ಐಡಿಯಾ ನೀಡಿದೆ 3ಜಿ ಬ್ಲೇಡ್ ಮೊಬೈಲ್

Posted By: Staff
ಐಡಿಯಾ ನೀಡಿದೆ 3ಜಿ ಬ್ಲೇಡ್ ಮೊಬೈಲ್

ಇದೀಗ ಎಲ್ಲೆಲ್ಲೂ ಸ್ಮಾರ್ಟ್ ಫೋನ್ ಗಳ ಅಬ್ಬರ. ಅದರಲ್ಲೂ 3ಜಿ ಸಂಪರ್ಕವಿದ್ದರೆ ಫೋನ್ ಗಳಿಗೆ ಬೇಡಿಕೆ ಹೆಚ್ಚು. ಆ ಬೇಡಿಕೆಯನ್ನು ಉದ್ದೇಶವಾಗಿಟ್ಟುಕೊಂಡು ಐಡಿಯಾ ಆಂಡ್ರಾಯ್ಡ್ ಫೋನನ್ನು ಹೊರತಂದಿದೆ. ಬ್ಲೇಡ್ ಎಂದು ಕರೆಯಲ್ಪಡುವ ಈ ಮೊಬೈಲ್ ಗೂಗಲ್ ನ ಆಂಡ್ರಾಯ್ಡ್ 2.2 ಫ್ರೋಯೊ ಆಪರೇಟಿಂಗ್ ಸಿಸ್ಟಮ್ ಮತ್ತು 600MHz ಪ್ರೊಸೆಸರೆ ಪಡೆದುಕೊಂಡಿದೆ.

ಐಡಿಯಾ ಬ್ಲೇಡ್ ಮೊಬೈಲ್ ವಿಶೇಷತೆ:

* 3.5 ಇಂಚಿನ ಡಿಸ್ಪ್ಲೇ

* ಟಚ್ ಸ್ಕ್ರೀನ್ ಡಿಸ್ಪ್ಲೇ, 480x800 ಪಿಕ್ಸಲ್ ರೆಸೊಲ್ಯೂಷನ್

* 3.2 ಮೆಗಾ ಪಿಕ್ಸಲ್ ಕ್ಯಾಮೆರಾ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್

* 150ಎಂಬಿ ಆಂತರಿಕ ಮೆಮೊರಿ ಸಾಮರ್ಥ್ಯ

* ಬ್ಲೂಟೂಥ್, USB ಪೋರ್ಟ್

* 3.5 ಎಂಎಂ ಆಡಿಯೋ ಜ್ಯಾಕ್

ಸಂಗೀತ ಪ್ರಿಯರಿಗೆಂದು ಮಲ್ಟಿ ಫಾರ್ಮೆಟ್ ವಿಡಿಯೋ ಮತ್ತು ಆಡಿಯೋ ಪ್ಲೇಯರನ್ನು ಒಳಗೊಂಡಿದೆ  ಮನರಂಜನೆಗೆಂದು ಸಾಮಾಜಿಕ ತಾಣಗಳ ಅಪ್ಲಿಕೇಶನನ್ನೂ ನೀಡಲಾಗಿದೆ. ಒಪೆರಾ ಮಿನಿ ಬ್ರೌಸರ್, ಆರ್ಕುಟ್, ಫೇಸ್ ಬುಕ್ ಟ್ವಿಟರ್, ಗೂಗಲ್ ಸರ್ಚ್, ಯೂಟ್ಯೂಬ್ ಮತ್ತು ಜಿ ಮೇಲ್ ಆಯ್ಕೆಗಳಿವೆ.

ಇಷ್ಟೆಲ್ಲಾ ಅವಕಾಶಗಳನ್ನು ನೀಡಲಿರುವ ಈ ಐಡಿಯಾ ಬ್ಲೇಡ್ ಮೊಬೈಲ್ ಬೆಲೆ 7,990 ರು ಎನ್ನಲಾಗಿದೆ. ಕಂಪನಿ ಮೊಬೈಲ್ ಗ್ರಾಹಕರಿಗೆಂದು ಆರಂಭಿಕ ರಿಯಾಯಿತಿ ನೀಡಲಿದೆ. 259 ರೂಗಳ ಸ್ಪೆಷಕ್ ಪ್ಯಾಕ್ ಖರೀದಿಸಿದರೆ 3,500 ರೂ ಬೆಲೆಯ ಡೇಟಾ ಸರ್ವೀಸನ್ನು ಉಚಿತವಾಗಿ ನೀಡಲಾಗುತ್ತೆ.

ಐಡಿಯಾ ಬ್ಲೇಡ್ ಮೊಬೈಲನ್ನು ಸ್ಮಾರ್ಟ್ ಫೋನ್ ಐಡಿಯಾ ID280 ಮೊಬೈಲ್ ಜೊತೆ ಪರಿಚಯಿಸಲಾಗಿದೆ. ಇದರ ಬೆಲೆ 5,850 ರು ಎಂದು ಕಂಪನಿ ತಿಳಿಸಿದೆ. ಅತ್ಯಾಕರ್ಷಕ ಬೆಲೆ ಮತ್ತು ರಿಯಾಯಿತಿ ಹೊಂದಿರುವ ಈ ಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚು ಹೆಸರು ಮಾಡುವ ನಿರೀಕ್ಷೆಯಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot