ಟೆಲಿಕಾಂ ಮಾರುಕಟ್ಟೆಯೇ ತಿರುಗಿ ನೋಡುವ ಆಫರ್: ಒನ್‌ಪ್ಲಸ್ 6 ಖರೀದಿಸುವವರಿಗೆ ಮಾತ್ರ..!
ಮೇ.17 ರಂದು ಭಾರತೀಯ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಲಾಂಚ್ ಆಗಲಿದ್ದು, ಇದಕ್ಕೂ ಮುನ್ನವೇ ಐಡಿಯಾ ಒನ್‌ಪ್ಲಸ್ 6 ಬಳಕೆದಾರರಿಗೆ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಕಡಿಮೆ ಬೆಲೆಗೆ ಅತೀ ಹೆಚ್ಚಿನ ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಈಗಾಗಲೇ ಹಲವು ಟೆಲಿಕಾಂ ಕಂಪನಿಗಳು ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ಆಫರ್ ಗಳನ್ನು ನೀಡುತ್ತಿದ್ದು, ಇದೇ ಮಾದರಿಯಲ್ಲಿ ಐಡಿಯಾ ಸಹ ಆಫರ್ ಲಾಂಚ್ ಮಾಡಿದೆ ಎನ್ನಲಾಗಿದೆ.

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಕೊಳ್ಳುವರಿಗೆ ರೂ.2000 ಕ್ಯಾಷ್ ಬ್ಯಾಕ್ ನೀಡಲಿದ್ದು, ಇದರಿಂದಾಗಿ ಬೇರೆ ಟೆಲಿಕಾಂ ಆಪರೇಟರ್ ಗಳನ್ನು ಆಯ್ಕೆ ಮಾಡಿಕೊಳ್ಳುವುದು ತಪ್ಪಲಿದೆ. ಇದರಿಂದಾಗಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಬಳಕೆದಾರರು ಹೆಚ್ಚಿನ ಲಾಭವನ್ನು ಸಹ ಮಾಡಿಕೊಳ್ಳಬಹುದಾಗಿದೆ. ಹೆಚ್ಚುವರಿ ಡೇಟಾ-ಉಚಿತ ಕರೆ ಸೇವೆಯೂ ಇಲ್ಲಿ ದೊರೆಯಲಿದೆ.

ರೂ.2000 ಕ್ಯಾಷ್ ಬ್ಯಾಕ್:
ಈಗಾಗಲೇ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ಐಡಿಯಾ ರೂ.2000 ಕ್ಯಾಷ್ ಬ್ಯಾನ್ ನೀಡಲಿದೆ. ಸದ್ಯ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಬೆಲೆಯ ಬಗ್ಗೆ ಅಧಿಕೃತವಾಗಿ ಇನ್ನು ಘೋಷಣೆಯಾಗಿಲ್ಲ.

ರೂ.100 ಡಿಸ್ಕೌಂಟ್:
ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಬಳಕೆದಾರರಿಗೆ ರೂ.2000 ಡಿಸ್ಕೌಂಟ್ 20 ಬಿಲಿಂಗ್ ಸೈಕಲ್ ನಲ್ಲಿ ದೊರೆಯಲಿದ್ದು, ಪ್ರತಿ ಬಿಲಿಂಗ್‌ನಲ್ಲಿ ರೂ.100 ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ.

ಪೋಸ್ಟ್ ಪೇಯ್ಡ್ ಬಳಕೆದಾರರಿಗೆ:
ಇದಲ್ಲದೇ ಈ ಆಫರ್ ಫೋಸ್ಟ್ ಪೇಯ್ಡ್ ಬಳಕೆದಾರರಿಗೆ ದೊರೆಯುತ್ತಿದ್ದು, ರೂ.499 ಪ್ಲಾನ್ ಕೇವಲ ರೂ.399ಕ್ಕೆ ಲಭ್ಯವಿರಲಿದೆ. ಅಲ್ಲದೇ ಪ್ರತಿ ತಿಂಗಳು 10GB ಡೇಟಾವನ್ನು ನೀಡಬಹುದಾಗಿದೆ. ಇದು ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.

50GB ಡೇಟಾ:
ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಬಳಕೆದಾರರಿಗೆ ರೂ.399ಕ್ಕೆ ಐಡಿಯಾ 50GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದಲ್ಲಿ ಉಚಿತ ಕರೆ ಮಾಡುವ ಅವಕಾಶವೂ ದೊರೆಯಲಿದೆ ಎನ್ನಲಾಗಿದೆ. ಅಲ್ಲದೇ ಉಚಿತ SMS ಆಯ್ಕೆಯೂ ಇರಲಿದೆ.


VoLTE ಸಪೋರ್ಟ್:
ಇದಲ್ಲದೇ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಐಡಿಯಾ ಲಾಂಚ್ ಮಾಡಿರುವ VoLTE ಸೇವೆಗೆ ಸಫೋರ್ಟ್ ಮಾಡಲಿದ್ದು, ದೇಶದ ಪ್ರಮುಖ ನಗರಗಳಲ್ಲಿ ಐಡಿಯಾ VoLTE ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.


Click it and Unblock the Notifications








