Subscribe to Gizbot

IFA 2014 ರಲ್ಲಿ ಹುವಾಯಿನ ಮಿಂಚಿನ ಸಂಚಲನ

Written By:

ಮುಂಬರಲಿರುವ IFA 2014 ರಲ್ಲಿ ಹುವಾಯಿ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುವ ಕಾರ್ಯವೊಂದನ್ನು ಮಾಡುತ್ತಿದೆ ಎಂದು ವದಂತಿಗಳು ಗುಲ್ಲು ಹುಟ್ಟಿಸಿವೆ. ಪ್ರತೀ ವರ್ಷ ಬರ್ಲಿನ್‌ನಲ್ಲಿ ಆಯೋಜನೆಗೊಳ್ಳಲಿರುವ ಟೆಕ್ ಶೋ ಈ ಬಾರಿಯೂ ಪ್ರದರ್ಶನಗೊಳ್ಳಲಿದೆ. ಈ ಬಾರಿ ಸಪ್ಟೆಂಬರ್ 5-10 ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಇದೇ ಈವೆಂಟ್‌ನಲ್ಲಿ ಈ ಚೈನಾದ ಸ್ಮಾರ್ಟ್‌ಫೋನ್ ತನ್ನ ಅತಿ ದೊಡ್ಡ ಫ್ಲ್ಯಾಗ್‌ಶಿಪ್ ಮೂಲಕ ಮಿಂಚಿನ ಸಂಚಲನವನ್ನೇ ಉಂಟುಮಾಡಲಿದೆ.

ತಂತ್ರಜ್ಞಾನ ಮಾಧ್ಯಮಗಳಿಗೆ ಈಗಾಗಲೇ ಪ್ರೆಸ್ ಆಮಂತ್ರಣವನ್ನು ಕಳುಹಿಸಲು ಆರಂಭಿಸಿದೆ ಎಂದು ವದಂತಿಗಳು ದೃಢಪಡಿಸಿವೆ. ಬರ್ಲಿನ್‌ನಲ್ಲಿ ಸಪ್ಟೆಂಬರ್ 4 ರಂದು ನಡೆಯಲಿರುವ ಈ ಸಮಾರಂಭದಲ್ಲಿ ಕಂಪೆನಿ ಹೊಸ ಬಗೆಯ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದೆ.

ಹುವಾಯಿನ ಅಸ್ಕೆಂಡ್ ಮೇಟ್ 3 ನಿರೀಕ್ಷಿತ ಫೋನ್

ಹುವಾಯಿ ಅಸ್ಕೆಂಡ್ ಮೇಟ್ 3: ವದಂತಿ ವಿಶೇಷತೆಗಳು
ಇದು 6 ಇಂಚಿನ ಪೂರ್ಣ HD ಡಿಸ್‌ಪ್ಲೇಯೊಂದಿಗೆ ಬಂದಿದ್ದು, 13MP ಮತ್ತು 5 MP ಮುಂಭಾಗ ಹಿಂಭಾಗ ಕ್ಯಾಮೆರಾವನ್ನು ಒಳಗೊಂಡಿದೆ. ಹುವಾಯಿ ಸ್ವಯಂ ರಚಿಸಿರುವಂತಹ ಓಕ್ಟಾ - ಕೋರ್ HiSilicon Kirin 920 ಪ್ರೊಸೆಸರ್ ಇದರಲ್ಲಿದ್ದು ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಓಎಸ್ ಚಾಲನೆಯಾಗುತ್ತಿದೆ. ಇದು 2GB RAM ಶಕ್ತಿಯನ್ನು ಪಡೆದುಕೊಂಡಿದ್ದು 16GB ಸಂಗ್ರಹಣಾ ಸಾಮರ್ಥ್ಯವಿದೆ.

ಕಂಪೆನಿ ತನ್ನ ಫೋನ್ ಮೇಲೆ ಸಾಕಷ್ಟು ಭರಸವೆಗಳನ್ನು ಇಟ್ಟಿದ್ದು ಹೊಸದಾದ ರೀತಿಯಲ್ಲಿ ಇದನ್ನು ಲಾಂಚ್ ಮಾಡುವ ಉದ್ದೇಶವನ್ನಿಟ್ಟುಕೊಂಡಿದೆ ಎಂದಾದಲ್ಲಿ ಬರಲಿರುವ ಸ್ಮಾರ್ಟ್‌ಫೋನ್ ಏನೋ ವಿಶೇಷತೆಯನ್ನು ಒಳಗೊಂಡಿದೆ ಎಂಬುದು ಖಾತ್ರಿಯಾಗುತ್ತದೆ.

English summary
This article tells about Huawei Starts Sending Out Press Invites for IFA 2014: Ascend Mate 3 is Coming?.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot