಬೊ ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ.


Click it and Unblock the Notifications








