ಅಗ್ಗದ ಬೆಲೆಗೆ ಡ್ಯೂಯಲ್ ಕ್ಯಾಮೆರಾ ಮೊಬೈಲ್

ಇದೀಗ ಐಬಾಲ್ ಕಂಪನಿ ಐಬಾಲ್ ಟಚ್ IPS 261 ಎಂಬ ನೂತನ ಡ್ಯೂಯಲ್ ಕ್ಯಾಮೆರಾ ಮೊಬೈಲನ್ನು ಪರಿಚಯಿಸಿದೆ. ಬಾರ್ ಫೋನ್ ವಿನ್ಯಾಸದಲ್ಲಿರುವ ಈ ಮೊಬೈಲ್ ನಲ್ಲಿ ಟಚ್ ಮತ್ತು ಟೈಪ್ ಎರಡೂ ಆಯ್ಕೆಯಿದೆ.
ಮೆಟಾಲಿಕ್ ಹೊದಿಕೆಯಿಂದ ಸುಂದರ ವಿನ್ಯಾಸ ಪಡೆದುಕೊಂಡಿರುವ ಈ ಮೊಬೈಲನ್ನು ನೋಡಿದೊಡನೆಯೇ ಕೊಂಡುಕೊಳ್ಳುವ ಮನಸ್ಸಾಗುವುದು ಗ್ಯಾರಂಟಿ.
ಕೇವಲ ವಿನ್ಯಾಸವೊಂದೇ ಅಲ್ಲ,, ಇದರಲ್ಲಿನ ಕೆಲವು ವಿಶೇಷತೆಗಳೂ ಸಹ ನಿಮ್ಮ ಮನಸ್ಸೆಳೆಯಲಿದೆ. ಈ ಐಬಾಲ್ ಮೊಬೈಲ್ GSM ಬೆಂಬಲಿತವಾಗಿದ್ದರೂ 3ಜಿ ಬೆಂಬಲಿಸುವುದಿಲ್ಲ.
ಐಬಾಲ್ ಟಚ್ IPS 261 ವಿಶೇಷತೆ:
* 138 ಗ್ರಾಂ ತೂಕ
* 2.6 ಇಂಚಿನ ಸ್ಕ್ರೀನ್
* ಟಚ್ ಸ್ಕ್ರೀನ್ ಮತ್ತು ಕೀಪ್ಯಾಡ್
* ಡ್ಯೂಯಲ್ ಕ್ಯಾಮೆರಾ ಸೌಲಭ್ಯ
* 2.0 ಮೆಗಾ ಪಿಕ್ಸಲ್ ಕ್ಯಾಮೆರಾ, ಫ್ರಂಟ್ ಕ್ಯಾಮೆರಾ
* 16 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ
* WAP/GPRS ಸೌಲಭ್ಯ
* ಬ್ಲೂಟೂಥ್, A2DP
* 3.5 ಎಂಎಂ ಆಡಿಯೋ ಜ್ಯಾಕ್
* ಜಾವಾ ಬೆಂಬಲಿತ
ಮನರಂಜನೆಗೆಂದು ಎಫ್ ಎಂ, ಮೀಡಿಯಾ ಪ್ಲೇಯರ್ ಲಭ್ಯವಿದ್ದು, Mp3 ಮತ್ತು wav ಮುಂತಾದ ಫಾರ್ಮೆಟ್ ಗಳನ್ನು ಮೊಬೈಲ್ ಬೆಂಬಲಿಸುತ್ತದೆ. ಇದರೊಂದಿಗೆ LED ಟಾರ್ಚ್ ಕೂಡ ನೀಡಲಾಗಿದೆ.
ಇಷ್ಟೆಲ್ಲಾ ಅವಕಾಶಗಳನ್ನು ಗ್ರಾಹಕರಿಗೆ ನೀಡುತ್ತಿರುವ ಕಂಪನಿ ಬೆಲೆಯ ವಿಷಯದಲ್ಲೂ ಸಂತಸ ನೀಡಲಿದೆ. ಈ ಐಬಾಲ್ ಐಪಿಎಸ್ 261 ಮೊಬೈಲ್ ಬೆಲೆ ಕೇವಲ 3,500 ರು ಎಂದು ತಿಳಿದುಬಂದಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications