ಐಬಾಲ್ ಆಂಡಿಯಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಬಿಡುಗಡೆ
ದೇಶೀಯ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿ ಐಬಾಲ್ ಆಂಡಿ ಮಾರುಕಟ್ಟೆಗೆ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.ಐಬಾಲ್ ಆಂಡಿ 4-ಬಿ2 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು,5,299 ಬೆಲೆಯನ್ನು ನಿಗದಿಪಡಿಸಿದೆ.
ಈ ಸ್ಮಾರ್ಟ್‌ಫೋನಿಗೆ 3ಜಿ ಕನೆಕ್ಟಿವಿಟಿ ವಿಶೇಷತೆ ನೀಡಿಲ್ಲ. ವೈಫೈ,ಬ್ಲೂಟೂತ್,ಜಿಪಿಎಸ್ ಕನೆಕ್ಟಿವಿಟಿ ವಿಶೇಷತೆ ಹೊಂದಿದ್ದು,ಪ್ರಿಲೋಡೆಡ್ ಆಗಿ ಫೇಸ್‌ಬುಕ್,ವಾಟ್ಸ್‌ಆಪ್, ವೀಚಾಟ್‌ಗಳ ಆಪ್‌ನೊಂದಿಗೆ ಬಿಡುಗಡೆಯಾಗಿದೆ.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
4 ಇಂಚಿನ WVGA ಸ್ಕ್ರೀನ್(480x800 ಪಿಕ್ಸೆಲ್)
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
1.3 GHz Cortex A7 ಡ್ಯುಯಲ್ ಕೋರ್ ಪ್ರೊಸೆಸರ್
256 ಎಂಬಿ ರ್‍ಯಾಮ್
3.2 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
0.3 ಎಂಪಿ ಮುಂದುಗಡೆ ಕ್ಯಾಮೆರಾ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್,ಜಿಪಿಎಸ್
1400 MAh ಬ್ಯಾಟರಿ
ಇದನ್ನೂ ಓದಿ: ಹತ್ತು ಸಾವಿರದೊಳಗಿನ ಟಾಪ್ ಕ್ವಾಡ್ ಕೋರ್ ಪ್ರೊಸೆಸರ್ ಸ್ಮಾರ್ಟ್‌ಫೋನ್‌ಗಳು
Comments
Best Mobiles in India
Story first
published: Friday, January 17, 2014, 17:51 [IST]


Click it and Unblock the Notifications