ಐಫೋನ್ ‍‍X ಹಿಂದಿಕ್ಕಿದ ಈ ವರ್ಷದ ವಿಶ್ವದ ಬೆಸ್ಟ್ ಮೊಬೈಲ್ ಯಾವುದು ಗೊತ್ತಾ?!

  |

  ಭಾರತದಲ್ಲಿ ಈಗಷ್ಟೇ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿರುವ ಚೀನಾದ ಮೊಬೈಲ್ ಕಂಪೆನಿ ಹುವಾವೆ ಕಿರೀಟಕ್ಕೆ ಮತ್ತೊಂದು ಗರಿ ಸೇರಿಕೊಂಡಿದೆ. ಹುವಾವೆಯ ಸ್ಮಾರ್ಟ್‌ಫೋನ್ ಒಂದು ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳನ್ನು ಸಹ ಹಿಂದಿಕ್ಕಿ ವಿಶ್ವದ ಬೆಸ್ಟ್ ಸ್ಮಾರ್ಟ್‌ಪೋನ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ ಎಂದು ಇತ್ತೀಚಿನ ವರದಿಯೊಂದು ಪ್ರಕಟಿಸಿದೆ.

  ಹೌದು, ಯುರೋಪಿಯನ್ ಇಮೇಜಿಂಗ್ ಅಂಡ್ ಸೌಂಡ್ ಅಸೋಶಿಯನ್ ನೀಡಿರುವ ರಿಪೋರ್ಟ್ ವರದಿ ಪ್ರಕಾರ, ಹುವಾವೆ ಕಂಪೆನಿಯ ಹೈ ಎಂಡ್ ಸ್ಮಾರ್ಟ್‌ಫೋನ್ 'ಹುವಾವೆ ಪಿ 20 ಪ್ರೊ' ಈ ವರ್ಷದ ವಿಶ್ವದ ಬೆಸ್ಟ್ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು, ಆಪಲ್ ಕಂಪೆನಿಯ ಐಫೋನ್ ಎಕ್ಸ್ ಸೇರಿದಂತೆ ಎಲ್ಲಾ ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳನ್ನು ಹಿಂದಿಕ್ಕಿದೆ ಎಂದು ಹೇಳಿದೆ.

  ಐಫೋನ್ ‍‍X ಹಿಂದಿಕ್ಕಿದ ಈ ವರ್ಷದ ವಿಶ್ವದ ಬೆಸ್ಟ್ ಮೊಬೈಲ್ ಯಾವುದು ಗೊತ್ತಾ?!

  'ದಿ ಬೆಸ್ಟ್ ಸ್ಮಾರ್ಟ್‌ಫೋನ್ EISA 2018-2019' ಎಂಬ ರಿಪೋರ್ಟ್‌ನಲ್ಲಿ ಈ ಬಗ್ಗೆ ಪ್ರಕಟಿಸಲಾಗಿದ್ದು, ಸ್ಮಾರ್ಟ್‌ಫೋನ್‌ಗಳ ಗುಣಮಟ್ಟ, ವಿನ್ಯಾಸ, ಮತ್ತು ಪಕಾರ್ಯನಿರ್ವಹಣೆ ಮೇಲೆ ಈ ರಿಪೋರ್ಟ್ ತಯಾರಿಸಿದೆ ಎಂದು ಹೇಳಿಕೊಂಡಿದೆ. ಹಾಗಾದರೆ, ವರದಿಯಲ್ಲಿ ಹೇಳಿರುವ ಇನ್ನಿತರ ಅಂಶಗಳು ಯಾವುವು? ಪಿ 20 ಪ್ರೊ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ವಿಶ್ವದ ಬೆಸ್ಟ್ ಸ್ಮಾರ್ಟ್‌ಪೋನ್!

  ಮೊಬೈಲ್ ಕ್ಯಾಮೆರಾ ತಂತ್ರಜ್ಞಾನದಲ್ಲಿ ಬದಲಾವಣೆಯ ಗಾಳಿ ಬಿಸಿದ್ದ 'ಹುವಾವೆ ಪಿ20 ಪ್ರೊ' ಲೀಕಾ ಟ್ರಿಪಲ್ ಕ್ಯಾಮೆರಾದಿಂದಲೇ ಹೈಲೆಟ್ಸ್ ಆಗಿತ್ತು. ಮೂರು ಕ್ಯಾಮೆರಾಗಳಲ್ಲಿ ಒಂದು 40 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದ ಸ್ಮಾರ್ಟ್‌ಫೋನ್, ಆಪಲ್ ಐಫೋನ್‌ಗಿಂತ ಶೇ 223% ಪರ್ಸೆಂಟ್ ದೊಡ್ಡದಾದ ಸೆನ್ಸಾರ್ ಅನ್ನು ಹೊಂದುವ ಮೂಲಕ ಹೆಸರಾಗಿತ್ತು. ಇದು ಈಗ ವಿಶ್ವದ ಬೆಸ್ಟ್ ಸ್ಮಾರ್ಟ್‌ಪೋನ್ ಹೆಗ್ಗಳಿಕೆ ಪಡೆದಿದೆ.

  'ಲೀಕಾ ಟ್ರಿಪಲ್ ಕ್ಯಾಮೆರಾ'

  40 MP ಹಾಗೂ 8MP ಡ್ಯುಯಲ್​ ಕ್ಯಾಮೆರಾದೊಂದಿಗೆ 20MP ಮೊನೊ ಕ್ರೋಮ್​ ಸೆನ್ಸಾರ್​ ಇರುವ ಕ್ಯಾಮೆರಾವನ್ನು 'ಹುವಾವೆ ಪಿ 20 ಪ್ರೊ' ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿತ್ತು. ಈ ಕ್ಯಾಮೆರಾಗಳಿಗೆ 5x ಹೈಬ್ರಿಡ್​ ಜೂಮ್​ ಸೌಲಭ್ಯ ಕೂಡಾ ನೀಡಲಾಗಿತ್ತು. ಈ ಕ್ಯಾಮೆರಾ ಫೀಚರ್​ಗಳು ಡಿಎಸ್​ಎಲ್​ಆರ್ ಕ್ಯಾಮೆರಾ ಕ್ಯಾನನ್ ಮಾರ್ಕ್​ 5ಡಿ ಕ್ಯಾಮೆರಾದಲ್ಲಿ ಬಳಕೆ ಮಾಡಲಾಗಿತ್ತು. ಇನ್ನು ಸೆಲ್ಫಿ ಪ್ರಿಯರಿಗಾಗಿ 24MP ಲೈಟ್​ ಫ್ಯೂಷನ್​ ಸೆನ್ಸಾರ್​ ಹೊಂದಿರುವ ಕ್ಯಾಮೆರಾವನ್ನು ನೀಡಲಾಗಿತ್ತು.

  ಪಿ20 ಪ್ರೊ ಡಿಸ್‌ಪ್ಲೇ ಮತ್ತು ವಿನ್ಯಾಸ!

  ಆಪಲ್ ಕಂಪೆನಿ ಐಫೋನ್ X ನಲ್ಲಿ ಅಳವಡಿಸಿದ್ದ OLED ಡಿಸ್‌ಪ್ಲೇ ಪ್ಯಾನಲ್ ಅನ್ನು 'ಹುವಾವೆ ಪಿ20 ಪ್ರೊ' ಸ್ಮಾರ್ಟ್‌ಫೋನಿನಲ್ಲಿ ಬಳಸಲಾಗಿದ್ದು, ಫುಲ್​ ಹೆಚ್​ಡಿ ಮತ್ತು ಎಲ್​ಸಿಡಿ 2240 x 1080 ಪಿಕ್ಸಲ್ ಗುಣಮಟ್ಟದ 6.1 ಇಂಚಿನ ಡಿಸ್‌ಪ್ಲೇಯನ್ನು ಸ್ಮಾರ್ಟ್‌ಫೋನ್ ಹೊಂದಿದೆ. 18.7:9 ಅನುಪಾತದ ಡಿಸ್‌ಪ್ಲೇ 82.0 ಸ್ಕ್ರೀನ್ ಟು ಬಾಡಿ ರೆಷ್ಯೂ ಹೊಂದಿದೆ. ಇನ್ನು ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳು ಲಭ್ಯವಿದ್ದು, ಸ್ಮಾರ್ಟ್‌ಫೋನ್ ಹೈ ಎಂಡ್ ಲುಕ್ ಹೊಂದಿದೆ.

  ಪಿ20 ಪ್ರೊ ಪ್ರೊಸೆಸರ್ ಮತ್ತು RAM!

  'ಹುವಾವೆ ಪಿ 20 ಪ್ರೊ' ಸ್ಮಾರ್ಟ್‌ಫೋನಿನಲ್ಲಿ ಸ್ವತಃ ಹುವಾವೆ ಕಂಪೆನಿಯೇ ಅಭಿವೃದ್ಧಿ ಪಡಿಸಿರುವ ಕಿರಿನ್​ 970 ಒಕ್ಟಾಕೋರ್​ ಪ್ರೊಸೆಸರ್​ ಅನ್ನು ಬಳಕೆ ಮಾಡಲಾಗಿದೆ.6 GB RAM ಹಾಗೂ 128GB ಸ್ಟೋರೇಜ್​ ವೆರಿಯಂಟ್‌ನಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದ್ದ 'ಹುವಾವೆ ಪಿ 20 ಪ್ರೊ' ಇತ್ತೀಚಿನ EMUI 8.1 ವರ್ಷನ್ ಸಾಫ್ಟ್‌ವೇರ್ ಫೀಚರ್ಸ್ ಜೊತೆಗೆ ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಣೆ ನೀಡಲಿದೆ.

  ಪಿ20 ಪ್ರೊ ಇತರೆ ಫೀಚರ್ಸ್?

  ಸ್ಟೀರಿಯೋ ಸ್ಪೀಕರ್ಸ್, ತೆಗೆಯಲಾರದಂತಹ 4000mAh ಬ್ಯಾಟರಿ ಶಕ್ತಿಯನ್ನು ಹೊಂದಿರುವ 'ಹುವಾವೆ ಪಿ 20 ಪ್ರೊ' ಸ್ಮಾರ್ಟ್‌ಫೋನಿನಲ್ಲಿ 3.5MM ಆಡಿಯೋ ಜಾಕ್ ಅನ್ನು ತೆಗೆಯಲಾಗಿದೆ. ಇನ್ನುಳಿದಂತೆ, 4G ವೋಲ್ಟ್, ಮುಂಭಾಗದಲ್ಲಿ ಫಿಂಗರ್‌ಪ್ರಿಂಟ್ ರಿಡರ್, ಬ್ಲೂಟೂತ್ v5.0, ಕೇವಲ 30 ನಿಮಿಷಗಳಲ್ಲಿ 58% ಚಾರ್ಜ್ ಆಗುವಂತಹ ಫಾಸ್ಟ್ ಬ್ಯಾಟರಿ ಚಾರ್ಜಿಂಗ್ ತಂತ್ರಜ್ಞಾನಗಳು ಸ್ಮಾರ್ಟ್‌ಫೋನಿಗೆ ಹೈ ಎಂಡ್ ಲುಕ್ ನೀಡಿವೆ.

  ಪಿ20 ಪ್ರೊ ಬೆಲೆ ಎಷ್ಟು?

  ಜಾಗತಿಕ ಮಾರುಕಟ್ಟೆಯಲ್ಲಿ ವ 'ಹುವಾವೆ ಪಿ 20 ಪ್ರೊ' ಸ್ಮಾರ್ಟ್‌ಫೋನಿನ ಬೆಲೆ EUR 649 ಹಾಗೂ EUR 899 ಇದ್ದು, ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಬೆಲೆ ರೂ.64,999 ರೂಪಾಯಿಗಳಾಗಿವೆ. ಅಮೆಜಾನ್ ಇಂಡಿಯಾ ಹಾಗೂ ಪ್ರಮುಖ ಆಫ್‌ಲೈನ್ ಮಳಿಗೆಗಳಲ್ಲಿ ಮಾರಾಟಕ್ಕಿರುವ ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಿದರೆ ನೀವು ಈ ವರ್ಷದ ಬೆಸ್ಟ್ ಸ್ಮಾರ್ಟ್‌ಫೋನ್ ಹೊಂದುವ ಕೀರ್ತಿಗೆ ಪಾತ್ರವಾಗುತ್ತೀರಾ.!

  ಗ್ರಾಹಕರ ನೆಚ್ಚಿನ ಸ್ಮಾರ್ಟ್‌ಫೋನ್‌ ಆದ ನೋಕಿಯಾ 7 ಪ್ಲಸ್‌..!

  ಯುರೋಪ್‌ನ ಪ್ರತಿಷ್ಟಿತ ಸಂಸ್ಥೆ ಎಕ್ಸ್‌ಪರ್ಟ್‌ ಇಮೇಜಿಂಗ್‌ ಮತ್ತು ಸೌಂಡ್‌ ಅಸೋಸಿಯೇಷನ್‌ನಿಂದ ಕೊಡಲ್ಪಡುವ ಎಸಾ (EISA) ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಜಗತ್ತಿನ ಪ್ರಸಿದ್ಧ 25ಕ್ಕೂ ಹೆಚ್ಚು ಟೆಕ್ ಮ್ಯಾಗಜೀನ್‌ಗಳು ಸೇರಿಕೊಂಡು ನೀಡುವ ಪ್ರಶಸ್ತಿಯು ಅನೇಕ ವಿಭಾಗಗಳನ್ನು ಹೊಂದಿದೆ.

  ಹೈ ಫೈ, ಫೋಟೋಗ್ರಾಫಿ, ಹೋಮ್‌ ಥಿಯೇಟರ್ ಆಡಿಯೋ, ಹೋಮ್‌ ಥಿಯೇಟರ್ ಡಿಸ್‌ಪ್ಲೇ ಮತ್ತು ವಿಡಿಯೋ, ಕಾರ್‌ ಎಲೆಕ್ಟ್ರಾನಿಕ್ಸ್‌ ಮತ್ತು ಮೊಬೈಲ್‌ ಫೋನ್‌ ವಿಭಾಗವನ್ನು ಒಳಗೊಂಡಿದೆ. ಈ ವಿಭಾಗಗಳಲ್ಲೂ ಉಪ ವಿಭಾಗಗಳಿದ್ದೂ, ಮೊಬೈಲ್‌ ಫೋನ್‌ ವಿಭಾಗದಲ್ಲಿ ಯಾವ ಯಾವ ಸ್ಮಾರ್ಟ್‌ಫೋನ್‌ಗಳು ಮತ್ತು ಗ್ಯಾಡ್ಜೆಟ್ಸ್‌ಗಳು ಪ್ರಶಸ್ತಿ ಬಾಚಿಕೊಂಡಿವೆ ನೋಡೋಣ.

  ಖರೀದಿಗೆ ಉತ್ತಮ ಸ್ಮಾರ್ಟ್‌ಫೋನ್‌

  ಅಗ್ಗದ ದರದಲ್ಲಿ ಉತ್ತಮ ಕಾರ್ಯನಿರ್ವಹಣೆ ನೀಡುವ ಸ್ಮಾರ್ಟ್‌ಫೋನ್‌ ಖರೀದಿಸಬೇಕೆಂಬ ಹಂಬಲ ಎಲ್ಲರಿಗೂ ಇರುತ್ತೆ. ಅದಕ್ಕಂತಾನೇ ಎಸಾ ನೋವಾ ಎಲೆಮೆಂಟ್‌ 10 ಸ್ಮಾರ್ಟ್‌ಫೋನ್‌ನ್ನು ಖರೀದಿಗೆ ಉತ್ತಮ ಮೊಬೈಲ್‌ ಎಂದು ಅಂತಿಮಗೊಳಿಸಿದೆ. ಆಧುನಿಕ ವಿನ್ಯಾಸದೊಂದಿಗೆ 19:9 ಫುಲ್ ಹೆಚ್‌ಡಿ+ ಸ್ಕ್ರೀನ್ ರೆಸಲೂಷನ್, ಡಿಟಿಎಸ್‌ ಸೌಂಡ್‌ ತಂತ್ರಜ್ಞಾನ ಹಾಗೂ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ಹೊಂದಿದ್ದು, ಎರಡು 16MP ಸೋನಿ IMX499 ಸೆನ್ಸಾರ್ ಹೊಂದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಸೆರೆ ಹಿಡಿದ ಚಿತ್ರಗಳು 96MP ರೆಸಲೂಷನ್ ಹೊಂದಿರುವುದು ಕ್ಯಾಮೆರಾ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

  ಗ್ರಾಹಕರ ಸ್ಮಾರ್ಟ್‌ಫೋನ್‌

  ಗ್ರಾಹಕರಿಗೆ ಯಾವಾಗಲೂ ನಂಬಿಕೆಯ ಪ್ರತಿಬಿಂಬವಾಗಿರುವ ನೋಕಿಯಾ ಎಸಾ ಘೋಷಿಸಿರುವ ಪ್ರಶಸ್ತಿಯಲ್ಲಿ ಮೋಡಿ ಮಾಡಿದೆ. ನೋಕಿಯಾ 7ಪ್ಲಸ್ ಸ್ಮಾರ್ಟ್‌ಫೋನ್‌ ಗ್ರಾಹಕರ ನೆಚ್ಚಿನ ಸ್ಮಾರ್ಟ್‌ಫೋನ್‌ ಆಗಿ ಆಯ್ಕೆಯಾಗಿದೆ. ಆಂಡ್ರಾಯ್ಡ್‌ ಒನ್‌ ಸಾಫ್ಟ್‌ವೇರ್‌ ಪ್ಲಾಟ್‌ಫಾರ್ಮ್‌ ಹೊಂದಿರುವ ನೋಕಿಯಾ 7 ಪ್ಲಸ್‌ 6 ಇಂಚ್‌ ಪೋಲಾರಾಯ್ಸಡ್‌ ಐಪಿಎಸ್‌ ಸ್ಕ್ರೀನ್‌, 2160x1080px ಡಿಸ್‌ಪ್ಲೇ, 12MP ಮತ್ತು 13MP ಡ್ಯುಯಲ್‌ ಕ್ಯಾಮೆರಾ ವ್ಯವಸ್ಥೆ ಹಾಗೂ 3800mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.

  ಲೈಫ್‌ಸ್ಟೈಲ್‌ ಸ್ಮಾರ್ಟ್‌ಫೋನ್‌

  ಆಕರ್ಷಕ ಅಲ್ಯುಮಿನಿಯಂ ಫ್ರೇಂ ಮತ್ತು ಗ್ಲಾಸ್ ಬ್ಯಾಕ್ ವಿನ್ಯಾಸ ಹೊಂದಿರುವ ಹಾನರ್‌ 10 ಸ್ಮಾರ್ಟ್‌ಫೋನ್‌ ನಾಲ್ಕು ವಿವಿಧ ಆಕರ್ಷಕ ಬಣ್ಣಗಳಲ್ಲಿ ಕಾಣುತ್ತದೆ. ಅದಕ್ಕಾಗಿಯೇ ಹಾನರ್‌ 10ಗೆ ಎಸಾ ಲೈಫ್‌ಸ್ಟೈಲ್‌ ಅವಾರ್ಡ್‌ ನೀಡಿದೆ. ಅತ್ಯಾಧುನಿಕ ಕ್ಯಾಮೆರಾ ಸಿಸ್ಟಮ್ ಹೊಂದಿರುವ ಹಾನರ್‌ 10 ಯುವ ಜನಾಂಗದ ಲೈಫ್‌ ಸ್ಟೈಲ್ ಪ್ರತಿಕವಾಗಿದೆ. 5.84 ಇಂಚ್ ಐಪಿಎಸ್‌ ಸ್ಕ್ರೀನ್‌, 2280x1080px ರೆಸಲೂಷನ್ (19:9 ರೇಷಿಯೋ) HiSilicon Kirin 970 ಒಕ್ಟಾಕೋರ್ ಚಿಪ್‌ಸೆಟ್‌ ಮತ್ತು 2400mAh ಬ್ಯಾಟರಿ ಹೊಂದಿದೆ. 16MP ಹಾಗೂ 24MP ಡ್ಯುಯಲ್ ಎಐ ಕ್ಯಾಮೆರಾ ವ್ಯವಸ್ಥೆ ಹೊಂದಿದೆ. 500ಕ್ಕೂ ಹೆಚ್ಚು ವಿವಿಧ ಲೈಫ್‌ಸ್ಟೈಲ್ ಸಂದರ್ಭಗಳಲ್ಲಿ ಹಾನರ್ 10 ಉತ್ತಮ ಲೈಫ್‌ಸ್ಟೈಲ್ ಚಿಹ್ನೆಯಾಗಿ ಗುರುತಿಸಿಕೊಂಡಿದೆ.

  ಇತರ ಪ್ರಶಸ್ತಿಗಳು

  ಎಸಾ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಇನ್ನು ಅನೇಕ ಪ್ರಶಸ್ತಿಗಳನ್ನು ನೀಡಿದ್ದು, ಅವು ಕೆಳಗಿನಂತಿವೆ
  ಎಸಾ ಮೊಬೈಲ್‌ ಆಡಿಯೋ ಪ್ಲೇಯರ್- ಪಾಯನೀರ್ XDP- 02U
  ಎಸಾ ವೈರ್‌ಲೆಸ್‌ ಇನ್‌ಇಯರ್‌ ಹೆಡ್‌ಫೋನ್‌ಗಳು- ಜೆಬಿಎಲ್‌ ಎಂಡ್ಯೂರೆನ್ಸ್ ಡೈವ್
  ಎಸಾ ಮೊಬೈಲ್ ಲೌಡ್‌ಸ್ಪೀಕರ್- ಜೆಬಿಎಲ್ ಎಕ್ಸ್‌ಟ್ರಿಮ್ 2
  ಎಸಾ ನಾಯ್ಸ್‌ ಕ್ಯಾನ್ಸಲಿಂಗ್‌ ಹೆಡ್‌ಫೋನ್‌ಗಳು - AKG N700NC
  ಎಸಾ ಎಐ ಲೌಡ್‌ಸ್ಪೀಕರ್ - ಎಲ್‌ಜಿ ಎಕ್ಸ್‌ಬೂಮ್‌ ಎಐ ಥಿಂಕ್ಯೂ WK7
  ಎಸಾ ಪೋರ್ಟೆಬಲ್ ಡ್ಯಾಕ್‌/ಹೆಡ್‌ಫೋನ್‌ ಆಂಪ್ಲಿಫೀಯರ್ - IFI ಆಡಿಯೋ XDSD

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Let’s start with Huawei P20 Pro and its main highlight, so, basically, its main highlight is the “Leica Triple Camera. to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more