Home
ಮೊಬೈಲ್

ಐಬಾಲ್‌ ಆಂಡಿ 4.3j vs ಮೈಕ್ರೋಮ್ಯಾಕ್ಸ್‌ ಎ100

By Vijeth Kumar Dn

ಐಬಾಲ್‌ ಆಂಡಿ 4.3j vs ಮೈಕ್ರೋಮ್ಯಾಕ್ಸ್‌ ಎ100

ಭಾರತೀಯ ಗ್ರಾಹಕ ಮಾರುಕಟ್ಟೆಗೆ ದಿನನಿತ್ಯ ಒಂದಲ್ಲಾ ಒಂದು ನೂತನ ಉತ್ಪನ್ನಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಅದರಲ್ಲಿಯೂ ಬಜೆಟ್‌ ಸ್ನೇಹಿ ಸಾಧನಗಳಂತೂ ಒಂದರ ಹಿಂದೆ ಒಂದರಂತೆ ಬರುತ್ತಲೇ ಇವೆ. ಈ ಸಾಲಿಗೆ ಇತ್ತೀಚೆಗೆ ಸ್ಥಳೀಯ ಮೊಬೈಲ್‌ ತಯಾರಿಕಾ ಸಂಸ್ಥೆಗಳಾದ ಐಬಾಲ್‌ ಹಾಗೂ ಮೈಕ್ರೋಮ್ಯಾಕ್ಸ್‌ ತಮ್ಮ ನೂತನ ಸ್ಮಾರ್ಟ್‌ಫೋನ್‌ಗಳಾದ ಐಬಾಲ್‌ ಆಂಡಿ 4.3 ಜೆ ಹಾಗೂ ಮೈಕ್ರೋಮ್ಯಾಕ್ಸ್‌ ಕ್ಯಾನ್ವಾಸ್‌ ಎ100 ಫೋನ್‌ಗಳನ್ನು ಕೈಗೆಟಕುವ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.

ಅಂದಹಾಗೆ ನೀವು ಕೂಡ ಈ ನೂತನ ಬಜೆಟ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದನ್ನಾದರು ಖರೀದಿಸ ಬೇಕೆಂದಿದ್ದಲ್ಲಿ ಅದಕ್ಕೂ ಮುನ್ನ ಇವೆರೆಡರ ನಡುವಿನ ಹೋಲಿಕೆಯನ್ನು ಒಮ್ಮೆ ಓದಿ ನೋಡಿ.

ಗಾತ್ರ ಹಾಗೂ ಸುತ್ತಳತೆ: ಆಂಡಿ 4.3j ನ ವಿವರಗಳು ಲಭ್ಯವಿಲ್ಲ, ಅಂದಹಾಗೆ ಮೈಕ್ರೋಮ್ಯಾಕ್ಸ್‌ ಕ್ಯಾನ್ವಾಸ್‌ A100 ಸ್ಮಾರ್ಟ್‌ಫೋನ್‌ 72.6 x 142.2 x 11.9 mm ಸುತ್ತಳತೆಯೊಂದಿಗೆ 168 ಗ್ರಾಂ ತೂಕವಿದೆ.

ದರ್ಶಕ: ಆಂಡಿ 4.3j ನಲ್ಲಿ 4.3 ಇಂಚಿನ ಮಲ್ಟಿಟಚ್‌ ಸ್ಕ್ರೀನ್‌ ದರ್ಶಕ ಸೇರಿದಂತೆ 560 x 480 ಪಿಕ್ಸೆಲ್ಸ್‌ ಹೊಂದಿದ್ದರೆ, ಮೈಕ್ರೋಮ್ಯಾಕ್ಸ್‌ ಕ್ಯಾನ್ವಾಸ್‌ A100 ಸ್ಮಾರ್ಟ್‌ಫೋನ್‌ 5 ಇಂಚಿನ ಟಚ್‌ಸ್ಕ್ರೀನ್‌ ಹಾಗೂ 480 x 800 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ.

ಪ್ರೊಸೆಸರ್‌: ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ 1GHz ಪ್ರೊಸೆಸರ್‌ ಇದೆ.

ಆಪರೇಟಿಂಗ್‌ ಸಿಸ್ಟಂ: ಆಂಡಿ 4.3j ಆಂಡ್ರಾಯ್ಡ್‌ 2.3 ಜಿಂಜರ್‌ಬ್ರೆಡ್‌ OS ಹೊಂದಿದ್ದರೆ, ಮೈಕ್ರೋಮ್ಯಾಕ್ಸ್‌ ಕ್ಯಾನ್ವಾಸ್‌ A100 ನಲ್ಲಿ ಆಂಡ್ರಾಯ್ಡ್‌ 4.0 ICS ಆಪರೇಟಿಂಗ್‌ ಸಿಸ್ಟಂ ಇದೆ.

ಕ್ಯಾಮೆರಾ: ಆಂಡಿ 4.3j ನಲ್ಲಿ ಹಿಂಬದಿಯ 5MP ಕ್ಯಾಮೆರಾ ಹಾಗೂ ವಿಡಿಯೋ ಕರೆಗಾಗಿ 1.3MP ನ ಮುಂಬದಿಯ ಕ್ಯಾಮೆರಾ ಇದ್ದರೆ, ಮತ್ತೊಂದೆಡೆ ಮೈಕ್ರೋಮ್ಯಾಕ್ಸ್‌ ಕ್ಯಾನ್ವಾಸ್‌ A100 ನಲ್ಲಿ ಹಿಂಬದಿಯ 5MP ಕ್ಯಾಮೆರಾ, ಆಟೋ ಫೋಕಸ್‌, LED ಫ್ಲಾಷ್‌ ಹಾಗು ವಿಡಿಯೋ ಕರೆಗಾಗಿ 0.3MP ನ ಮುಂಬದಿಯ ಕ್ಯಾಮೆರಾ ಇದೆ.

ಸ್ಟೋರೇಜ್‌: ಎರಡೂ ಸ್ಮಾರ್ಟ್‌ಫೋನ್‌ ಗಳಲ್ಲಿ 2GB ಆಂತರಿಕ ಸ್ಟೋರೇಜ್‌, 512MB RAM ಹಾಗು ಮೈಕ್ರೋ SD ಕಾರ್ಡ್‌ ಮೂಲಕ 32GB ವರೆಗೆ ಮೆಮೊರಿ ವಿಸ್ತರಿಸ ಬಹುದಾಗಿದೆ.

ಕನೆಕ್ಟಿವಿಟಿ: ಈ ವಿಭಾಗದಲ್ಲಿಯೂ ಕೂಡ ಎರಡೂ ಸಾಧನಗಳಲ್ಲಿ 3G, ಮೈಕ್ರೋ USB 2.0, ಬ್ಲೂಟೂತ್‌ ಹಾಗೂ Wi-Fi ಫೀಚರ್ಸ್‌ಗಳಿವೆ.

ಬ್ಯಾಟರಿ: ಆಂಡಿ 4.3j ನಲ್ಲಿ 1,630 mAh ಹಾಗೂ 900 mAh ನ ಎರಡು ಬ್ಯಾಟರಿಗಳಿದ್ದು ಒಟ್ಟು 2,530 mAh ಸಾಮರ್ತ್ಯದಿಂದ ಕೂಡಿದ್ದು 9 ಗಂಟೆಗಳ ಟಾಕ್‌ ಟೈಮ್‌ ನೀಡಿದರೆ, ಮೈಕ್ರೋಮ್ಯಾಕ್ಸ್‌ ಕ್ಯಾನ್ವಾಸ್‌ A100 ನಲ್ಲಿ 2,000 mAh Li-ion ಬ್ಯಾಟರಿ ಇದ್ದು 5 ಗಂಡೆಗಳ ಟಾಕ್‌ ಟೈಮ್‌ ಹಾಗೂ 180 ಸ್ಟ್ಯಾಂಡ್‌ ಬೈ ನೀಡುತ್ತದೆ,.

ಬೆಲೆ: ಖರೀದಿಸುವುದಾದರೆ ಐಬಾಲ್‌ ಆಂಡಿ 4.3j ರೂ. 9,499 ದರದಲ್ಲಿ ಲಭ್ಯವಿದ್ದರೆ, ಮೈಕ್ರೋಮ್ಯಾಕ್ಸ್‌ ಕ್ಯಾನ್ವಾಸ್‌ A100 ರೂ. 9,999 ದರದಲ್ಲಿ ದೊರೆಯಲಿದೆ.

Read In English...

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+