ಹುವಾವೆಯಿಂದ ಮತ್ತೊಂದು ನಾಲ್ಕು ಕ್ಯಾಮೆರಾದ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ..!
ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಿರುವ ಹುವಾವೆ, ಮತ್ತೊಂದು ಬೊಂಬಾಟ್ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲು ತುದಿಗಾಲಿನಲ್ಲಿ ನಿಂತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ನೊವಾ ಸರಣಿಗೆ ಮತ್ತೊಂದು ಸ್ಮಾರ್ಟ್ ಫೋನ್ ಅನ್ನು ಸೇರಿಸಲು ಹುವಾವೆ ಮುಂದಾಗಿದ್ದ, ಈ ಸ್ಮಾರ್ಟ್ ಫೋನ್ ಕುರಿತ ಮಾಹಿತಿಯೂ ಲೀಕ್ ಆಗಿದೆ. ಸ್ಮಾರ್ಟ್ ಫೋನ್ ವಿಷೇಶತೆಯೂ ತಿಳಿದು ಬಂದಿದೆ.

ಹುವಾವೆ ನೊವಾ 3 ಸ್ಮಾರ್ಟ್ ಫೋನ್ ಈಗಾಗಲೇ ನಿರ್ಮಾಣವಾಗಿದ್ದು, ಸರ್ಟಿಫಿಕೇಟ್ ಪಡೆದುಕೊಳ್ಳುವ ಹಂತವನ್ನು ತಲುಪಿದೆ. ಇದು ಸಹ ಟಾಪ್ ಎಂಡ್ ಸ್ಮಾರ್ಟ್ ಫೋನ್ ಸಾಲಿಗೆ ಸೇರಿಕೊಳ್ಳಲಿದೆ ಎನ್ನಲಾಗಿದ್ದು, ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ. ಈಗಾಗಲೇ ಹುವಾವೆ P 20 ಸ್ಮಾರ್ಟ್ ಫೋನ್ ಹೆಚ್ಚು ಸದ್ದು ಮಾಡುತ್ತಿದೆ. ಇದನ್ನು ಮೀರಿಸುವಂತೆ ಮಾರಾಟವಾಗುವ ನಿರೀಕ್ಷೆಯನ್ನು ಹುಟ್ಟಿಹಾಕಿದೆ.

ಹೊಸ ಮಾದರಿಯ ಡಿಸ್ ಪ್ಲೇ:
ಹುವಾವೆ ನೊವಾ 3 ಸ್ಮಾರ್ಟ್ ಫೋನ್ ಹೊಸ ಮಾದರಿಯ ಡಿಸ್ ಪ್ಲೇಯನ್ನು ಹೊಂದಿದ್ದು, 6.3 ಇಂಚಿನ FHD+ ಗುಣಮಟ್ಟದ ಡಿಸ್ ಪ್ಲೇಯನ್ನು ಹೊಂದಿದೆ. ಅಲ್ಲದೇ ಇದು 19.5:9 ಅನುಪಾತದಿಂದ ಕೂಡಿದ್ದು, ಸಾಮಾನ್ಯ ಫೋನ್ ಗಿಂತಲೂ ಎತರವಾಗಿ ಕಾಣಿಸಿಕೊಳ್ಳಲಿದೆ. ಅಲ್ಲದೇ ವಿಡಿಯೋ ನೋಡಲು ಮತ್ತು ಗೇಮ್ ಆಡಲು ಹೇಳಿ ಮಾಡಿಸಿದ ಹಾಗಿದೆ.

ಒಟ್ಟು ನಾಲ್ಕು ಕ್ಯಾಮೆರಾ:
ಹುವಾವೆ ನೊವಾ 3 ಸ್ಮಾರ್ಟ್ ಫೋನಿನಲ್ಲಿ ಒಟ್ಟು ನಾಲ್ಕು ಕ್ಯಾಮೆರಾವನ್ನು ನೀಡಲಾಗಿದ್ದು, ಬಳಕೆದಾರರಿಗೆ ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ ಡ್ಯುಯಲ್ ಲೆನ್ಸ್ ಕ್ಯಾಮೆರಾವನ್ನು ಅಳಡಿಸಿದಿದೆ. ಇದರಿಂದಾಗಿ ಸ್ಮಾರ್ಟ್ ಫೋನ್ ಫೋಟೋಗ್ರಾಫಿ ಇನ್ನಷ್ಟು ಉತ್ತಮವಾಗಲಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.

ವೇಗದ ಪ್ರೊಸೆಸರ್:
ಹುವಾವೆ ನೊವಾ 3 ಸ್ಮಾರ್ಟ್ ಫೋನ್ ನಲ್ಲಿ ಹುವಾವೆ ಕಿರನ್ 970 ಪ್ರೋಸೆಸರ್ ಅನ್ನು ಅಳವಡಿಸಲಾಗಿದ್ದು, ಇದೊಂದು ಟಾಪ್ ಎಂಡ್ ಪ್ರೋಸೆಸರ್ ಆಗಿದೆ. ಇದರಲ್ಲಿ GPU ಟರ್ಬೋವನ್ನು ನೀಡಲಾಗಿದ್ದು, ಹೆಚ್ಚಿನ ಗ್ರಾಫಿಕ್ಸ್ ಹೊಂದಿರುವ ಗೇಮ್ ಗಳನ್ನು ಸುಲಭವಾಗಿ ಆಡುವ ಅವಕಾಶವನ್ನು ಮಾಡಿಕೊಡಲಾಗಿದೆ.

6GB RAM:
ಹುವಾವೆ ನೊವಾ 3 ಸ್ಮಾರ್ಟ್ ಫೋನಿನಲ್ಲಿ 6 GB RAM ಕಾಣಬಹುದಾಗಿದೆ, ಇದಲ್ಲದೇ ಈ ಸ್ಮಾರ್ಟ್ ಫೋನ್ ಎರಡು ಆವೃತ್ತಿಯಲ್ಲಿ ಮಾರಾಟವಾಗಲಿದ್ದು, 64 GB ಮತ್ತು 128 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಇದಲ್ಲದೇ 256GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಆಂಡ್ರಾಯ್ಡ್ ಒರಿಯೋ:
ಹುವಾವೆ ನೊವಾ 3 ಸ್ಮಾರ್ಟ್ ಫೋನಿನಲ್ಲಿ ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ EMUI 8.2 ವನ್ನು ನೀಡಲಾಗಿದ್ದು, ಇದು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಕೆಯ ವಿಧಾನವನ್ನು ಬದಲಾಯಿಸಲಿದೆ. ಇದಲ್ಲದೇ 3650mAh ಬ್ಯಾಟರಿಯನ್ನು ನೀಡಿದ್ದು, ಇದರೊಂದಿಗೆ ವೇಗದ ಚಾರ್ಜಿಂಗ್ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಒಟ್ಟಿನಲ್ಲಿ ಬಳಕೆದಾರರಿಗೆ ಬೇಕಾದ ಎಲ್ಲಾ ಆಯ್ಕೆಯೂ ಇದರಲ್ಲಿದೆ.


Click it and Unblock the Notifications