Subscribe to Gizbot

ಹುವಾವೆ ಪಿ10 ಸ್ಮಾರ್ಟ್‌ಫೋನ್ ಏಕೆ ಖರೀದಿಸಬೇಕು? 4 ಕಾರಣಗಳು!!

Written By:

ಆಪಲ್, ಸ್ಯಾಮ್‌ಸಂಗ್ ಕಂಪೆನಿಗಳಿಗೆ ಸೆಡ್ಡುಹೊಡೆದು ನಿಂತ ಮೊದಲ ಸ್ಮಾರ್ಟ್‌ಫೋನ್ ಕಂಪೆನಿ ಹುವಾವೆ ಇದೀಗ ಅತ್ಯಾಧುನಿಕ ಫೀಚರ್‌ ಮತ್ತು ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.!! ಇದಕ್ಕೆ  ಹೊಸ ಸೇರ್ಪಡೆ ಹುವಾವೆ ಪಿ10!!

ಹೌದು, ಗ್ಯಾಲಕ್ಸಿ 7 ಮತ್ತು ಐಫೋನ್ ಗಿಂತಲೂ ಹೆಚ್ಚು ಫೀಚರ್ಸ್ ಮತ್ತು ಆಕರ್ಷಕ ವಿನ್ಯಾಸ ಮತ್ತು ಅತ್ಯುತ್ತಮ ಕಾರ್ಯನಿರ್ವಹಣೆ ಹೊಂದಿದ್ದ ಹುವಾವೆ ಪಿ9 ಸ್ಮಾರ್ಟ್‌ಫೋನ್‌ ಜಗತ್ತಿನಾದ್ಯಂತ ಬಳಕೆದಾರರ ಮನಗೆದ್ದಿತ್ತು. ಇದೀಗ ಹುವಾವೆ ಪಿ9ಗಿಂತಲೂ ಹೆಚ್ಚು ಫೀಚರ್ಸ್ ಹೊಂದಿ ಬಿಡುಗಡೆಯಾಗುತ್ತಿರುವ ಹುವಾವೆ ಪಿ10 ಎಲ್ಲರಲ್ಲೂ ಕುತೋಹಲ ಮೂಡಿಸಿದೆ!!

ಹುವಾವೆ ಪಿ10 ಸ್ಮಾರ್ಟ್‌ಫೋನ್ ಏಕೆ ಖರೀದಿಸಬೇಕು? 4 ಕಾರಣಗಳು!!

ಓದಿರಿ: ಶಾಕಿಂಗ್ ನ್ಯೂಸ್..ಬೆಂಗಳೂರಲ್ಲಿ ತಯರಾಗೊ ಐಫೋನ್ ಬೆಲೆ ಕೇವಲ 10,000!!

ಹಾಗಾದರೆ ಹುವಾವೆ ಪಿ10 ಸ್ಮಾರ್ಟ್‌ಫೋನ್‌ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ, ಬೆಲೆ ಎಷ್ಟು? ಗ್ಯಾಲಕ್ಸಿ 7 ಮತ್ತು ಐಫೋನ್ ಗಿಂತಲೂ ಹೆಚ್ಚು ಫೀಚರ್ಸ್ ಏನಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜರ್ಮನ್ ಆಪ್ಟಿಕಲ್ಸ್ ಡ್ಯುಯಲ್ ಕ್ಯಾಮೆರಾ!!

ಜರ್ಮನ್ ಆಪ್ಟಿಕಲ್ಸ್ ಡ್ಯುಯಲ್ ಕ್ಯಾಮೆರಾ!!

ಹುವಾವೆ ಪಿ10 ಡಿವೈಸ್ ಜರ್ಮನ್ ಆಪ್ಟಿಕಲ್ಸ್ Leica ಬ್ರ್ಯಾಂಡಿಂಗ್ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದೆ!!. ಹುವಾವೆ ಪಿ9 ನಂತೆ ಪಿ10 ಸಹ 20MP+12MP ಸೆನ್ಸಾರ್ ಕ್ಯಾಮೆರಾವನ್ನು ಹೊಂದಲಿದೆ ಆದರೆ, ಪಿ10 ಹಚ್ಚಿನ ಅಪ್‌ಡೇಟ್ ಹೊಂದಿದ್ದು, ಕ್ಯಾಮೆರಾದಲ್ಲಿ ಆಪ್ಟಿಕಲ್ ಇಮೇಜ್ ಫೀಚರ್ಸ್ ಇದೆ.!!

ಕಿರಿನ್ 960 ಚಿಪ್‌ಸೆಟ್ ಮತ್ತು ಆಂಡ್ರಾಯ್ಡ್ 7.0 ನ್ಯೂಗಾ!!

ಕಿರಿನ್ 960 ಚಿಪ್‌ಸೆಟ್ ಮತ್ತು ಆಂಡ್ರಾಯ್ಡ್ 7.0 ನ್ಯೂಗಾ!!

ಹುವಾವೆ ಪಿ10 ಸ್ಮಾರ್ಟ್‌ಫೋನ್ 2.3GHz ಆಕ್ಟಾ-ಕೋರ್ ಕಿರಿನ್ 960 ಚಿಪ್‌ಸೆಟ್ ಮತ್ತು ಆಂಡ್ರಾಯ್ಡ್ 7.0 ನ್ಯೂಗಾ ಆಪರೇಟಿಂಗ್ ಸಿಸ್ಟಮ್‌ನಿಂದ ರನ್‌ ಆಗಲಿದೆ.!! ಪ್ರಸ್ತುತ ಮಾರುಕಟ್ಟೆಯಲ್ಲಿರುವ ಅತ್ಯಾಧುನಿಕ ಸಾಫ್ಟವೇರ್ ಹುವಾವೆ ಪಿ10ನಲ್ಲಿ ಲಭ್ಯವಿದೆ.!!

6GB RAM ಮತ್ತು 256GB ಸ್ಟೋರೇಜ್

6GB RAM ಮತ್ತು 256GB ಸ್ಟೋರೇಜ್

ಈ ಹಿಂದಿನ ಸರಣಿ ಡಿವೈಸ್‌ ಹುವಾವೆ p9ಗಿಂತ ಎರಡು ಪಟ್ಟು ಹೆಚ್ಚು RAM ಸಾಮರ್ಥ್ಯವನ್ನು ಹುವಾವೆ ಪಿ10 ಹೊಂದಿದೆ. 6GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯ ಹೊಂದುವ ಮೂಲಕ ಸ್ಮಾರ್ಟ್‌ಫೋನ್ ಪ್ರಿಯರ ಹುಬ್ಬೇರಿಸಿದೆ.!!

ಬೆಲೆ ಎಷ್ಟು?

ಬೆಲೆ ಎಷ್ಟು?

ಇಷ್ಟೇಲ್ಲಾ ಫೀಚರ್ಸ್ ಹೊಂದಿರುವ ಹುವಾವೆ ಸ್ಮಾರ್ಟ್‌ಫೋನ್ 35 ಸಾವಿರ ರೂ.ಗಳಿಂದ 38ಸಾವಿರ ರೂಪಾಯಿಗಳ ಬೆಲೆಯನ್ನು ಹೊಂದಿದೆ.!! ಕಡಿಮೆ ಬೆಲೆಯಲ್ಲೂ ಹೈ ಎಂಡ್‌ ಸ್ಮಾರ್ಟ್ಫೋನ್ ಆಗಿರುವ ಹುವಾವೆ ಪಿ10 ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Huawei's latest runs right into 2017's flashiest flagship. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot