ವಿಶ್ವದ ಮೊದಲ ಅಡ್ವಾನ್ಸ್ ಕ್ಯಾಮೆರಾ ಪೋನ್ 'ಹುವಾವೆ P30 ಪ್ರೊ' ಲಾಂಚ್!!

|

ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ದಿಗ್ಗಜ ಮೊಬೈಲ್ ಕಂಪೆನಿಗಳು ಹಿಂದಿಕ್ಕಲು ತಯಾರಾಗಿರುವ ಚೀನಾದ ಹುವಾವೆ ಮೊಬೈಲ್ ಕಂಪೆನಿ ಮೊಬೈಲ್ ಉದ್ಯಮದ ಮೊದಲ ಅಡ್ವಾನ್ಸ್ ಕ್ಯಾಮೆರಾ ಸ್ಮಾರ್ಟ್‌ಪೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆಪಲ್, ಸ್ಯಾಮ್‌ಸಂಗ್ ಕಂಪೆನಿಗಳು ಸೇರಿದಂತೆ ಈ ವರೆಗೂ ಯಾವುದೇ ಮೊಬೈಲ್ ಕಂಪೆನಿ ಕೂಡ ಬಿಡುಗಡೆ ಮಾಡದಂತರ ಕ್ಯಾಮೆರಾ ಶಕ್ತಿ ಮತ್ತು ಇತರೆ ಫೀಚರ್ಸ್‌ಗಳನ್ನು ಹೊತ್ತು ಹುವಾವೆಯ ಎರಡು ಸ್ಮಾರ್ಟ್‌ಫೋನ್‌ಗಳು ಮಾರುಟಕಟ್ಟೆಗೆ ಎಂಟ್ರಿ ನೀಡಿದೆ.

ಹೌದು, ನೀವು ಊಹಿಸಿದಂತೆ, ಕಳೆದ ಕೆಲವು ದಿನಗಳಿಂದಲೂ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿರುವ ಹುವಾವೆ P30 ಮತ್ತು ಹುವಾವೆ P30 ಪ್ರೊ ಸ್ಮಾರ್ಟ್‌ಪೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. 40MP ವಿಶಾಲ ಕೋನ, 8MP 5X ಟೆಲಿಫೋಟೋ ಸೇರಿದಂತೆ 5x ಪರಿದರ್ಶಕ-ರೀತಿಯ ಆಪ್ಟಿಕಲ್ ಝೂಮ್ ಮತ್ತು ಹಿಂದೆ ನಾಲ್ಕು ಕ್ಯಾಮರಾಗಳನ್ನು ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಆಗಿ ಹುವಾವೆ P30 ಪ್ರೊ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

ವಿಶ್ವದ ಮೊದಲ ಅಡ್ವಾನ್ಸ್ ಕ್ಯಾಮೆರಾ ಪೋನ್ 'ಹುವಾವೆ P30 ಪ್ರೊ' ಲಾಂಚ್!!

ನಾಲ್ಕು ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿರುವ ಹುವಾವೆ P30 ಪ್ರೊ ಸ್ಮಾರ್ಟ್‌ಫೋನ್ 20MP ಅಲ್ಟ್ರಾ-ವೈಡ್, 40MP ವಿಶಾಲ ಕೋನ, 8MP 5X ಟೆಲಿಫೋಟೋ ಮತ್ತು ಒಂದು TOF (ಹಾರಾಟದ ಸಮಯ) ಆಳ-ಸಂವೇದಕ ಮಸೂರವನ್ನು ಹೊಂದಿರುವುದು ಈ ಸ್ಮಾರ್ಟ್‌ಫೋನಿನ ಅದ್ಬುತ ವಿಶೇಷತೆಯಾಗಿದೆ. ಹಾಗಾದರೆ, ಮೊಬೈಲ್ ಉದ್ಯಮದ ಮೊದಲ ಅಡ್ವಾನ್ಸ್ ಕ್ಯಾಮೆರಾ ಸ್ಮಾರ್ಟ್‌ಪೋನ್ ಹುವಾವೆ P30 ಪ್ರೊ ಹೇಗಿದೆ?, ಫೋನಿನ ಫೀಚರ್ಸ್ ಯಾವುವು?, ಬೆಲೆಗಳು ಎಷ್ಟು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹುವಾವೆ P30 ಪ್ರೊ ವಿನ್ಯಾಸ?

ಹುವಾವೆ P30 ಪ್ರೊ ವಿನ್ಯಾಸ?

ವಿಶ್ವ ಮೊಬೈಲ್ ಉದ್ಯಮದ ಮೊಟ್ಟ ಮೊದಲ ಹೈ ಅಡ್ವಾನ್ಸ್ ಕ್ಯಾಮೆರಾ ಸ್ಮಾರ್ಟ್‌ಪೋನ್ ಇದಾಗಿರುವುರಿಂದ ಹುವಾವೆ P30 ಪ್ರೊ ಸ್ಮಾರ್ಟ್‌ಫೋನ್ ಅತ್ಯಂತ ಪ್ರೀಮಿಯಮ್ ಆಗಿ ವಿನ್ಯಾಸಗೊಂಡಿದೆ. ಬಾಗಿದ ಅಂಚುಗಳ ವಿನ್ಯಾಸದಲ್ಲಿ ಫುಲ್‌ಸ್ಕ್ರೀನ್ ಡಿಸ್‌ಪ್ಲೇ ಮೂಲಕ ಕಂದೊಳಿಸುತ್ತಿರುವ ಫೋನ್ ವಾಟರ್‌ ಡ್ರಾಪ್ ನೋಚ್ ಹೊಂದಿರುವುದನ್ನು ನಾವು ನೋಡಬಹುದು.

ಹುವಾವೆ P30 ಪ್ರೊ ಡಿಸ್‌ಪ್ಲೇ

ಹುವಾವೆ P30 ಪ್ರೊ ಡಿಸ್‌ಪ್ಲೇ

ಹುವಾವೆ P30 ಪ್ರೊ ಸ್ಮಾರ್ಟ್‌ಪೋನ್ ಬಾಗಿದ ಅಂಚುಗಳು ಮತ್ತು "ವಾಟರ್-ಡ್ರಾಪ್" ದರ್ಜೆಯೊಂದಿಗೆ 6.47-ಇಂಚಿನ ಪೂರ್ಣ ಹೆಚ್‌ಡಿ+ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಪೋನ್ 19.5: 9 ರ ಆಕಾರ ಅನುಪಾತದಲ್ಲಿರುವ ಡಿಸ್‌ಪ್ಲೇ 1080x2340 ಪಿಕ್ಸೆಲ್‌ಗಳ ಸಾಮರ್ಥ್ಯವನ್ನು ಹೊಂದಿರುವುದು ಮಲ್ಟಿಮೀಡಿಯಾ ಪ್ರಿಯರಿಗೆ ನಂ.1 ಆಯ್ಕೆಯ ಸ್ಮಾರ್ಟ್‌ಪೋನ್ ಆಗಬಹುದು.

ಹುವಾವೆ P30 ಪ್ರೊ ಪ್ರೊಸೆಸರ್!

ಹುವಾವೆ P30 ಪ್ರೊ ಪ್ರೊಸೆಸರ್!

ಹುವಾವೇ P30 ಪ್ರೊ ಸ್ಮಾರ್ಟ್‌ಫೋನ್ 2.6GHzನಲ್ಲಿ 2 ಕೋರ್‌ಗಳನ್ನು ಹೊಂದಿದೆ. 2 ಕೋರ್‌ಗಳು 1.92GHz ಮತ್ತು 1.8GHz ನಲ್ಲಿ ದೊರೆಯುತ್ತದೆ. ಜೊತೆಗೆ 4 ಕೋರ್‌ಗಳನ್ನು ಹೊಂದಿರುವ 2.6GHz ಆಕ್ಟಾ ಕೋರ್ HiSilicon Kirin 980 ಪ್ರೊಸೆಸರ್ ಹೊತ್ತು ಹುವಾವೇ P30 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಇದು 8GB RAM ನೊಂದಿಗೆ ಬಂದಿರುವುದನ್ನು ನೋಡಬಹುದು.

ಹುವಾವೆ P30 ಪ್ರೊ ಮೆಮೊರಿ

ಹುವಾವೆ P30 ಪ್ರೊ ಮೆಮೊರಿ

ಹುವಾವೆ P30 ಪ್ರೊ ಸ್ಮಾರ್ಟ್‌ಪೋನ್ ಆಂಡ್ರಾಯ್ಡ್ 9 ಆಧಾರಿತ EMUI 9.1 ಮೂಲಕ ರನ್ ಆಗಲಿದ್ದು, 8GB RAM ಜೊತೆಗೆ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದಾದ 128GB ಆಂತರಿಕ ಮೆಮೊರಿಯನ್ನು ಹೊಂದಿದೆ. ಡ್ಯುಯಲ್-ಸಿಮ್ (ಜಿಎಸ್ಎಂ ಮತ್ತು ಜಿಎಸ್ಎಂ) ಸ್ಮಾರ್ಟ್‌ಫೋನ್ ಇದಾಗಿದ್ದು, ಫೋನ್ ನ್ಯಾನೋ ಸಿಮ್ ಮತ್ತು ನ್ಯಾನೋ-ಸಿಮ್ ಕಾರ್ಡ್ಗಳನ್ನು ಸ್ವೀಕರಿಸುತ್ತದೆ.

ಹುವಾವೆ P30 ಪ್ರೊ ಕ್ಯಾಮೆರಾ

ಹುವಾವೆ P30 ಪ್ರೊ ಕ್ಯಾಮೆರಾ

ಮೊದಲೇ ಹೇಳಿದಂತೆ, 40MP ವಿಶಾಲ ಕೋನ, 8MP 5X ಟೆಲಿಫೋಟೋ ಸೇರಿದಂತೆ 5x ಪರಿದರ್ಶಕ-ರೀತಿಯ ಆಪ್ಟಿಕಲ್ ಝೂಮ್ ಮತ್ತು ಹಿಂದೆ ನಾಲ್ಕು ಕ್ಯಾಮರಾಗಳನ್ನು ಹೊಂದಿರುವ ವಿಶ್ವದ ಮೊದಲ ಫೋನ್ ಆಗಿ ಹುವಾವೇ P30 ಪ್ರೊ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಎಫ್ / 2.0 ಅಪಾರ್ಚರ್ ಜೊತೆಗೆ 32 ಮೆಗಾಪಿಕ್ಸೆಲ್ ಕ್ಯಾಮರಾ ಸೆಲ್ಫೀ ಕ್ಯಾಮೆರಾವನ್ನು ನಿಡಲಾಗಿದೆ.

ಹುವಾವೆ P30 ಪ್ರೊ ಇತರೆ ಫೀಚರ್ಸ್

ಹುವಾವೆ P30 ಪ್ರೊ ಇತರೆ ಫೀಚರ್ಸ್

ಹುವಾವೆ P30 ಪ್ರೊ 4,200 mAh ಸಾಮರ್ಥ್ಯದ ಶಕ್ತಿಶಾಲಿ ಬ್ಯಾಟರಿಯಿಂದ ಚಾಲಿತವಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ವೈರ್ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. LTE ಬಳಸುವ ಬ್ಯಾಂಡ್ 40 ಬೆಂಬಲ, Wi-Fi 802.11 ಬ್ಲೂಟೂತ್ v5.00, NFC, ಇನ್ಫ್ರಾರೆಡ್, ಯುಎಸ್ಬಿ ಟೈಪ್-ಸಿ ಮತ್ತು 4ಜಿ ಒಳಗೊಂಡಂತೆ, ಹುವಾವೆ P30 ಪ್ರೊ ಫೇಸ್ ಅನ್ಲಾಕ್ ಅನ್ನು ಬೆಂಬಲಿಸುತ್ತದೆ.

ಹುವಾವೆ P30 ಪ್ರೊ ಬೆಲೆಗಳು

ಹುವಾವೆ P30 ಪ್ರೊ ಬೆಲೆಗಳು

ಹುವಾವೆ P30 ಪ್ರೊ ಸ್ಮಾರ್ಟ್‌ಫೋನ್ ಬೆಲೆಗಳು ಕೂಡ ಅದರ ಫೀಚರ್ಸ್‌ಗೆ ಸರಿಸಮನಾಗಿವೆ. 8 ಜಿಬಿ RAM/256 ಜಿಬಿ ಶೇಖರಣಾ ರೂಪಾಂತರದ ಹುವಾವೆ P30 ಪ್ರೊ ಸ್ಮಾರ್ಟ್‌ಫೋನ್ ಬೆಲೆ 1099 ಯುರೋ (ಸರಿಸುಮಾರು ರೂ 85,600) ಗಳಾದರೆ, 8 ಜಿಬಿ RAM/512 ಜಿಬಿ ಮಾದರಿಯ ಫೋನ್ 1,249 ಯುರೋ (ಸರಿಸುಮಾರು ರೂ 97,300) ಗಳಿಗೆ ಬಿಡುಗಡೆಯಾಗಿದೆ.

Best Mobiles in India

English summary
hinese telecommunications and consumer electronics manufacturer Huawei on Tuesday launched two industry-first, advanced camera smartphones -- Huawei P30 and P30 Pro. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X