'ಹುವಾವೆ P30 ಪ್ರೊ' ಬಿಡುಗಡೆ ನಂತರ ಆಪಲ್, ಸ್ಯಾಮ್‌ಸಂಗ್ ಹೆದರಿರುವುದು ಏಕೆ?!

|

ಇಷ್ಟು ದಿನ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದಿಗ್ಗಜರಾಗಿ ಮೆರೆಯುತ್ತಿದ್ದ ಆಪಲ್, ಸ್ಯಾಮ್‌ಸಂಗ್ ಕಂಪೆನಿಗಳು ಕೂಡ 'ಹುವಾವೆ P30 ಪ್ರೊ' ಬಿಡುಗಡೆ ನಂತರ ಹೆದರಿವೆ ಎಂದರೆ ಅತಿಶಯೋಕ್ತಿ ಆಗುವುದಿಲ್ಲ. ಏಕೆಂದರೆ, ಆಪಲ್, ಸ್ಯಾಮ್‌ಸಂಗ್ ಕಂಪೆನಿಗಳುಸೇರಿದಂತೆ ಈ ವರೆಗೂ ಯಾವುದೇ ಮೊಬೈಲ್ ಕಂಪೆನಿ ಕೂಡ ಬಿಡುಗಡೆ ಮಾಡದಂತರ ಕ್ಯಾಮೆರಾ ಶಕ್ತಿ ಮತ್ತು ಇತರೆ ಫೀಚರ್ಸ್‌ಗಳನ್ನು ಹೊತ್ತು ಹುವಾವೆಯ ಹುವಾವೆ P30 ಪ್ರೊ ಸ್ಮಾರ್ಟ್‌ಪೋನ್‌ ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ದಿಗ್ಗಜ ಮೊಬೈಲ್ ಕಂಪೆನಿಗಳು ಹಿಂದಿಕ್ಕಲು ತಯಾರಾಗಿರುವ ಚೀನಾದ ಹುವಾವೆ ಮೊಬೈಲ್ ಕಂಪೆನಿ ಮೊಬೈಲ್ ಉದ್ಯಮದ ಮೊದಲ ಅಡ್ವಾನ್ಸ್ ಕ್ಯಾಮೆರಾ ಸ್ಮಾರ್ಟ್‌ಪೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.ಕಳೆದ ಕೆಲವು ದಿನಗಳಿಂದಲೂ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿರುವ ಹುವಾವೆ P30 ಪ್ರೊ ಸ್ಮಾರ್ಟ್‌ಪೋನ್‌ ಮಾರುಕಟ್ಟೆಗೆ ಎಂಟ್ರಿ ನೀಡಿರುವುದು ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿದೆ.

'ಹುವಾವೆ P30 ಪ್ರೊ' ಬಿಡುಗಡೆ ನಂತರ ಆಪಲ್, ಸ್ಯಾಮ್‌ಸಂಗ್ ಹೆದರಿರುವುದು ಏಕೆ?!

40MP ವಿಶಾಲ ಕೋನ, 8MP 5X ಟೆಲಿಫೋಟೋ ಸೇರಿದಂತೆ 5x ಪರಿದರ್ಶಕ-ರೀತಿಯ ಆಪ್ಟಿಕಲ್ ಝೂಮ್ ಮತ್ತು ಹಿಂದೆ ನಾಲ್ಕು ಕ್ಯಾಮರಾಗಳನ್ನು ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಆಗಿ ಹುವಾವೆ P30 ಪ್ರೊ ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಆಪಲ್, ಸ್ಯಾಮ್‌ಸಂಗ್ ಸೇರಿದಂತೆ ಒನ್‌ಪ್ಲಸ್‌ಗೂ ಭಯಮೂಡಿಸಿದೆ. ಹಾಗಾಗಿ, ಈ ಲೇಖನದಲ್ಲಿ ಮೊಬೈಲ್ ಉದ್ಯಮದ ಮೊದಲ ಅಡ್ವಾನ್ಸ್ ಕ್ಯಾಮೆರಾ ಸ್ಮಾರ್ಟ್‌ಪೋನ್ ಹುವಾವೆ P30 ಪ್ರೊನಲ್ಲಿ ಸಂಚಲನ ಮೂಡಿಸಿರುವ ವಿಶೇಷತೆಗಳನ್ನು ನಾವು ಪಟ್ಟಿ ಮಾಡಿದ್ದೇವೆ.

ಹುವಾವೆ P30 ಪ್ರೊ ವಿನ್ಯಾಸ?

ಹುವಾವೆ P30 ಪ್ರೊ ವಿನ್ಯಾಸ?

ಹುವಾವೆ P30 ಪ್ರೊ ಇದೇ ಮೊದಲ ಬಾರಿಗೆ ವಿಶ್ವ ಮಾರುಕಟ್ಟೆಯಲ್ಲಿ ಹೈ ಎಂಡ್ ಪ್ರೀಮಿಯಮ್ ವಿನ್ಯಾಸದ ಚೀನಾ ಕಂಪೆನಿಯ ಸ್ಮಾರ್ಟ್‌ಫೋನ್ ಆಗಿದೆ. ವಿಶ್ವ ಮೊಬೈಲ್ ಉದ್ಯಮದ ಮೊಟ್ಟ ಮೊದಲ ಹೈ ಅಡ್ವಾನ್ಸ್ ಕ್ಯಾಮೆರಾ ಸ್ಮಾರ್ಟ್‌ಪೋನ್ ಇದಾಗಿರುವುರಿಂದ ಹುವಾವೆ P30 ಪ್ರೊ ಸ್ಮಾರ್ಟ್‌ಫೋನ್ ಅತ್ಯಂತ ಪ್ರೀಮಿಯಮ್ ಆಗಿ ವಿನ್ಯಾಸಗೊಂಡಿದೆ. ಬಾಗಿದ ಅಂಚುಗಳ ವಿನ್ಯಾಸದಲ್ಲಿ ಫುಲ್‌ಸ್ಕ್ರೀನ್ ಡಿಸ್‌ಪ್ಲೇ ಮೂಲಕ ಕಂದೊಳಿಸುತ್ತಿರುವ ಈ ಫೋನ್ ವಾಟರ್‌ ಡ್ರಾಪ್ ನೋಚ್ ಹೊಂದಿರುವುದು ಮೊಬೈಲ್ ಪ್ರಿಯರ ಪ್ರಮುಖ ಆಕರ್ಷಣೆಯಲ್ಲಿ ಒಂದು.

ಹುವಾವೆ P30 ಪ್ರೊ ಡಿಸ್‌ಪ್ಲೇ

ಹುವಾವೆ P30 ಪ್ರೊ ಡಿಸ್‌ಪ್ಲೇ

ವಿನ್ಯಾಸವೇ ಹಾಗಿರುವಾಗ ಹುವಾವೆ P30 ಪ್ರೊ ಸ್ಮಾರ್ಟ್‌ಪೋನ್ ಡಿಸ್‌ಪ್ಲೇ ಕೂಡ ಅದ್ಬುತವಾಗಿರಲಿದೆ ಎಂದು ನೀವು ಸುಲಭವಾಗಿ ಊಹಿಸಬಹುದು. ಬಾಗಿದ ಅಂಚುಗಳು ಮತ್ತು "ವಾಟರ್-ಡ್ರಾಪ್" ದರ್ಜೆಯೊಂದಿಗೆ 6.47-ಇಂಚಿನ ಪೂರ್ಣ ಹೆಚ್‌ಡಿ+ OLED ಡಿಸ್‌ಪ್ಲೇಯನ್ನು ಹುವಾವೆ P30 ಪ್ರೊ ಹೊಂದಿದೆ. ಈ ಪೋನ್ 19.5: 9 ರ ಆಕಾರ ಅನುಪಾತದಲ್ಲಿರುವ ಡಿಸ್‌ಪ್ಲೇ 1080x2340 ಪಿಕ್ಸೆಲ್‌ಗಳ ಸಾಮರ್ಥ್ಯವನ್ನು ಹೊಂದಿರುವುದು ಮಲ್ಟಿಮೀಡಿಯಾ ಪ್ರಿಯರಿಗೆ ನಂ.1 ಆಯ್ಕೆಯ ಸ್ಮಾರ್ಟ್‌ಪೋನ್ ಆಗಬಹುದು.

ಹುವಾವೆ P30 ಪ್ರೊ ಪ್ರೊಸೆಸರ್!

ಹುವಾವೆ P30 ಪ್ರೊ ಪ್ರೊಸೆಸರ್!

ಹುವಾವೇ P30 ಪ್ರೊ ಸ್ಮಾರ್ಟ್‌ಫೋನ್ 2.6GHzನಲ್ಲಿ 2 ಕೋರ್‌ಗಳನ್ನು ಹೊಂದಿದೆ. 2 ಕೋರ್‌ಗಳು 1.92GHz ಮತ್ತು 1.8GHz ನಲ್ಲಿ ದೊರೆಯುತ್ತದೆ. ಜೊತೆಗೆ 4 ಕೋರ್‌ಗಳನ್ನು ಹೊಂದಿರುವ 2.6GHz ಆಕ್ಟಾ ಕೋರ್ HiSilicon Kirin 980 ಪ್ರೊಸೆಸರ್ ಹೊತ್ತು ಬಿಡುಗಡೆಯಾದ ಮೊಟ್ಟಮೊದಲ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಆಗಿ ಹುವಾವೇ P30 ಪ್ರೊ ಹೆಸರುಗಳಿಸಿದೆ. ಸಾಮಾನ್ಯ ಕಂಪ್ಯೂಟರ್‌ಗಿಂತಲೂ ಹೆಚ್ಚು ಕಾರ್ಯನಿರ್ವಹಣೆ ನೀಡುವ ಈ ಸ್ಮಾರ್ಟ್‌ಫೋನಿನಲ್ಲಿ 8GB RAM ನೀಡಿರುವುದನ್ನು ನೀವು ನೋಡಬಹುದು.

ಹುವಾವೆ P30 ಪ್ರೊ ಮೆಮೊರಿ

ಹುವಾವೆ P30 ಪ್ರೊ ಮೆಮೊರಿ

ಹುವಾವೆ P30 ಪ್ರೊ ಸ್ಮಾರ್ಟ್‌ಪೋನ್ ಆಂಡ್ರಾಯ್ಡ್ 9 ಆಧಾರಿತ EMUI 9.1 ಮೂಲಕ ರನ್ ಆಗಲಿದ್ದು, 8GB RAM ಜೊತೆಗೆ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದಾದ 128GB ಆಂತರಿಕ ಮೆಮೊರಿಯನ್ನು ಹೊಂದಿದೆ. ಡ್ಯುಯಲ್-ಸಿಮ್ (ಜಿಎಸ್ಎಂ ಮತ್ತು ಜಿಎಸ್ಎಂ) ಸ್ಮಾರ್ಟ್‌ಫೋನ್ ಇದಾಗಿದ್ದು, ಫೋನ್ ನ್ಯಾನೋ ಸಿಮ್ ಮತ್ತು ನ್ಯಾನೋ-ಸಿಮ್ ಕಾರ್ಡ್ಗಳನ್ನು ಸ್ವೀಕರಿಸುತ್ತದೆ.

ಹುವಾವೆ P30 ಪ್ರೊ ಕ್ಯಾಮೆರಾ

ಹುವಾವೆ P30 ಪ್ರೊ ಕ್ಯಾಮೆರಾ

ಮೊದಲೇ ಹೇಳಿದಂತೆ, 40MP ವಿಶಾಲ ಕೋನ, 8MP 5X ಟೆಲಿಫೋಟೋ ಸೇರಿದಂತೆ 5x ಪರಿದರ್ಶಕ-ರೀತಿಯ ಆಪ್ಟಿಕಲ್ ಝೂಮ್ ಮತ್ತು ಹಿಂದೆ ನಾಲ್ಕು ಕ್ಯಾಮರಾಗಳನ್ನು ಹೊಂದಿರುವ ವಿಶ್ವದ ಮೊದಲ ಫೋನ್ ಆಗಿ ಹುವಾವೇ P30 ಪ್ರೊ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಎಫ್ / 2.0 ಅಪಾರ್ಚರ್ ಜೊತೆಗೆ 32 ಮೆಗಾಪಿಕ್ಸೆಲ್ ಕ್ಯಾಮರಾ ಸೆಲ್ಫೀ ಕ್ಯಾಮೆರಾವನ್ನು ನಿಡಲಾಗಿದೆ.

ಹುವಾವೆ P30 ಪ್ರೊ ಇತರೆ ಫೀಚರ್ಸ್

ಹುವಾವೆ P30 ಪ್ರೊ ಇತರೆ ಫೀಚರ್ಸ್

ಹುವಾವೆ P30 ಪ್ರೊ 4,200 mAh ಸಾಮರ್ಥ್ಯದ ಶಕ್ತಿಶಾಲಿ ಬ್ಯಾಟರಿಯಿಂದ ಚಾಲಿತವಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ವೈರ್ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. LTE ಬಳಸುವ ಬ್ಯಾಂಡ್ 40 ಬೆಂಬಲ, Wi-Fi 802.11 ಬ್ಲೂಟೂತ್ v5.00, NFC, ಇನ್ಫ್ರಾರೆಡ್, ಯುಎಸ್ಬಿ ಟೈಪ್-ಸಿ ಮತ್ತು 4ಜಿ ಒಳಗೊಂಡಂತೆ, ಹುವಾವೆ P30 ಪ್ರೊ ಫೇಸ್ ಅನ್ಲಾಕ್ ಅನ್ನು ಬೆಂಬಲಿಸುತ್ತದೆ.

ಹುವಾವೆ P30 ಪ್ರೊ ಬೆಲೆಗಳು

ಹುವಾವೆ P30 ಪ್ರೊ ಬೆಲೆಗಳು

ಹುವಾವೆ P30 ಪ್ರೊ ಸ್ಮಾರ್ಟ್‌ಫೋನ್ ಬೆಲೆಗಳು ಕೂಡ ಅದರ ಫೀಚರ್ಸ್‌ಗೆ ಸರಿಸಮನಾಗಿವೆ. 8 ಜಿಬಿ RAM/256 ಜಿಬಿ ಶೇಖರಣಾ ರೂಪಾಂತರದ ಹುವಾವೆ P30 ಪ್ರೊ ಸ್ಮಾರ್ಟ್‌ಫೋನ್ ಬೆಲೆ 1099 ಯುರೋ (ಸರಿಸುಮಾರು ರೂ 85,600) ಗಳಾದರೆ, 8 ಜಿಬಿ RAM/512 ಜಿಬಿ ಮಾದರಿಯ ಫೋನ್ 1,249 ಯುರೋ (ಸರಿಸುಮಾರು ರೂ 97,300) ಗಳಿಗೆ ಬಿಡುಗಡೆಯಾಗಿದೆ.

Best Mobiles in India

English summary
Huawei also introduced the Huawei P30, which is a little smaller and has fewer frills. And now, let's this comparison show on the road. (You'll see a full specs match-up at the end.. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X