Home
ಮೊಬೈಲ್

Infinix GT 30: ಭಾರತದಲ್ಲಿ ಹೊಸ ಗೇಮಿಂಗ್ ಫೋನ್ ಬಿಡುಗಡೆಗೆ ಸಜ್ಜು!

ಇನ್‌ಫಿನಿಕ್ಸ್ ಕಂಪನಿಯು ತನ್ನ ಜನಪ್ರಿಯ GT ಸ್ಮಾರ್ಟ್‌ಫೋನ್ ಸರಣಿಯನ್ನು ಭಾರತದಲ್ಲಿ ವಿಸ್ತರಿಸಲು ಸಜ್ಜಾಗಿದೆ. ಇತ್ತೀಚೆಗೆ, ಕಂಪನಿಯ ವೆಬ್‌ಸೈಟ್‌ನಲ್ಲಿ Infinix GT 30 ಫೋನ್ ಕಾಣಿಸಿಕೊಂಡಿದ್ದು, ಇದು ಶೀಘ್ರದಲ್ಲೇ ದೇಶದಲ್ಲಿ ಬಿಡುಗಡೆಯಾಗುವುದನ್ನು ಖಚಿತಪಡಿಸಿದೆ. ಈ ಹೊಸ ಫೋನ್ ಕಳೆದ ಜೂನ್‌ನಲ್ಲಿ ಬಿಡುಗಡೆಯಾದ Infinix GT 30 Pro 5G ಫೋನ್‌ಗೆ ಪೂರಕವಾಗಿರಲಿದ್ದು, ಗೇಮಿಂಗ್ ಪ್ರಿಯರಿಗೆ ಹೊಸ ಆಯ್ಕೆಯನ್ನು ನೀಡುವ ನಿರೀಕ್ಷೆಯಿದೆ.

"ದಿ ಗೇಮ್ ಸ್ಟಾರ್ಟ್ಸ್ ವಿತ್ ಯು" ಎಂಬ ಟ್ಯಾಗ್ ಲೈನ್‌ನೊಂದಿಗೆ ಈ ಹೊಸ Infinix GT 30 ಫೋನ್ ಪ್ರಚಾರಗೊಳ್ಳುತ್ತಿದ್ದು, ಇದು ಗೇಮಿಂಗ್ ಕೇಂದ್ರಿತ ವೈಶಿಷ್ಟ್ಯಗಳನ್ನು ಹೊಂದಿರಬಹುದು ಎಂದು ಸೂಚಿಸುತ್ತದೆ. ಇದೀಗ ಬಹಿರಂಗವಾಗಿರುವ ಚಿತ್ರಗಳಲ್ಲಿ Infinix GT 30 ಫೋನ್‌ನ ವಿನ್ಯಾಸವು ಅದರ ಪ್ರೊ ಆವೃತ್ತಿಯಂತೆಯೇ ಇರಲಿದ್ದು, ಹಿಂಭಾಗದಲ್ಲಿ ಆಕರ್ಷಕ ಎಲ್ಇಡಿ ಲೈಟ್ ಸ್ಟ್ರಿಪ್‌ಗಳನ್ನು ಒಳಗೊಂಡಿರುತ್ತದೆ. ಇದು ಫೋನ್‌ಗೆ ಗೇಮಿಂಗ್ ಸ್ಮಾರ್ಟ್‌ಫೋನ್‌ನ ನೋಟವನ್ನು ನೀಡುತ್ತದೆ. ಫೋನ್‌ನ ಮೇಲ್ಭಾಗದ ಬಲ ಮೂಲೆಯಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇರಲಿದೆ.

ವರದಿಗಳ ಪ್ರಕಾರ, ಈ ಹೊಸ ಫೋನ್ ಹೊಸ ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಟಿಪ್‌ಸ್ಟರ್ ಸುಧಾಂಶು ಅಂಬೋರ್ ಕೂಡ ಈ ಫೋನ್ ಅನ್ನು ಹಸಿರು ಬಣ್ಣದ ಆಯ್ಕೆಯಲ್ಲಿ ತೋರಿಸುವ ಚಿತ್ರವನ್ನು ಎಕ್ಸ್ (X) ನಲ್ಲಿ ಹಂಚಿಕೊಂಡಿದ್ದಾರೆ, ಇದು ಬಣ್ಣದ ಆಯ್ಕೆಗಳ ಬಗ್ಗೆ ಸುಳಿವು ನೀಡಿದೆ.Infinix GT 30 ಕುರಿತಾದ ವಿವರಗಳು ಇನ್ನೂ ಬಹಿರಂಗವಾಗಿಲ್ಲವಾದರೂ, ಇದು GT 30 Pro ಮಾದರಿಯ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ.

Infinix GT 30: ಭಾರತದಲ್ಲಿ ಹೊಸ ಗೇಮಿಂಗ್ ಫೋನ್ ಬಿಡುಗಡೆಗೆ ಸಜ್ಜು!

ಮುಂಬರುವ Infinix GT 30 ಫೋನ್ ಹೆಚ್ಚಿನ ರಿಫ್ರೆಶ್ ರೇಟ್ ಡಿಸ್ಪ್ಲೇ ಮತ್ತು ಗೇಮಿಂಗ್ ಟ್ರಿಗ್ಗರ್‌ಗಳಂತಹ ಗೇಮಿಂಗ್‌ಗೆ ಸಹಾಯಕವಾಗುವ ಫೀಚರ್‌ಗಳನ್ನು ಇದು ಒಳಗೊಂಡಿರಬಹುದು. ಆದರೆ, ಬೆಲೆಯನ್ನು ಕಡಿಮೆ ಮಾಡಲು ಕೆಲವು ಸ್ಪೆಸಿಫಿಕೇಶನ್‌ಗಳಲ್ಲಿ ಬದಲಾವಣೆಗಳು ಇರಬಹುದು. ಇನ್‌ಫಿನಿಕ್ಸ್ ಯಾವಾಗಲೂ ಉತ್ತಮ ವೈಶಿಷ್ಟ್ಯಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡಲು ಪ್ರಯತ್ನಿಸುತ್ತದೆ, ಆದ್ದರಿಂದ ಈ ಹೊಸ ಫೋನ್ ಕೂಡ ಗ್ರಾಹಕರ ಗಮನ ಸೆಳೆಯಬಹುದು.

ಗಮನಿಸುವುದಾದರೆ, ಪ್ರೊ ಮಾದರಿಯಾದ Infinix GT 30 Pro ಫೋನ್ ಜೂನ್‌ನಲ್ಲಿ ಮಧ್ಯಮ ಬೆಲೆ ವಿಭಾಗದಲ್ಲಿ ಬಿಡುಗಡೆಯಾಗಿತ್ತು ಮತ್ತು ಹಿಂಭಾಗದಲ್ಲಿ ಕಸ್ಟಮೈಸ್ ಮಾಡಬಹುದಾದ ಎಲ್‌ಇಡಿ ಲೈಟ್ ಪ್ಯಾನೆಲ್‌ಗಳ ಜೊತೆಗೆ ತನ್ನ ಸೈಬರ್ ಮೆಚಾ 2.0 ವಿನ್ಯಾಸದಿಂದ ಗಮನ ಸೆಳೆದಿತ್ತು. ಈ ಫೋನ್ 6.78-ಇಂಚಿನ 1.5K AMOLED ಡಿಸ್‌ಪ್ಲೇಯನ್ನು ಹೊಂದಿದ್ದು, 144Hz ರಿಫ್ರೆಶ್ ರೇಟ್ ಮತ್ತು 4500 nits ಪೀಕ್ ಬ್ರೈಟ್‌ನೆಸ್ ನೀಡುತ್ತದೆ. ಅಲ್ಲದೆ, ಡಿಸ್‌ಪ್ಲೇಯನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ನಿಂದ ರಕ್ಷಿಸಲಾಗಿದೆ.

ಕಾರ್ಯಕ್ಷಮತೆಗಾಗಿ, ಈ ಫೋನ್ Mediatek Dimensity 8350 Ultimate ಚಿಪ್‌ಸೆಟ್‌ಮತ್ತು Mali-G615 MC6 GPU, 12GB LPDDR5X RAM ಹಾಗೂ 256GB UFS 4.0 ಸ್ಟೋರೇಜ್ ಅನ್ನು ಒಳಗೊಂಡಿದೆ. ಕ್ಯಾಮೆರಾದ ವಿಷಯದಲ್ಲಿ, ನ್ 108MP ಮುಖ್ಯ ಸೆನ್ಸರ್ ಮತ್ತು 8MP ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ, ಜೊತೆಗೆ ಮುಂಭಾಗದಲ್ಲಿ 13MP ಸೆಲ್ಫಿ ಕ್ಯಾಮೆರಾ ಇದೆ. 5500mAh ಬ್ಯಾಟರಿಯು 45W ವೈರ್ಡ್ ಮತ್ತು 30W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Infinix GT 30 ಫೋನ್ ಇದೇ ರೀತಿಯ ಆದರೆ ಕೆಲವು ಮಾರ್ಪಡಿಸಿದ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬರಬಹುದು. 8GB RAM ಮತ್ತು 256GB ಸ್ಟೋರೇಜ್ ಹೊಂದಿರುವ Infinix GT 30 Pro ಆವೃತ್ತಿಯ ಬೆಲೆ ₹24,999 ಮತ್ತು 12GB RAM ಮಾದರಿಯ ಬೆಲೆ ₹26,999 ಆಗಿದೆ. Infinix GT 30 ಇದರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ, ಇದು ಹೆಚ್ಚು ಗ್ರಾಹಕರನ್ನು ಆಕರ್ಷಿಸಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Promoted with the slogan "The Game Starts with You," the new Infinix GT 30 phone hints at potential gaming-oriented features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+