Subscribe to Gizbot

20,000 ರೂ.ಗೆ 'ಆಪಲ್ ಎಕ್ಸ್' ವಿನ್ಯಾಸದಲ್ಲಿ ಬಿಡುಗಡೆಯಾಯ್ತು 'ಹುವಾವೆ' ಹೈ ಎಂಡ್ ಸ್ಮಾರ್ಟ್‌ಫೋನ್!!

Written By:

ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿರುವ ಚೀನಾದ ಹುವಾವೆ ಕಂಪೆನಿ ಬಜೆಟ್ ಬೆಲೆ ಮತ್ತೊಂದು ಅದ್ಬುತ ಸ್ಮಾರ್ಟ್‌ಪೋನ್ ಒಂದನ್ನು ಬಿಡುಗಡೆ ಮಾಡಿದೆ.! ಡ್ಯುಯಲ್ ಕ್ಯಾಮೆರಾ, 19:9 ಡಿಸ್‌ಪ್ಲೇ ಹಾಗೂ ವಿಶೇಷವಾಗಿ ಆಪಲ್ ಎಕ್ಸ್ ವಿನ್ಯಾಸವಿರುವ ಹುವಾವೆ ನೋವಾ 3ಇ ಸ್ಮಾರ್ಟ್‌ಫೋನ್ ಪರಿಚಯಿಸಿದೆ.!!

ಇದೇ ಮೊದಲ ಬಾರಿಗೆ ಆಪಲ್ ಎಕ್ಸ್ ವಿನ್ಯಾಸವನ್ನು ಹೊಂದಿರುವ ಕ್ಲೋನ್ ಸ್ಮಾರ್ಟ್‌ಫೋನ್ ಒಂದು ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿದ್ದು, ಹೈ ಎಂಡ್ ಫೀಚರ್ಸ್‌ಗಳನ್ನು ಹೊತ್ತಿರುವ ನೂತನ ಹುವಾವೆ ನೋವಾ 3ಇ ಸ್ಮಾರ್ಟ್‌ಫೋನ್ ಅತ್ಯಂತ ಕಡಿಮೆ ಬೆಲೆಗೆ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗಿರುವುದು ವಿಶ್ವ ಮೊಬೈಲ್ ಮಾರುಕಟ್ಟೆಗೆ ಶಾಕ್ ನೀಡಿದೆ.!!

20,000 ರೂ.ಗೆ 'ಆಪಲ್ ಎಕ್ಸ್' ವಿನ್ಯಾಸದಲ್ಲಿ ಬಿಡುಗಡೆಯಾಯ್ತು ಹುವಾವೆ ಫೋನ್!!

ಹುವಾವೆ ಕಂಪೆನಿ ನೋವಾ 3ಇ ಸ್ಮಾರ್ಟ್‌ಫೋನ್ ಮೊದಲಿಗೆ ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆ ಮಾಡಿದ್ದು, ಹಾಗಾದರೆ, ನೋವಾ 3ಇ ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು? ನೋವಾ 3ಇ ಸ್ಮಾರ್ಟ್‌ಫೋನ್ ಬೆಲೆ ಎಷ್ಟು? ಹುವಾವೆ ನೋವಾ 3ಇ ಸ್ಮಾರ್ಟ್‌ಫೋನ್ ವಿಶೇಷತೆಗಳೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಹುವಾವೆ ನೋವಾ 3ಇ ಸ್ಮಾರ್ಟ್‌ಫೋನ್ 5.84 ಇಂಚಿನ ಸಂಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. 19:9 ಆಕಾರ ಅನುಪಾತದ 1080x2280 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ ಸ್ಕ್ರೀನ್ 2.5 ಕರ್ವಡ್ ಗ್ಲಾಸ್ ಪ್ರೊಟೆಕ್ಷನ್ ಹೊಂದಿದೆ. ಈ ಎಲ್ಲಾ ಫೀಚರ್ಸ್‌ಗಳಿಗಿಂತ ಸ್ಮಾರ್ಟ್‌ಫೋನ್ ಆಪಲ್ ಎಕ್ಸ್‌ ವಿನ್ಯಾಸವನ್ನು ಹೊಂದಿರುವುದು ವಿಶೇಷವಾಗಿದೆ.!!

ಪ್ರೊಸೆಸರ್ ಮತ್ತು ಒಎಸ್!!

ಪ್ರೊಸೆಸರ್ ಮತ್ತು ಒಎಸ್!!

36GHzನ ನಾಲ್ಕು ಕೋರ್‌ಗಳು ಹಾಗೂ 1.7GHz ನ ನಾಲ್ಕು ಕೋರ್‌ಗಳನ್ನು ಹೊಂದಿರುವ ಆಕ್ಟಾ-ಕೋರ್ ಕಿರಿನ್ 659 Soc ಪ್ರೊಸೆಸರ್ ಅನ್ನು ಹುವಾವೆ ನೋವಾ 3ಇ ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಇನ್ನು ಆಂಡ್ರಾಯ್ಡ್ 8.0 ಓರಿಯೊ-ಆಧಾರಿತ ಇಎಂಯುಐ 8.0 ಯಲ್ಲಿ ಸ್ಮಾರ್ಟ್‌ಫೋನ್ ಕಾರ್ಯಾಚರಣೆ ನೀಡಲಿದೆ.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

ಹುವಾವೆ ನೋವಾ 3ಇ ಸ್ಮಾರ್ಟ್‌ಫೋನ್ 4GB RAM ವೆರಿಯಂಟ್‌ನಲ್ಲಿ ಮಾತ್ರ ಬಿಡುಗಡೆಯಾಗಿದೆ. ಆದರೆ ಸ್ಟೋರೇಜ್ ವಿಷಯದಲ್ಲಿ ಎರಡು ಆಯ್ಕೆಯನ್ನು ಸ್ಮಾರ್ಟ್‌ಪೋನ್ ಹೊಂದಿದ್ದು, 64GB ಮತ್ತು 128GB ಸಂಗ್ರಹಣಾ ಆಯ್ಕೆಗಳನ್ನು ಹೊಂದಿದೆ. ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 256GB ವರೆಗೆ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.!!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

16 ಮೆಗಾಪಿಕ್ಸೆಲ್ ಹಾಗೂ ಪ್ರಾಥಮಿಕ ಇಮೇಜ್ ಹಾಗೂ 2 ಮೆಗಾಪಿಕ್ಸೆಲ್ ಸೆಕೆಂಡರಿ ಇಮೇಜ್ ಸಂವೇದಕವನ್ನು ಹೊಂದಿರುರು ಎರಡು ರಿಯರ್ ಕ್ಯಾಮೆರಾಗಳನ್ನು ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಇನ್ನು f / 2.0 ಅಪಾರ್ಚರ್‌ನೊಂದಿಗೆ 24 ಮೆಗಾಪಿಕ್ಸೆಲ್ ಸೋನಿ IMX576 ಸೆಲ್ಫಿ ಕ್ಯಾಮೆರಾವನ್ನು ಸ್ಮಾರ್ಟ್‌ಪೋನ್ ಹೊಂದಿದೆ.!!

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT
ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

3000mAh ಬ್ಯಾಟರಿ ಶಕ್ತಿಯನ್ನು ಹೊಂದಿರುವ ಹುವಾವೆ ನೋವಾ 3ಇ ಸ್ಮಾರ್ಟ್‌ಫೋನ್ 4 ಜಿವೋಲ್ಟ್, ಯುಎಸ್‌ಬಿ ಟೈಪ್ ಸಿ, 3.5 ಎಂಎಂ ಹೆಡ್ಫೋನ್ ಜ್ಯಾಕ್, ಎ-ಜಿಪಿಎಸ್, ಎನ್ಎಫ್ಸಿಯಂತಹ ಫೀಚರ್ಸ್‌ಗಳನ್ನು ನೀಡಲಾಗಿದೆ. ಇನ್ನು ಬೆಲೆಯ ವಿಷಯಕ್ಕೆ ಬಂದರೆ 64GB ವೆರಿಯಂಟ್ ಸ್ಮಾರ್ಟ್‌ಫೋನ್ ಬೆಲೆ 20,600 ರೂ.ಗಳಾಗಿದ್ದರೆ, 128GB ಸ್ಮಾರ್ಟ್‌ಫೋನ್ ಬೆಲೆ 22,600 ರೂ.ಗಳಾಗಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Huawei Nova 3e has been launched in China in Black, Blue, and Rose Gold colour options. The new smartphone. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot