Subscribe to Gizbot

40MP ಜೊತೆಗೆ ತ್ರಿಪಲ್ ಕ್ಯಾಮೆರಾ, ಸೆಲ್ಫಿಗಾಗಿ 24MP ಕ್ಯಾಮೆರಾದ ಸ್ಮಾರ್ಟ್‌ಫೋನ್‌ ಶೀಘ್ರವೇ ನಮ್ಮ ಮಾರುಕಟ್ಟೆಗೆ.!

Written By:

ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಲೇ ಲಾಂಚ್ ಆಗಿರುವ ಹುವಾವೆ P20 ಸ್ಮಾರ್ಟ್‌ಫೋನ್‌ ತನ್ನ ವಿಶೇಷತೆಗಳಿಂದಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಮೂರು ಹಿಂಬದಿಯ ಕ್ಯಾಮೆರಾವನ್ನು ಹೊಂದುವ ಮೂಲಕ ಸ್ಮಾರ್ಟ್‌ಫೋನ್‌ ಫೋಟೋ ವಿಭಾಗದಲ್ಲಿಯೇ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ. ಈ P20 ಮತ್ತು P20 ಪ್ರೋ ಸ್ಮಾರ್ಟ್‌ಫೋನ್‌ಗಳು ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿಯೂ ಕಾಣಿಸಿಕೊಳ್ಳಿದೆ ಎನ್ನಲಾಗಿದ್ದು, ಈ ಕುರಿತು ಕಂಪನಿ ಟೀಸರ್ ಸಹ ರಿಲೀಸ್ ಮಾಡಿದೆ.

ಹಿಂಭಾಗದಲ್ಲಿ 40MP ಜೊತೆಗೆ ತ್ರಿಪಲ್ ಕ್ಯಾಮೆರಾ, ಸೆಲ್ಫಿಗಾಗಿ 24MP ಕ್ಯಾಮೆರಾ..!

ಆಪಲ್-ಸ್ಯಾಮ್‌ಸಂಗ್ ಕಂಪನಿಗಳಗೆ ಸೆಡ್ಡು ಹೊಡೆಯುವ ಸಾಮರ್ಥ್ಯ ಹೊಂದಿರುವ ಚೀನಾ ಮೂಲದ ಹುವಾವೆ ಕಂಪನಿ, ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ P20 ಮತ್ತು P20 ಪ್ರೋ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಅಲೆಯನ್ನು ಹುಟ್ಟಿಸಿದೆ. ಹುವಾವೆ ಭಾರತದಲ್ಲಿ ಹಾನರ್ ಬ್ರಾಂಡಿನಡಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುತ್ತಿದ್ದು, ಇದೇ ಮಾದರಿಯಲ್ಲಿ P20 ಮತ್ತು P20 ಪ್ರೋ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲಿದೆ.

P20 ಪ್ರೋ ಸ್ಮಾರ್ಟ್‌ಫೋನ್‌ಗಳು ಟಾಪ್ ಎಂಡ್ ವಿಶೇಷತೆಗಳನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿಯೇ ಮೊದಲ ಮೂರು ಹಿಂಬದಿ ಕ್ಯಾಮೆರಾವನ್ನು ಹೊಂದಿರುವ ಸ್ಮಾರ್ಟ್‌ಫೋನ್‌ ಎನ್ನಲಾಗಿದ್ದು, ಹೊಸ ಮಾದರಿಯ ವಿನ್ಯಾಸದೊಂದಿಗೆ ಕಾಣಿಸಿಕೊಂಡಿದೆ. P20 ಪ್ರೋ ಸ್ಮಾರ್ಟ್‌ಫೋನ್‌ ನಲ್ಲಿ 40MP ಪ್ರೈಮರಿ ಕ್ಯಾಮೆರಾದೊಂದಿಗೆ 20MP ಮತ್ತು 8MP ಕ್ಯಾಮೆರಾವನ್ನು ಸಹ ನೀಡಲಾಗಿದೆ. ಒಟ್ಟು ಮೂರು ಕ್ಯಾಮೆರಾವನ್ನು ನೋಡಬಹುದಾಗಿದೆ. P20 ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, 12 MP + 20 MP ಕ್ಯಾಮೆರಾವನ್ನು ಇದರಲ್ಲಿ ಕಾಣಬಹುದಾಗಿದೆ.

ಹಿಂಭಾಗದಲ್ಲಿ 40MP ಜೊತೆಗೆ ತ್ರಿಪಲ್ ಕ್ಯಾಮೆರಾ, ಸೆಲ್ಫಿಗಾಗಿ 24MP ಕ್ಯಾಮೆರಾ..!

ಈ ಎರಡು ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ 24 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, ಉತ್ತಮ ಸೆಲ್ಫಿಗಳನ್ನು ಕ್ಲಿಕ್ ಮಾಡಬಹುದಾಗಿದೆ. ಅಲ್ಲದೇ ಕೃತಕ ಬುದ್ದಿ ಮತ್ತೆಯನ್ನು ಫೋಟೋಗಳನ್ನು ಸೆರೆಹಿಡಿಯುವ ಸಲುವಾಗಿ ನೀಡಲಾಗಿದೆ. P20 ಪ್ರೋ ಸ್ಮಾರ್ಟ್‌ಫೋನ್‌ 4000mAh ಬ್ಯಾಟರಿಯನ್ನು ಹೊಂದಿದ್ದು, P20 ಸ್ಮಾರ್ಟ್‌ಫೋನ್‌ 3,400mAh ಬ್ಯಾಟರಿಯೊಂದಿಗೆ ಕಾಣಿಸಿಕೊಳ್ಳಲಿದೆ.

ಐಫೋನ್ X ಮಾದರಿಯಲ್ಲಿ P20 ಮತ್ತು P20 ಪ್ರೋ ಸ್ಮಾರ್ಟ್‌ಫೋನ್‌ಗಳಲ್ಲಿ ಮುಂಭಾಗದಲ್ಲಿ ಡಿಸ್‌ಪ್ಲೇಯಲ್ಲಿ ನೋಚ್ ಅನ್ನು ಕಾಣಬಹುದಾಗಿದೆ. P20 ಪ್ರೋ ನಲ್ಲಿ 6.1 ಇಂಚಿನ FHD+ ಗುಣಮಟ್ಟದ ಅಮೊಲೈಡ್ ಡಿಸ್‌ಪ್ಲೇಯನ್ನು ಹಾಗೂ P20 ಸ್ಮಾರ್ಟ್‌ಫೋನಿನಲ್ಲಿ 5.8 ಇಂಚಿನ FHD+ ಗುಣಮಟ್ಟದ IPS ಡಿಸ್‌ಪ್ಲೇಯನ್ನು ನೀಡಲಾಗಿದೆ. ಫುಲ್‌ ಸ್ಕ್ರಿನ್ ವಿನ್ಯಾಸವನ್ನು ಈ ಸ್ಮಾರ್ಟ್‌ಫೋನ್‌ಗಳಲ್ಲಿ ನೋಡಬಹುದಾಗಿದೆ.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?

ಮಾರುಕಟ್ಟೆಯಲ್ಲಿ ಲಾಂಚ್ ಆಗಲಿರುವ ಹುವಾವೆ ಸ್ಮಾರ್ಟ್‌ಫೋನ್ ಬೆಲೆಗಳ ಈ ರೀತಿ ಇದೆ.ಹುವಾವೆ P20 ಪ್ರೋ ಈ ಸರಣಿಯಲ್ಲಿ ಟಾಪ್ ಫೋನ್‌ ಆಗಿದ್ದು ರೂ.73000ಕ್ಕೆ ಮಾರಾಟವಾಗಲಿದೆ. ಇದೇ ಮಾದರಿಯಲ್ಲಿ ಹುವಾವೆ P20 ರೂ.54000ಕ್ಕೆ ದೊರೆಯಲಿದೆ ಎನ್ನಲಾಗಿದೆ.

English summary
Huawei P20, P20 Pro coming to India soon, company confirms. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot