ಸ್ವಾತಂತ್ರ್ಯೋತ್ಸವದ ಗಿಫ್ಟ್! ನಾಳೆ Honor Magic 6 Pro ಸೇಲ್; ಭರ್ಜರಿ ಆಫರ್ ಖಚಿತ!
ಸ್ವಾತಂತ್ರ್ಯ ದಿನಾಚರಣೆಗೆ ಒಂದೇ ದಿನ ಬಾಕಿ ಇದೆ. ಮೊಬೈಲ್ ಪ್ರಿಯರಿಗೆ ಹಾನರ್ ಕಂಪನಿಯು ಸಿಹಿ ಸುದ್ದಿ ಹೊತ್ತು ತಂದಿದೆ. ಹೌದು, ಕಂಪನಿಯು ಇತ್ತೀಚೆಗೆ ಹಾನರ್ ಮ್ಯಾಜಿಕ್ 6 ಪ್ರೊ (Honor Magic 6 Pro) ಸ್ಮಾರ್ಟ್‌ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನನ್ನು ಕೇವಲ 12GB + 512GB ಸ್ಟೋರೇಜ್ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಿದೆ. ಅಂದಹಾಗೆ ಈ ಫೋನ್, ನಾಳೆ (ಆಗಸ್ಟ್ 15) ಮೊದಲ ಮಾರಾಟಕ್ಕೆ ಸಿದ್ಧವಾಗಿದೆ. ಈ ಹೊಸ ಹಾನರ್ ಫೋನಿನ ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಲು ಮುಂದೆ ಓದಿ.
ಪ್ರಸಿದ್ಧ ಸ್ಮಾರ್ಟ್‌ಫೋನ್ ದೈತ್ಯ ಹಾನರ್ ನಿರೀಕ್ಷೆಯಂತೆಯೇ, ಹಾನರ್ ಮ್ಯಾಜಿಕ್ 6 ಪ್ರೊ (Honor Magic 6 Pro) ಅನ್ನು ಬಿಡುಗಡೆ ಮಾಡಿದೆ. ಈ ಫೋನ್ 6.8 ಇಂಚಿನ ಕ್ವಾಡ್ ಕರ್ವ್ ಡಿಸ್ಲ್ಪೇಯನ್ನು ಹೊಂದಿದೆ. ಸ್ನಾಪ್‌ಡ್ರಾಗನ್ 8 Gen 3 ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಇದು ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ 50MP ಮುಖ್ಯ ಕ್ಯಾಮೆರಾ ಹೊಂದಿದೆ. 5,600mAh ಬ್ಯಾಟರಿಯೊಂದಿಗೆ 80W ವೈರ್ಡ್ ಮತ್ತು 66W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಇದೆ.

ಹಾನರ್ ಮ್ಯಾಜಿಕ್ 6 ಪ್ರೊ ಬೆಲೆ ಎಷ್ಟು?
ಕಂಪನಿಯು ಹಾನರ್ ಮ್ಯಾಜಿಕ್ 6 ಪ್ರೊ ಅನ್ನು ಕೇವಲ 12GB+512GB ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ 89,999 ರೂ. ಆಗಿದೆ. ಇದು ಎಪಿಕ್ ಗ್ರೀನ್ ಮತ್ತು ಕಪ್ಪು ಬಣ್ಣಗಳಲ್ಲಿ ಬರುತ್ತದೆ. ಈ ಫೋನ್ ಎಕ್ಸ್‌ಪ್ಲೋರ್ HONOR, ಅಮೇಜಾನ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಆಗಸ್ಟ್ 15 ರಂದು ಮಾರಾಟವಾಗಲಿದೆ. ಚೀನಾದಲ್ಲಿ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು. 16GB RAM+512GB ಸ್ಟೋರೇಜ್ ಬೆಲೆ 68,000 ರೂ. ಇದೆ.
ಹಾನರ್ ಮ್ಯಾಜಿಕ್ 6 ಪ್ರೊ ಫೀಚರ್ಸ್‌ಗಳು
ಹಾನರ್ ಮ್ಯಾಜಿಕ್ 6 ಪ್ರೊ ಸ್ಮಾರ್ಟ್‌ಫೋನ್ 6.8 ಇಂಚಿನ FHD+ 120Hz LTPO (1-120Hz) ಕ್ವಾಡ್-ಕರ್ವ್ಡ್ OLED ಡಿಸ್ಲ್ಪೇಯನ್ನು ಹೊಂದಿದೆ. ಇದು 1280 x 2800 ಪಿಕ್ಸೆಲ್ ರೆಸಲ್ಯೂಶನ್, 5,000nits ಗರಿಷ್ಠ ಬ್ರಿಟ್‌ನೆಸ್ ಮತ್ತು ಡಾಲ್ಟಿ ವಿಷನ್ ಬೆಂಬಲದೊಂದಿಗೆ ಬರಲಿದೆ. ಕಂಪನಿಯು ಈ ಫೋನಿನಲ್ಲಿ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 3 4nm ಪ್ರೊಸೆಸರ್ ಅಳವಡಿಸಿದೆ. ಇದು Android 14 ಆಧಾರಿತ Magic UI 8.0ನಲ್ಲಿ ರನ್ ಆಗಲಿದೆ.
ಹಾನರ್ ಮ್ಯಾಜಿಕ್ 6 ಪ್ರೊ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ. ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ, 50MP ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 180MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 50MP ಫ್ರಂಟ್ ಕ್ಯಾಮೆರಾ ಇದೆ. ಇದು 3D ಫೇಸ್ ಅನ್ಲಾಕ್ ಬೆಂಬಲಿಸುತ್ತದೆ. 4K ವಿಡಿಯೋ ರೆಕಾರ್ಡಿಂಗ್ ಕೂಡ ಸಪೋರ್ಟ್ ಮಾಡಲಿದೆ.
5,600mAh ಬ್ಯಾಟರಿ, 80W ವೈರ್ಡ್ ಚಾರ್ಜಿಂಗ್
ಹಾನರ್ ಮ್ಯಾಜಿಕ್ 6 ಪ್ರೊ ಫೋನ್ 5,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. 80W ವೈರ್ಡ್ ಮತ್ತು 66W ವೈರ್‌ಲೆಸ್ ಹಾನರ್ ಸೂಪರ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಕೇವಲ 40 ನಿಮಿಷಗಳಲ್ಲಿ ಈ ಫೋನ್ 100% ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ. ಇದು IP68 ಧೂಳು ಮತ್ತು ನೀರಿನ ಪ್ರತಿರೋಧವನ್ನು ಪಡೆದಿದೆ.
ಈ ಹಾನರ್ ಮ್ಯಾಜಿಕ್ 6 ಪ್ರೊ ಫೋನಿನ ಇತರೆ ಫೀಚರ್ಸ್‌ಗಳನ್ನು ನೋಡುವುದಾದರೆ, ಇದು 162.5 x 75.8 x 8.9mm ಅಳತೆ ಮತ್ತು 229 ಗ್ರಾಂ ತೂಕ ಹೊಂದಿದೆ. DTS: X ಅಲ್ಟ್ರಾ ಸೌಂಡ್ ಎಫೆಕ್ಟ್‌ಗಳೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, 5G SA/NSA, ಡ್ಯುಯಲ್ 4G VoLTE, Wi-Fi 7, ಬ್ಲೂಟೂತ್ 5.3, USB ಟೈಪ್-C, NFC ನಂತಹ ಸೌಲಭ್ಯ ಹೊಂದಿದೆ.


Click it and Unblock the Notifications








