Home
ಮೊಬೈಲ್

ಏಪ್ರಿಲ್ 24ಕ್ಕೆ ಮಾರುಕಟ್ಟೆಗೆ 40MP ಟ್ರಿಪಲ್ ಕ್ಯಾಮೆರಾ ಸ್ಮಾರ್ಟ್‌ಫೋನ್‌..! ಬೆಲೆ ಎಷ್ಟು..?

By Srinidhi

ಜಾಗತಿಕವಾಗಿ ಟಾಪ್​ ಕಂಪನಿಗಳಾದ ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪನಿಗಳಿಗೆ ಸೆಡ್ಡು ಹೊಡೆಯುತ್ತಿರುವ ಹುವಾವೆ, ಈಗಾಗಲೇ ಜಾಗತಿಕ ಮಾರಕಟ್ಟೆಯುಲ್ಲಿ ಟ್ರಿಪಲ್ ​(ಮೂರು) ಕ್ಯಾಮೆರಾ ಹೊಂದಿರುವ ಹುವಾವೆ P20 ಮತ್ತು P20 ಪ್ರೋ ಸ್ಮಾರ್ಟ್​ಫೋನ್​ ಅನ್ನು ಲಾಂಚ್ ಮಾಡಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಹಾನರ್ ಬ್ರಾಂಡಿನಡಿಯಲ್ಲಿ ಬಿಡುಗಡೆ ಮಾಡಲಿದೆ.

ಏಪ್ರಿಲ್ 24ಕ್ಕೆ ಮಾರುಕಟ್ಟೆಗೆ 40MP ಟ್ರಿಪಲ್ ಕ್ಯಾಮೆರಾ ಸ್ಮಾರ್ಟ್‌ಫೋನ್‌..!

ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಹುವಾವೆ P20 ಮತ್ತು ಹುವಾವೆ P20 ಪ್ರೊ ಸ್ಮಾರ್ಟ್‌ಫೋನ್‌ಗಳು ಭಾರೀ ಬೇಡಿಕೆಯನ್ನು ಸೃಷ್ಠಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಇದೇ ಏಪ್ರಿಲ್ 24ರಂದು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ. ಈಗಾಗಲೇ ಟ್ರಿಪಲ್ ​(ಮೂರು) ಕ್ಯಾಮೆರಾ ಹೊಂದಿರುವ ಹುವಾವೆ P20 ಪ್ರೋ ಬಗ್ಗೆ ಮೆಚ್ಚುಗೆ ಮಾತುಗಳು ವ್ಯಕ್ತವಾಗಿದ್ದು, ಕ್ಯಾಮೆರಾ ವಿಭಾಗಕ್ಕೆ ಹೆಚ್ಚಿನ ಪ್ರಶಂಸೆ ದೊರೆಕಿದೆ.

ಹುವಾವೆ P20 ಸ್ಮಾರ್ಟ್​ಫೋನ್:

ಹುವಾವೆ P20 ಸ್ಮಾರ್ಟ್​ಫೋನ್:

ಐಫೋನ್ X ಮಾದರಿಯಲ್ಲಿ P20 ಮತ್ತು P20 ಪ್ರೋ ಸ್ಮಾರ್ಟ್‌ಫೋನ್‌ಗಳಲ್ಲಿ ಮುಂಭಾಗದಲ್ಲಿ ಡಿಸ್‌ಪ್ಲೇಯಲ್ಲಿ ನೋಚ್ ಅನ್ನು ಕಾಣಬಹುದಾಗಿದೆ. P20 ಪ್ರೋ ನಲ್ಲಿ 6.1 ಇಂಚಿನ FHD+ ಗುಣಮಟ್ಟದ ಅಮೊಲೈಡ್ ಡಿಸ್‌ಪ್ಲೇಯನ್ನು ಹಾಗೂ P20 ಸ್ಮಾರ್ಟ್‌ಫೋನಿನಲ್ಲಿ 5.8 ಇಂಚಿನ FHD+ ಗುಣಮಟ್ಟದ IPS ಡಿಸ್‌ಪ್ಲೇಯನ್ನು ನೀಡಲಾಗಿದೆ. ಫುಲ್‌ ಸ್ಕ್ರಿನ್ ವಿನ್ಯಾಸವನ್ನು ಈ ಸ್ಮಾರ್ಟ್‌ಫೋನ್‌ಗಳಲ್ಲಿ ನೋಡಬಹುದಾಗಿದೆ.

ಹುವಾವೆ P20 ಪ್ರೋ ಸ್ಮಾರ್ಟ್​ಫೋನ್​ ಕ್ಯಾಮೆರಾ:

ಹುವಾವೆ P20 ಪ್ರೋ ಸ್ಮಾರ್ಟ್​ಫೋನ್​ ಕ್ಯಾಮೆರಾ:

P20 ಪ್ರೋ ಸ್ಮಾರ್ಟ್‌ಫೋನ್‌ಗಳು ಟಾಪ್ ಎಂಡ್ ವಿಶೇಷತೆಗಳನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿಯೇ ಮೊದಲ ಮೂರು ಹಿಂಬದಿ ಕ್ಯಾಮೆರಾವನ್ನು ಹೊಂದಿರುವ ಸ್ಮಾರ್ಟ್‌ಫೋನ್‌ ಎನ್ನಲಾಗಿದ್ದು, ಹೊಸ ಮಾದರಿಯ ವಿನ್ಯಾಸದೊಂದಿಗೆ ಕಾಣಿಸಿಕೊಂಡಿದೆ. P20 ಸ್ಮಾರ್ಟ್​ಫೋನ್ ಡ್ಯುಯಲ್ ಕ್ಯಾಮೆರಾದೊಂದಿಗೆ ದೊರೆಯಲಿದೆ.

ಕ್ಯಾಮೆರಾ ವಿಶೇಷತೆ:

ಕ್ಯಾಮೆರಾ ವಿಶೇಷತೆ:

ಹುವಾವೆ P20 ಪ್ರೋ ಸ್ಮಾರ್ಟ್‌ಫೋನ್‌ ನಲ್ಲಿ 40MP ಪ್ರೈಮರಿ ಕ್ಯಾಮೆರಾದೊಂದಿಗೆ 20MP ಮತ್ತು 8MP ಕ್ಯಾಮೆರಾವನ್ನು ಸಹ ನೀಡಲಾಗಿದೆ. ಒಟ್ಟು ಮೂರು ಕ್ಯಾಮೆರಾವನ್ನು ನೋಡಬಹುದಾಗಿದೆ. ಹುವಾವೆ P20 ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, 12 MP + 20 MP ಕ್ಯಾಮೆರಾವನ್ನು ಇದರಲ್ಲಿ ಕಾಣಬಹುದಾಗಿದೆ.

How to Check Your Voter ID Card Status (KANNADA)
ಬೆಸ್ಟ್ ಸೆಲ್ಫಿ ಕ್ಯಾಮೆರಾ;

ಬೆಸ್ಟ್ ಸೆಲ್ಫಿ ಕ್ಯಾಮೆರಾ;

ಈ ಎರಡು ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ 24 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, ಉತ್ತಮ ಸೆಲ್ಫಿಗಳನ್ನು ಕ್ಲಿಕ್ ಮಾಡಬಹುದಾಗಿದೆ. ಅಲ್ಲದೇ ಕೃತಕ ಬುದ್ದಿ ಮತ್ತೆಯನ್ನು ಫೋಟೋಗಳನ್ನು ಸೆರೆಹಿಡಿಯುವ ಸಲುವಾಗಿ ನೀಡಲಾಗಿದೆ. P20 ಪ್ರೋ ಸ್ಮಾರ್ಟ್‌ಫೋನ್‌ 4000mAh ಬ್ಯಾಟರಿಯನ್ನು ಹೊಂದಿದ್ದು, P20 ಸ್ಮಾರ್ಟ್‌ಫೋನ್‌ 3,400mAh ಬ್ಯಾಟರಿಯೊಂದಿಗೆ ಕಾಣಿಸಿಕೊಳ್ಳಲಿದೆ.

ಸ್ಮಾರ್ಟ್​ಫೋನ್​ ಬೆಲೆ:

ಸ್ಮಾರ್ಟ್​ಫೋನ್​ ಬೆಲೆ:

ಜಾಗತಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಹುವಾವೆ ಸ್ಮಾರ್ಟ್‌ಫೋನ್ ಬೆಲೆ ಕ್ರಮವಾಗಿ EUR 649 ಹಾಗೂ EUR 899 ಇದ್ದು, ಹುವಾವೆ P20 ಪ್ರೋ ಈ ಸರಣಿಯಲ್ಲಿ ಟಾಪ್ ಫೋನ್‌ ಆಗಿದ್ದು ರೂ.73000ಕ್ಕೆ, ಇದೇ ಮಾದರಿಯಲ್ಲಿ ಹುವಾವೆ P20 ರೂ.54000ಕ್ಕೆ ದೊರೆಯಲಿದೆ ಎನ್ನಲಾಗಿದೆ.

Best Mobiles in India

English summary
Huawei P20, P20 Pro India Launch on April 24. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+