ಮತ್ತೊಂದು ದಾಖಲೆ ನಿರ್ಮಿಸಿದ ಈ ವರ್ಷದ ಬೆಸ್ಟ್ ಸ್ಮಾರ್ಟ್‌ಫೋನ್!!
ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ದಿಗ್ಗಜ ಮೊಬೈಲ್ ಸಂಸ್ಥೆಗಳಿಗೆ ಸೆಡ್ಡುಹೊಡೆಯುತ್ತಿರುವ ಚೀನಾದ ಮೊಬೈಲ್ ಕಂಪೆನಿ 'ಹುವಾವೆ' ತನ್ನ ಪ್ರೀಮಿಯಮ್ ಫ್ಲಾಗ್‌ಶಿಪ್ ಸ್ಮಾರ್ಟ್‌ಪೋನ್ ಮಾರಾಟದಲ್ಲಿ ಮುನ್ನಡೆದಿದೆ. ವಿಶ್ವದಲ್ಲೇ ಮೊದಲ ಬಾರಿಗೆ ಟ್ರಿಪಲ್ ಕ್ಯಾಮೆರಾಗಳ ಮೂಲಕ ಮಾರುಕಟ್ಟೆಗೆ ಕಾಲಿಟ್ಟ 'ಹುವಾವೆ ಪಿ20' ಬ್ರ್ಯಾಂಡ್ ಮಾರಾಟದಲ್ಲಿ ಹುವಾವೆ ಕಂಪೆನಿ ಗೆದ್ದಿದೆ.
ಕಳೆದ ಮಾರ್ಚ್ ತಿಂಗಳಿನಲ್ಲಿ ವಿಶ್ವ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ನಿಡಿದ್ದ ಹುವಾವೆ ಪಿ20 ಮತ್ತು ಹುವಾವೆ ಪಿ20 ಪ್ರೊ ಫೋನ್‌ಗಳು ಭರ್ಜರಿ ಮಾರಾಟ ಕಂಡಿದ್ದು, 10 ಮಿಲಿಯನ್ ಹುವಾವೆ ಪಿ20' ಬ್ರ್ಯಾಂಡ್ ಪೋನ್‌ಗಳನ್ನು ಮಾರಾಟ ಮಾಡಿರುವುದಾಗಿ ಕಂಪೆನಿ ತಿಳಿಸಿದೆ. ಕ್ಯಾಮೆರಾ ಮಾಂತ್ರಿಕ ಎಂದೇ ಹೆಸರಾದ ಹುವಾವೆ ಪಿ20' ಬ್ರ್ಯಾಂಡ್ ಫೋನ್‌ಗಳುಈಗ ಜನರ ಮನಗೆದ್ದಿವೆ.

ಇತ್ತೀಚಿಗಷ್ಟೆ ಯುರೋಪಿಯನ್ ಇಮೇಜಿಂಗ್ ಅಸೋಶಿಯನ್ ನೀಡಿರುವ ರಿಪೋರ್ಟ್ ವರದಿ ಪ್ರಕಾರ, ಈ ವರ್ಷದ ವಿಶ್ವದ ಬೆಸ್ಟ್ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದ 'ಹುವಾವೆ ಪಿ 20 ಪ್ರೊ' ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ. ಹಾಗಾದರೆ, ಹುವಾವೆ ಪಿ20 ಪ್ರೊ ಸ್ಮಾರ್ಟ್‌ಪೊನ್ ಹೇಗಿದೆ ಎಂಬುದನ್ನು ಮುಂದೆ ನೋಡೋಣವೇ.


ವಿಶ್ವದ ಬೆಸ್ಟ್ ಸ್ಮಾರ್ಟ್‌ಪೋನ್!
ಮೊಬೈಲ್ ಕ್ಯಾಮೆರಾ ತಂತ್ರಜ್ಞಾನದಲ್ಲಿ ಬದಲಾವಣೆಯ ಗಾಳಿ ಬಿಸಿದ್ದ 'ಹುವಾವೆ ಪಿ20 ಪ್ರೊ' ಲೀಕಾ ಟ್ರಿಪಲ್ ಕ್ಯಾಮೆರಾದಿಂದಲೇ ಹೈಲೆಟ್ಸ್ ಆಗಿತ್ತು. ಮೂರು ಕ್ಯಾಮೆರಾಗಳಲ್ಲಿ ಒಂದು 40 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದ ಸ್ಮಾರ್ಟ್‌ಫೋನ್, ಆಪಲ್ ಐಫೋನ್‌ಗಿಂತ ಶೇ 223% ಪರ್ಸೆಂಟ್ ದೊಡ್ಡದಾದ ಸೆನ್ಸಾರ್ ಅನ್ನು ಹೊಂದುವ ಮೂಲಕ ಹೆಸರಾಗಿತ್ತು. ಇದು ಈಗ ವಿಶ್ವದ ಬೆಸ್ಟ್ ಸ್ಮಾರ್ಟ್‌ಪೋನ್ ಹೆಗ್ಗಳಿಕೆ ಪಡೆದಿದೆ.

'ಲೀಕಾ ಟ್ರಿಪಲ್ ಕ್ಯಾಮೆರಾ'
40 MP ಹಾಗೂ 8MP ಡ್ಯುಯಲ್ ಕ್ಯಾಮೆರಾದೊಂದಿಗೆ 20MP ಮೊನೊ ಕ್ರೋಮ್ ಸೆನ್ಸಾರ್ ಇರುವ ಕ್ಯಾಮೆರಾವನ್ನು 'ಹುವಾವೆ ಪಿ 20 ಪ್ರೊ' ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿತ್ತು. ಈ ಕ್ಯಾಮೆರಾಗಳಿಗೆ 5x ಹೈಬ್ರಿಡ್ ಜೂಮ್ ಸೌಲಭ್ಯ ಕೂಡಾ ನೀಡಲಾಗಿತ್ತು. ಈ ಕ್ಯಾಮೆರಾ ಫೀಚರ್ಗಳು ಡಿಎಸ್ಎಲ್ಆರ್ ಕ್ಯಾಮೆರಾ ಕ್ಯಾನನ್ ಮಾರ್ಕ್ 5ಡಿ ಕ್ಯಾಮೆರಾದಲ್ಲಿ ಬಳಕೆ ಮಾಡಲಾಗಿತ್ತು. ಇನ್ನು ಸೆಲ್ಫಿ ಪ್ರಿಯರಿಗಾಗಿ 24MP ಲೈಟ್ ಫ್ಯೂಷನ್ ಸೆನ್ಸಾರ್ ಹೊಂದಿರುವ ಕ್ಯಾಮೆರಾವನ್ನು ನೀಡಲಾಗಿತ್ತು.

ಪಿ20 ಪ್ರೊ ಡಿಸ್‌ಪ್ಲೇ ಮತ್ತು ವಿನ್ಯಾಸ!
ಆಪಲ್ ಕಂಪೆನಿ ಐಫೋನ್ X ನಲ್ಲಿ ಅಳವಡಿಸಿದ್ದ OLED ಡಿಸ್‌ಪ್ಲೇ ಪ್ಯಾನಲ್ ಅನ್ನು 'ಹುವಾವೆ ಪಿ20 ಪ್ರೊ' ಸ್ಮಾರ್ಟ್‌ಫೋನಿನಲ್ಲಿ ಬಳಸಲಾಗಿದ್ದು, ಫುಲ್ ಹೆಚ್ಡಿ ಮತ್ತು ಎಲ್ಸಿಡಿ 2240 x 1080 ಪಿಕ್ಸಲ್ ಗುಣಮಟ್ಟದ 6.1 ಇಂಚಿನ ಡಿಸ್‌ಪ್ಲೇಯನ್ನು ಸ್ಮಾರ್ಟ್‌ಫೋನ್ ಹೊಂದಿದೆ. 18.7:9 ಅನುಪಾತದ ಡಿಸ್‌ಪ್ಲೇ 82.0 ಸ್ಕ್ರೀನ್ ಟು ಬಾಡಿ ರೆಷ್ಯೂ ಹೊಂದಿದೆ. ಇನ್ನು ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳು ಲಭ್ಯವಿದ್ದು, ಸ್ಮಾರ್ಟ್‌ಫೋನ್ ಹೈ ಎಂಡ್ ಲುಕ್ ಹೊಂದಿದೆ.

ಪಿ20 ಪ್ರೊ ಪ್ರೊಸೆಸರ್ ಮತ್ತು RAM!
'ಹುವಾವೆ ಪಿ 20 ಪ್ರೊ' ಸ್ಮಾರ್ಟ್‌ಫೋನಿನಲ್ಲಿ ಸ್ವತಃ ಹುವಾವೆ ಕಂಪೆನಿಯೇ ಅಭಿವೃದ್ಧಿ ಪಡಿಸಿರುವ ಕಿರಿನ್ 970 ಒಕ್ಟಾಕೋರ್ ಪ್ರೊಸೆಸರ್ ಅನ್ನು ಬಳಕೆ ಮಾಡಲಾಗಿದೆ.6 GB RAM ಹಾಗೂ 128GB ಸ್ಟೋರೇಜ್ ವೆರಿಯಂಟ್‌ನಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದ್ದ 'ಹುವಾವೆ ಪಿ 20 ಪ್ರೊ' ಇತ್ತೀಚಿನ EMUI 8.1 ವರ್ಷನ್ ಸಾಫ್ಟ್‌ವೇರ್ ಫೀಚರ್ಸ್ ಜೊತೆಗೆ ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಣೆ ನೀಡಲಿದೆ.

ಪಿ20 ಪ್ರೊ ಇತರೆ ಫೀಚರ್ಸ್?
ಸ್ಟೀರಿಯೋ ಸ್ಪೀಕರ್ಸ್, ತೆಗೆಯಲಾರದಂತಹ 4000mAh ಬ್ಯಾಟರಿ ಶಕ್ತಿಯನ್ನು ಹೊಂದಿರುವ 'ಹುವಾವೆ ಪಿ 20 ಪ್ರೊ' ಸ್ಮಾರ್ಟ್‌ಫೋನಿನಲ್ಲಿ 3.5MM ಆಡಿಯೋ ಜಾಕ್ ಅನ್ನು ತೆಗೆಯಲಾಗಿದೆ. ಇನ್ನುಳಿದಂತೆ, 4G ವೋಲ್ಟ್, ಮುಂಭಾಗದಲ್ಲಿ ಫಿಂಗರ್‌ಪ್ರಿಂಟ್ ರಿಡರ್, ಬ್ಲೂಟೂತ್ v5.0, ಕೇವಲ 30 ನಿಮಿಷಗಳಲ್ಲಿ 58% ಚಾರ್ಜ್ ಆಗುವಂತಹ ಫಾಸ್ಟ್ ಬ್ಯಾಟರಿ ಚಾರ್ಜಿಂಗ್ ತಂತ್ರಜ್ಞಾನಗಳು ಸ್ಮಾರ್ಟ್‌ಫೋನಿಗೆ ಹೈ ಎಂಡ್ ಲುಕ್ ನೀಡಿವೆ.

ಪಿ20 ಪ್ರೊ ಬೆಲೆ ಎಷ್ಟು?
ಜಾಗತಿಕ ಮಾರುಕಟ್ಟೆಯಲ್ಲಿ ವ 'ಹುವಾವೆ ಪಿ 20 ಪ್ರೊ' ಸ್ಮಾರ್ಟ್‌ಫೋನಿನ ಬೆಲೆ EUR 649 ಹಾಗೂ EUR 899 ಇದ್ದು, ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಬೆಲೆ ರೂ.64,999 ರೂಪಾಯಿಗಳಾಗಿವೆ. ಅಮೆಜಾನ್ ಇಂಡಿಯಾ ಹಾಗೂ ಪ್ರಮುಖ ಆಫ್‌ಲೈನ್ ಮಳಿಗೆಗಳಲ್ಲಿ ಮಾರಾಟಕ್ಕಿರುವ ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಿದರೆ ನೀವು ಈ ವರ್ಷದ ಬೆಸ್ಟ್ ಸ್ಮಾರ್ಟ್‌ಫೋನ್ ಹೊಂದುವ ಕೀರ್ತಿಗೆ ಪಾತ್ರವಾಗುತ್ತೀರಾ.!


Click it and Unblock the Notifications








