ಐ ಫೋನ್ 6 ಕುರಿತು ಆಪಲ್ ವಿಶ್ಲೇಷಕರ ಚಿಂತನೆ ಏನು

Written By:

ಇಂದಿನ ಲೇಖನ ತುಸು ವಿಭಿನ್ನವಾದ ವಿಷಯವನ್ನು ನಿಮ್ಮ ಮುಂದಿಡುತ್ತಿದೆ. ತಂತ್ರಜ್ಞಾನ ಮುಂದುವರಿದಂತೆ ಮಾನವ ವಿಕಸನ ಸಾಧ್ಯ. ಆದರೆ ಈ ಮುಂದುವರಿಕೆ ಕೆಲವೊಮ್ಮೆ ಸ್ಪರ್ಧೆಯನ್ನು ಏರ್ಪಡಿಸುತ್ತದೆ.

ಹೌದು ಪ್ರಸಿದ್ಧ ಎರಡು ಕಂಪೆನಿಗಳು ತಮ್ಮ ತಮ್ಮ ಉತ್ಪನ್ನಗಳ ಮೂಲಕ ಚಾಲ್ತಿಗೆ ಬಂದವೆಂದರೆ ಅವುಗಳ ನಡುವೆ ತುಸು ಕಠಿಣವಾದ ಪೈಪೋಟಿ ನಡೆದುಬಿಡುತ್ತದೆ. ಉದಾಹರಣೆಗೆ ಆಪಲ್ ಮತ್ತು ಸ್ಯಾಮ್‌ಸಂಗ್, ಆದರೂ ಇವುಗಳನ್ನು ಖರೀದಿಸುವ ತನ್ನ ಗ್ರಾಹಕರಿಗೆ ನಷ್ಟವನ್ನುಂಟು ಮಾಡದೇ ಈ ಕಂಪೆನಿಗಳು ತಮ್ಮ ಬಳಕೆದಾರರ ಜಾಲವನ್ನು ವಿಸ್ತರಿಸಿಕೊಂಡಿವೆ.

ಐ ಫೋನ್ 6 ಕುರಿತು ಆಪಲ್ ವಿಶ್ಲೇಷಕರ ಚಿಂತನೆ ಏನು

ಇಂದಿನ ಲೇಖನದಲ್ಲಿ ನಾವು ಐ ಫೋನ್ ಕುರಿತ ವಿಶ್ಲೇಷಣೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಆಪಲ್ ಎಂಬ ವಿಷಯವನ್ನು ನಾವು ಹೇಳಿದ ಕೂಡಲೇ ನಾವು ಐವಾಚ್ ಆಪಲ್ ಟಿವಿಯನ್ನು ಮರೆತೇ ಬಿಡುತ್ತೇವೆ. ಆದರೆ ಮನದಲ್ಲಿ ಅಚ್ಚೊತ್ತುವುದು ಕೇವಲ ಐ ಫೋನ್ ಮಾತ್ರವೇ.

ಹೌದು ಎಷ್ಟೇ ಹೊಸ ನವೀಕರಣ ಮೊಬೈಲ್ ಕ್ಷೇತ್ರದಲ್ಲಿ ಉಂಟಾದರೂ ಐ ಫೋನ್‌ಗಿರುವ ಬೇಡಿಕೆಯನ್ನು ತಗ್ಗಿಸಲಾಗುವುದಿಲ್ಲ. ಐ ಫೋನ್ ಬಳಸುವವರ ಹೆಮ್ಮೆಯ ಸ್ನೇಹಿತನಾಗಿ ಆಪಲ್ ಐ ಫೋನ್ ಮಾರ್ಪಟ್ಟಿದೆ. ಈಗ ಮಾರುಕಟ್ಟೆಗೆ ಬರಲಿರುವ ಹೊಸ ಆಪಲ್ ಐ ಫೋನ್ 6 ಕೂಡ ಗ್ರಾಹಕರಿಗೆ ಬಹಳಷ್ಡು ಉತ್ತಮ ಅಂಶಗಳನ್ನು ನೀಡುವಲ್ಲಿ ಸಫಲವಾಗಿದೆ ಎಂದೇ ಹೇಳಬಹುದು.

ಇದು ದೊಡ್ಡ ಸ್ಕ್ರೀನ್ ಅನ್ನು ಒಳಗೊಂಡಿದ್ದು, ತಮ್ಮ ಫೋನ್‌ಗಳಿಗೆ ಬಳಕೆದಾರರನ್ನು ಖಂಡಿತ ಇದು ಅಪ್‌ಗ್ರೇಡ್ ಮಾಡುತ್ತದೆ. ನೂತನ ತಂತ್ರಜ್ಞಾನವನ್ನು ಹೊಂದಿರುವ ಈ ಫೋನ್ ಆಪಲ್ ಪ್ರಿಯರ ಮನದಣಿವನ್ನು ನೀಗಸಲಿದೆ. ಮತ್ತು ಉತ್ತಮ ಮಾರುಕಟ್ಟೆಯನ್ನು ಒದಗಿಸುವ ಸನ್ನಾಹದಲ್ಲಿದೆ ಕೂಡ.

ಹಾಗಿದ್ದರೆ ಮುಂಬರಲಿರುವ ಆಪಲ್ ಐ ಫೋನ್ 6 ನ ಹೆಚ್ಚಿನ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಲು ಕನ್ನಡ ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot