ಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾಯ್ತು 'ಹುವಾವೆ ವೈ9'!..ಇಲ್ಲಿದೆ ಫುಲ್ ಡೀಟೇಲ್ಸ್!!

|

ಚೀನಾದ ಪ್ರಖ್ಯಾತ ಮೊಬೈಲ್ ಕಂಪೆನಿ ಹುವಾವೆ ಭಾರತಕ್ಕೆ ಮತ್ತೊಂದು ಬಜೆಟ್ ಸ್ಮಾರ್ಟ್‌ಪೋನ್ ಒಂದನ್ನು ಬಿಡುಗಡೆ ಮಾಡಲು ತುದಿಗಾಲಿನಲ್ಲಿ ನಿಂತಿದೆ. ಕಳೆದ ಎರಡು ತಿಂಗಳ ಹಿಂದೆ ಹುವಾವೆಕಂಪೆನಿ ಘೋಷಿಸಿದಂತೆ 'ಹುವಾವೆ ವೈ9 2109' ಸ್ಮಾರ್ಟ್‌ಪೋನ್ ದೇಶದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ. ಅಮೆಜಾನ್ ಈಗಾಗಲೇ ಸ್ಮಾರ್ಟ್‌ಫೋನ್ ಅನ್ನು ಮಾರಾಟಕ್ಕಿಟ್ಟಿದೆ.

ಹೌದು, ಹುವಾವೆ Y9 (2019) ಸ್ಮಾರ್ಟ್‌ಪೋನ್‌ಗಾಗಿ 'ನೋಟಿಫೈ ಮಿ' ಆಯ್ಕೆಯನ್ನು ಅಮೆಜಾನ್ ಇಂಡಿಯಾ ನೇರ ಪ್ರಸಾರ ಮಾಡಿದೆ. ಆದರೆ, ಸ್ಮಾರ್ಟ್‌ಪೋನಿನ ಅಧಿಕೃತ ಬಿಡುಗಡೆಯ ದಿನಾಂಕದಲ್ಲಿ ಯಾವುದೇ ದೃಢೀಕರಣವಿಲ್ಲದೇ ಇದ್ದರೂ ಸಹ, ಶೀಘ್ರದಲ್ಲೇ ಪೋನ್ ಬಿಡುಗಡೆಯಾಗುವುದು ಸ್ಪಷ್ಟವಾಗಿದೆ. ಇದು ಮೊಬೈಲ್ ಪ್ರಿಯರಲ್ಲಿ ಭಾರೀ ಸಂತಸವನ್ನು ಮೂಡಿಸಿದೆ.

ಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾಯ್ತು 'ಹುವಾವೆ ವೈ9'!..ಇಲ್ಲಿದೆ ಫುಲ್ ಡೀಟೇಲ್ಸ್!!

6.5 ಇಂಚುಗಳ FHD+ ಡಿಸ್‌ಪ್ಲೇ, 4000 mAh ಬ್ಯಾಟರಿ, ಜಿಪಿಯು ಟರ್ಬೊನಂತಹ ಹಲವು ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿರುವ ಹುವಾವೆ Y9 (2019) ಈಗಾಗಲೇ ಮೊಬೈಲ್ ಪ್ರಿಯರನ್ನು ಸೆಳೆದಿದೆ. ಹಾಗಾದರೆ, 15 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ದೇಶದ ಮಾರುಕಟ್ಟೆಗೆ ಕಾಲಿಡಲಿರುವ ಹುವಾವೆ Y9 ಫೋನಿನ ವಿಶೇಷತೆಗಳು ಯಾವುವು ನೋಡೋಣ ಬನ್ನಿ.

ಡಿಸ್‌ಪ್ಲೇ ಮತ್ತು ವಿನ್ಯಾಸ

ಡಿಸ್‌ಪ್ಲೇ ಮತ್ತು ವಿನ್ಯಾಸ

ಹುವಾವೆ Y9 (2019) ಸ್ಮಾರ್ಟ್‌ಪೋನ್‌ 19:5:9 ಆಕಾರ ಅನುಪಾತದಲ್ಲಿ 6.5 ಇಂಚುಗಳಷ್ಟು ದೊಡ್ಡದಾದ FHD+ ಡಿಸ್‌ಪ್ಲೇಯನ್ನು ಹೊಂದಿದೆ. 1080x2340 ಪಿಕ್ಸೆಲ್ ಫುಲ್ ವ್ಯೂ ಡಿಸ್‌ಪ್ಲೇ ಇದಾಗಿದ್ದು 3D ಕರ್ವ್ಡ್ ಪ್ರದರ್ಶನವಿದೆ. ಇನ್ನು ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಮತ್ತು ಫೀಂಗರ್‌ಪ್ರಿಂಟ್, ಡಿಸ್‌ಪ್ಲೇ ನೋಚ್ ಹೊಂದಿರುವ ಫೋನ್ ಪ್ರೀಮಿಯಮ್ ಡಿಸೈನ್ ಹೊಂದಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಆಕ್ಟಾ-ಕೋರ್ ಕಿರಿನ್ 710 12nm ಜೊತೆಗೆ ಗ್ರಾಫಿಕ್ಸ್‌ಗಾಗಿ ARM ಮಾಲಿ- G51 MP4 GPU ಮತ್ತು AI ಪವರ್ 7.0 ನೂತನ ತಂತ್ರಜ್ಞಾನವನ್ನು ಹುವಾವೆ Y9 (2019) ಸ್ಮಾರ್ಟ್‌ಪೋನಿನಲ್ಲಿ ನೋಡಬಹುದಾಗಿದೆ. 4GB RAM ಮತ್ತು 64ಜಿಬಿ ಮೆಮೊರಿ ಹಾಗೂ 6GB RAM ಮತ್ತು 128 ಜಿಬಿಮೆಮೊರಿಯ ಎರಡು ಮಾದರಿಗಳಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.

ಕ್ಯಾಮೆರಾ ಫೀಚರ್ಸ್?

ಕ್ಯಾಮೆರಾ ಫೀಚರ್ಸ್?

ಹುವಾವೆ Y9 (2019) ನಾಲ್ಕು ಕ್ಯಾಮೆರಾ ಸ್ಮಾರ್ಟ್‌ಪೋನ್ ಆಗಿದ್ದು, 13 MP (f/1.8 aperture) ಮತ್ತು 2 MP ಡೆಪ್ತ್ ಸೆನ್ಸಾರ್ (f/2.4 aperture) ಹೊಂದಿರುವ ಎರಡು ಕ್ಯಾಮೆರಾಗಳನ್ನು ಹಿಂಬಾಗದಲ್ಲಿ ಹೊಂದಿದೆ. ಇನ್ನು 16 MP (f/1.0 aperture) + 2 MP (f/2.4 aperture) ಸೆಲ್ಫಿ ಕ್ಯಾಮೆರಾಗಳು LED ಫ್ಲ್ಯಾಶ್, HDR, PDAF ಮತ್ತು AI ತಂತ್ರಜ್ಞಾನವನ್ನು ಒಳಗೊಂಡಿವೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಹುವಾವೆ Y9 (2019) ಸ್ಮಾರ್ಟ್‌ಪೋನ್‌ 4,000mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಜೊತೆಗೆ ಮೈಕ್ರೊ ಎಸ್ಡಿ ಕಾರ್ಡ್‌ದಿಗೆ 400 ಜಿಬಿ ವರೆಗೆ ವಿಸ್ತರಿಸಬಲ್ಲ ಆಯ್ಕೆ ಸೇರಿದಂತೆ, ಫಿಂಗರ್‌ಪ್ರಿಂಟ್ 4.0 ಐಡೆಂಟಿಫಿಕೇಷನ್, ಫಿಂಗರ್‌ಪ್ರಿಂಟ್ ನೇವಿಗೇಷನ್, ಮೈಕ್ರೋ USB, Wi-Fi ಡೈರಕ್ಟ್, GPS / AGPS / Glonass ನಂತಹ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿದೆ.

ಬೆಲೆ ಮತ್ತು ಮಾರಾಟ!

ಬೆಲೆ ಮತ್ತು ಮಾರಾಟ!

ಈಗಾಗಲೇ ತಿಳಿದುಬಂದಿರುವಂತೆ ಹುವಾವೆ Y9 (2019) ಸ್ಮಾರ್ಟ್‌ಪೋನಿನ ಅಂದಾಜು ಬೆಲೆ 15,000 ರೂ.ಗಳ ಬಜೆಟ್ ಒಳಗೆ ಇರುತ್ತದೆ ಎಂದು ಕಂಪೆನಿಯೇ ಹೇಳಿಕೊಂಡಿದೆ. ಆದರೆ, ನಿಖರ ಬೆಲೆ ಎಷ್ಟು ಎಂಬುದನ್ನು ತಿಳಿಯಲು ಇನ್ನು ಕೆಲವು ದಿನಗಳ ಕಾಲ ಕಾಯಬೇಕು. ಅಮೆಜಾನ್ ಇಂಡಿಯಾ 'ನೋಟಿಫೈ ಮಿ' ಆಯ್ಕೆಯನ್ನು ನೀಡಿರುವುದನ್ನು ನೀವು ಈಗ ನೋಡಬಹುದು.

Most Read Articles
Best Mobiles in India

English summary
Huawei Y9 India launch has been teased on Amazon India and while its price in India is expected to be near the Rs. 15,000-mark, the Huawei Y9 comes with quad cameras, 6.5-inch FHD+, GPU Turbo and more. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X