Home
ಮೊಬೈಲ್

12,990 ರೂ.ಗೆ 'ಹುವಾವೆ Y9'!..ಬೆಲೆ ಇಳಿಕೆಯಿಂದ ಶಿಯೋಮಿಗೆ ಬಿಗ್ ಎಫೆಕ್ಟ್?!

ಇತ್ತೀಚಿಗಷ್ಟೇ ಭಾರತದಲ್ಲಿ ಬಿಡುಗಡೆಯಾಗಿದ್ದ ಹುವಾವೆ ಕಂಪೆನಿಯ ಜನಪ್ರಿಯ ಬಜೆಟ್ ಸ್ಮಾರ್ಟ್‌ಫೋನ್ 'ಹುವಾವೆ Y9' ಭಾರೀ ಬೆಲೆ ಕಳೆದುಕೊಂಡಿದೆ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ 'ಹುವಾವೆ Y9' ಫೋನಿನ ಬೆಲೆಯನ್ನು ಇಳಿಕೆ ಮಾಡಲಾಗಿದ್ದು, 3,000 ರೂ. ಬೆಲೆ ಇಳಿಕೆ ಕಂಡಿರುವ ಈ ಸ್ಮಾರ್ಟ್‌ಫೋನ್ ಇದೀಗ ಎಲ್ಲರ ಗಮನಸೆಳೆಯುತ್ತಿದೆ.

12,990 ರೂ.ಗೆ 'ಹುವಾವೆ Y9'!..ಬೆಲೆ ಇಳಿಕೆಯಿಂದ ಶಿಯೋಮಿಗೆ ಬಿಗ್ ಎಫೆಕ್ಟ್?!

ಹೌದು, ಹುವಾವೆ Y9 ಫೋನ್ ಬೆಲೆಯನ್ನು 3,000 ರೂ. ಇಳಿಕೆ ಮಾಡಲಾಗಿದ್ದು, ಈ ಮೊದಲು ಅಮೆಜಾನ್‌ನಲ್ಲಿ 15,990 ರೂ.ಗಳಿಗೆ ದೊರೆಯುತ್ತಿದ್ದ ಈ ಸ್ಮಾರ್ಟ್‌ಫೋನ್ ಪ್ರಸ್ತುತ 12,990 ರೂ.ಗೆ ಲಭ್ಯವಾಗುತ್ತಿದೆ. ವಿವಿಧ ಮಾದರಿಯ ಸ್ಮಾರ್ಟ್‌ಫೋನ್‌ಗಳ ಪ್ರವೇಶದಿಂದ ಸ್ಪರ್ಧೆ ಹೆಚ್ಚಾಗುತ್ತಿರುವುದರಿಂದ ಹುವೆವೆ ಬೆಲೆ ಇಳಿಕೆಯ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.

6.5 ಇಂಚುಗಳ FHD+ ಡಿಸ್‌ಪ್ಲೇ, 4000 mAh ಬ್ಯಾಟರಿ, ಜಿಪಿಯು ಟರ್ಬೊನಂತಹ ಹಲವು ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿರುವ ಹುವಾವೆ Y9 (2019) ಈಗಾಗಲೇ ಮೊಬೈಲ್ ಪ್ರಿಯರನ್ನು ಸೆಳೆದಿದೆ. ಹಾಗಾದರೆ, ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡುಹೊಡೆಯಲು ಬೆಲೆ ಕಳೆದುಕೊಂಡಿರುವ ಹುವಾವೆ Y9 ಫೋನಿನ ವಿಶೇಷತೆಗಳು ಯಾವುವು ನೋಡೋಣ ಬನ್ನಿ.

ಡಿಸ್‌ಪ್ಲೇ ಮತ್ತು ವಿನ್ಯಾಸ

ಡಿಸ್‌ಪ್ಲೇ ಮತ್ತು ವಿನ್ಯಾಸ

ಹುವಾವೆ Y9 (2019) ಸ್ಮಾರ್ಟ್‌ಪೋನ್‌ 19:5:9 ಆಕಾರ ಅನುಪಾತದಲ್ಲಿ 6.5 ಇಂಚುಗಳಷ್ಟು ದೊಡ್ಡದಾದ FHD+ ಡಿಸ್‌ಪ್ಲೇಯನ್ನು ಹೊಂದಿದೆ. 1080x2340 ಪಿಕ್ಸೆಲ್ ಫುಲ್ ವ್ಯೂ ಡಿಸ್‌ಪ್ಲೇ ಇದಾಗಿದ್ದು 3D ಕರ್ವ್ಡ್ ಪ್ರದರ್ಶನವಿದೆ. ಇನ್ನು ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಮತ್ತು ಫೀಂಗರ್‌ಪ್ರಿಂಟ್, ಡಿಸ್‌ಪ್ಲೇ ನೋಚ್ ಹೊಂದಿರುವ ಫೋನ್ ಪ್ರೀಮಿಯಮ್ ಡಿಸೈನ್ ಹೊಂದಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಆಕ್ಟಾ-ಕೋರ್ ಕಿರಿನ್ 710 12nm ಜೊತೆಗೆ ಗ್ರಾಫಿಕ್ಸ್‌ಗಾಗಿ ARM ಮಾಲಿ- G51 MP4 GPU ಮತ್ತು AI ಪವರ್ 7.0 ನೂತನ ತಂತ್ರಜ್ಞಾನವನ್ನು ಹುವಾವೆ Y9 (2019) ಸ್ಮಾರ್ಟ್‌ಪೋನಿನಲ್ಲಿ ನೋಡಬಹುದಾಗಿದೆ. 4GB RAM ಮತ್ತು 64ಜಿಬಿ ಮೆಮೊರಿ ಹಾಗೂ 6GB RAM ಮತ್ತು 128 ಜಿಬಿಮೆಮೊರಿಯ ಎರಡು ಮಾದರಿಗಳಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಕ್ಯಾಮೆರಾ ಫೀಚರ್ಸ್?

ಕ್ಯಾಮೆರಾ ಫೀಚರ್ಸ್?

ಹುವಾವೆ Y9 (2019) ನಾಲ್ಕು ಕ್ಯಾಮೆರಾ ಸ್ಮಾರ್ಟ್‌ಪೋನ್ ಆಗಿದ್ದು, 13 MP (f/1.8 aperture) ಮತ್ತು 2 MP ಡೆಪ್ತ್ ಸೆನ್ಸಾರ್ (f/2.4 aperture) ಹೊಂದಿರುವ ಎರಡು ಕ್ಯಾಮೆರಾಗಳನ್ನು ಹಿಂಬಾಗದಲ್ಲಿ ಹೊಂದಿದೆ. ಇನ್ನು 16 MP (f/1.0 aperture) + 2 MP (f/2.4 aperture) ಸೆಲ್ಫಿ ಕ್ಯಾಮೆರಾಗಳು LED ಫ್ಲ್ಯಾಶ್, HDR, PDAF ಮತ್ತು AI ತಂತ್ರಜ್ಞಾನವನ್ನು ಒಳಗೊಂಡಿವೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಹುವಾವೆ Y9 (2019) ಸ್ಮಾರ್ಟ್‌ಪೋನ್‌ 4,000mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಜೊತೆಗೆ ಮೈಕ್ರೊ ಎಸ್ಡಿ ಕಾರ್ಡ್‌ದಿಗೆ 400 ಜಿಬಿ ವರೆಗೆ ವಿಸ್ತರಿಸಬಲ್ಲ ಆಯ್ಕೆ ಸೇರಿದಂತೆ, ಫಿಂಗರ್‌ಪ್ರಿಂಟ್ 4.0 ಐಡೆಂಟಿಫಿಕೇಷನ್, ಫಿಂಗರ್‌ಪ್ರಿಂಟ್ ನೇವಿಗೇಷನ್, ಮೈಕ್ರೋ USB, Wi-Fi ಡೈರಕ್ಟ್, GPS / AGPS / Glonass ನಂತಹ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಈ ಮೊದಲು 15,990 ರೂ.ಗಳಿಗೆ ದೊರೆಯುತ್ತಿದ್ದ ಈ ಸ್ಮಾರ್ಟ್‌ಫೋನ್ ಮೇಲೆ 3,000 ರೂ. ಇಳಿಕೆ ಮಾಡಿರುವುದರಿಂದ ಇದೀಗ ಪ್ರಸ್ತುತ 12,990 ರೂ.ಗೆ ಲಭ್ಯವಾಗುತ್ತಿದೆ. ಅಮೆಜಾನ್‌ ಅಥವಾ ಹುವಾವೆ ಕಂಪೆನಿಯ ಅಫಿಷಿಯಲ್ ವೆಬ್‌ಸೈಟ್‌ಗಳಲ್ಲಿ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿದೆ. ಬಜೆಟ್ ಸ್ಮಾರ್ಟ್‌ಫೋನ್ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಮಾರ್ಟ್‌ಫೋನ್ ಇದಾಗಿದೆ.

Best Mobiles in India

English summary
Huawei Y9 (2019) has received a major price cut in India. The smartphone is currently retailing for as low as Rs. 12990 via Amazon. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+