ಸ್ಮಾರ್ಟ್ ಮೊಬೈಲ್ ಬೇಕೆಂದರೆ ಐಡಿಯಾ ಉಪಯೋಗಿಸಿ

ಈ ತಿಂಗಳ ಮೊದಲಲ್ಲೇ ಐಡಿಯಾ ಸೆಲ್ಯುಲಾರ್ ಲಿಮಿಟೆಡ್ ಮೊಬೈಲ್ ಮಾರುಕಟ್ಟೆಗೆ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಲಿರುವುದೆಂದು ಸುದ್ದಿ ಹಬ್ಬಿದ್ದು ಎಲ್ಲರಿಗೂ ಗೊತ್ತಿದೆ. ಇದೀಗ ಆ ಸುದ್ದಿ ನಿಜಗೊಳ್ಳುವ ಕಾಲ ಬಂದಿದೆ. ಐಡಿಯಾ ಕಂಪನಿ ಆಂಡ್ರಾಯ್ಡ್ ಬೆಂಬಲಿತವಾಗಿರುವ ಸ್ಮಾರ್ಟ್ ಫೋನೊಂದನ್ನು ಬಿಡುಗಡೆ ಮಾಡಿದೆ.
ಐಡಿಯಾ ID-280 ಎಂಬ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ವ್ಯಾಪಾರವಾಗುವ ನಿರೀಕ್ಷೆಯಿದೆ. ತಮ್ಮ 3ಜಿ ವ್ಯವಹಾರವನ್ನು ವಿಸ್ತರಿಸುವ ಸಲುವಾಗಿ ಕೈಗೊಂಡ ಯೋಜನೆ ಈ ಸ್ಮಾರ್ಟ್ ಫೋನ್ ಆದ್ದರಿಮದ ಮೊಬೈಲಿನ ಜೊತೆ 3ಜಿಯ ಇನ್ನಿತರ ಸೌಲಭ್ಯವನ್ನೂ ಕಂಪನಿಯಿಂದ ನಿರೀಕ್ಷಿಸಬಹುದಾಗಿದೆ.
ಆಂಡ್ರಾಯ್ಡ್ 2.2 ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿರುವ ಈ ಐಡಿಯಾ ID-280 ಮೊಬೈಲ್ 528 MHz ವೇಗದ ಪ್ರೊಸೆಸರ್ ಹೊಂದಿದೆ.
ಐಡಿಯಾ ID-280 ಮೊಬೈಲ್ ವಿಶೇಷತೆ:
* 2.8 ಇಂಚಿನ ಟಚ್ ಸ್ಕ್ರೀನ್
* 240 x 320 ರೆಸೊಲ್ಯೂಷನ್ ಡಿಸ್ಪ್ಲೇ
* 256 RAM ಸಾಮರ್ಥ್ಯ
* 3.2 ಮೆಗಾ ಪಿಕ್ಸಲ್ ಸಾಮರ್ಥ್ಯ
* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ
* 3.5 ಎಂಎಂ ಆಡಿಯೋ ಜ್ಯಾಕ್
* USB ಪೋರ್ಟ್ಮ, ಬ್ಲೂಟೂಥ್
ಈ ಸೌಲಭ್ಯಗಳೊಂದಿಗೆ ಮಲ್ಟಿಮೀಡಿಯಾ, ಸಾಮಾಜಿಕ ತಾಣಗಳ ಆಯ್ಕೆಯನ್ನೂ ನೀಡಲಾಗಿದೆ. ಐಡಿಯಾ ID-280 ಮೊಬೈಲ್ 1200 mAh ಬ್ಯಾಟರಿ ಹೊಂದಿದ್ದು, ಒಳ್ಳೆಯ ಬ್ಯಾಟರಿ ಬಾಳಿಕೆ ನೀಡಲಿರುವುದಾಗಿ ಕಂಪನಿ ತಿಳಿಸಿದೆ.
ಈ ವಿಭಿನ್ನವಾದ ಸ್ಮಾರ್ಟ್ ಫೋನ್ ಬೆಲೆ ಭಾರತೀಯರಿಗೆ ಕೇವಲ 5,800ರು ಗೆ ದೊರೆಯುವುದಾಗಿ ಕಂಪನಿಯ ಅಧೀಕೃತ ಮೂಲಗಳು ತಿಳಿಸಿದೆ. ಐಡಿಯಾ ಇನ್ನೂ ಅನೇಕ ವಿಶೇಷ ಆಯ್ಕೆ ಮತ್ತು ಅವಕಾಶಗಳನ್ನು ಹೊಂದಿರುವ ಇನ್ನೊಂದು ಸ್ಮಾರ್ಟ್ ಫೋನನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಿದೆ ಎಂದು ಕಂಪನಿ ತಿಳಿಸಿದೆ.


Click it and Unblock the Notifications