ಪ್ರಪಂಚದ ಬೆಸ್ಟ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಭಾರತದಲ್ಲಿ: ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!
ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಹುವಾವೆ P20 ಲೈಟ್ ಮತ್ತು ಹುವಾವೆ P20 ಪ್ರೊ ಸ್ಮಾರ್ಟ್‌ಫೋನ್, ಸದ್ಯ ಭಾರತದಲ್ಲಿಯೂ ಲಾಂಚ್ ಆಗಿದ್ದು, ಮಾರಾಟಕ್ಕೂ ಮುನ್ನವೇ ಸದ್ದು ಮಾಡುತ್ತಿವೆ, ಇದಕ್ಕೆ ಕಾರಣ ಈಗಾಘಲೇ ಮಾರುಕಟ್ಟೆಯಲ್ಲಿ ಟ್ರಿಪಲ್ (ಮೂರು) ಕ್ಯಾಮೆರಾ ಹೊಂದಿರುವ ಹುವಾವೆ P20 ಪ್ರೋ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬಂದಿದೆ.

ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪನಿಗಳಿಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ (ಮೂರು) ಕ್ಯಾಮೆರಾ ಸ್ಮಾರ್ಟ್‌ಫೋನ್ ಬಿಡಗಡೆ ಮಾಡಿರುವ ಹುವಾವೆ, ಭಾರತೀಯರಿಗೂ ಹೊಸ ಕ್ಯಾಮೆರಾ ಸ್ಮಾರ್ಟ್‌ಫೋನ್ ಅನುಭವನ್ನು ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಹುವಾವೆ P20 ಲೈಟ್ ಮತ್ತು ಹುವಾವೆ P20 ಪ್ರೊ ಸ್ಮಾರ್ಟ್‌ಫೋನ್ ಕುರಿತ ಸಂಫೂರ್ಣ ಮಾಹಿತಿಯೂ ಇಲ್ಲಿದೆ.

P20 ಪ್ರೋ ಸ್ಮಾರ್ಟ್‌ಫೋನ್:
P20 ಪ್ರೋ ಸ್ಮಾರ್ಟ್‌ಫೋನ್‌ಗಳು ಟಾಪ್ ಎಂಡ್ ವಿಶೇಷತೆಗಳನ್ನು ಹೊಂದಿದ್ದು, P20 ಪ್ರೋ ನಲ್ಲಿ 6.1 ಇಂಚಿನ FHD+ ಗುಣಮಟ್ಟದ ಅಮೊಲೈಡ್ ಡಿಸ್‌ಪ್ಲೇಯನ್ನು, ಕಿರನ್ 970 ಪ್ರೋಸೆಸರ್ 6GB RAM ಮತ್ತು 128GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ.

ಕ್ಯಾಮೆರಾ ವಿಶೇಷತೆ:
ಮಾರುಕಟ್ಟೆಯಲ್ಲಿಯೇ ಮೊದಲ ಮೂರು ಹಿಂಬದಿ ಕ್ಯಾಮೆರಾವನ್ನು ಹೊಂದಿರುವ ಸ್ಮಾರ್ಟ್‌ಫೋನ್ ಎನ್ನಲಾಗಿದ್ದು, ಫೋಟೋ ತೆಗೆಯುವ ಸಲುವಾಗಿಯೇ ಕೃತಕ ಬುದ್ದಿಮತ್ತೆಯನ್ನು ಈ ಸ್ಮಾರ್ಟ್‌ಫೋನಿಲ್ಲಿ ನೀಡಲಾಗಿದೆ. P20 ಪ್ರೋ ಸ್ಮಾರ್ಟ್‌ಫೋನ್ ನಲ್ಲಿ 40MP ಪ್ರೈಮರಿ ಕ್ಯಾಮೆರಾದೊಂದಿಗೆ 20MP ಮತ್ತು 8MP ಕ್ಯಾಮೆರಾವನ್ನು ಸಹ ನೀಡಲಾಗಿದೆ. ಒಟ್ಟು ಮೂರು ಕ್ಯಾಮೆರಾವನ್ನು ನೋಡಬಹುದಾಗಿದೆ.

P20 ಲೈಟ್ ಸ್ಮಾರ್ಟ್‌ಫೋನ್
P20 ಲೈಟ್‌ನಲ್ಲಿ ನಲ್ಲಿ 5.84 ಇಂಚಿನ FHD+ ಗುಣಮಟ್ಟದ ಫುಲ್‌ವಿವ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಇದು 19:9 ಅನುಪಾತದಿಂದ ಕೂಡಿದೆ. ಕಿರನ್ 658 ಪ್ರೋಸೆಸರ್, 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, 16 MP + 20 MP ಕ್ಯಾಮೆರಾವನ್ನು ಇದರಲ್ಲಿ ಕಾಣಬಹುದಾಗಿದೆ. ಐಫೋನ್ X ಮಾದರಿಯಲ್ಲಿ ನೋಡಲು ಕಾಣಿಸಲಿದೆ ಎನ್ನಲಾಗಿದೆ.

24 MP ಸೆಲ್ಫಿ ಕ್ಯಾಮೆರಾ:
ಈ ಎರಡು ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ 24 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, ಉತ್ತಮ ಸೆಲ್ಫಿಗಳನ್ನು ಕ್ಲಿಕ್ ಮಾಡಬಹುದಾಗಿದೆ. ಅಲ್ಲದೇ ಕೃತಕ ಬುದ್ದಿ ಮತ್ತೆಯನ್ನು ಫೋಟೋಗಳನ್ನು ಸೆರೆಹಿಡಿಯುವ ಸಲುವಾಗಿ ನೀಡಲಾಗಿದೆ. P20 ಪ್ರೋ ಸ್ಮಾರ್ಟ್‌ಫೋನ್ 4000mAh ಬ್ಯಾಟರಿಯನ್ನು ಹೊಂದಿದ್ದು, P20 ಲೈಟ್ ಸ್ಮಾರ್ಟ್‌ಫೋನ್ 3,೦00mAh ಬ್ಯಾಟರಿಯೊಂದಿಗೆ ಕಾಣಿಸಿಕೊಳ್ಳಲಿದೆ.

ಬೆಲೆ ಮತ್ತು ಮಾರಾಟ:
ಹುವಾವೆ P20 ಪ್ರೋ ಸ್ಮಾರ್ಟ್‌ಫೋನ್ ರೂ.64,999ಕ್ಕೆ ದೊರೆಯುತ್ತಿದ್ದು, P20 ಲೈಟ್ ಸ್ಮಾರ್ಟ್‌ಫೋನ್ ರೂ.19,999ಕ್ಕೆ ಮಾರಾಟವಾಗಲಿದೆ. ಅಮೆಜಾನ್‌ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ದೊರೆಯಲಿದ್ದು, ಮೇ 03 ರಿಂದ ಮಾರಾಟವಾಗಲಿದೆ.


Click it and Unblock the Notifications








