Home
ಮೊಬೈಲ್

ಗೇಮಿಂಗ್-ಕೇಂದ್ರಿತ Infinix GT 30 Pro 5G ಸ್ಮಾರ್ಟ್‌ಫೋನ್ ಬಿಡುಗಡೆ!

ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳ ತಯಾರಿಕೆಗೆ ಹೆಸರಾಂತ ಬ್ರ್ಯಾಂಡ್ Infinix ಇತ್ತೀಚೆಗೆ ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ತನ್ನ ಗೇಮಿಂಗ್-ಕೇಂದ್ರಿತ Infinix GT 30 Pro 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸಿದೆ. ಕಳೆದ ವರ್ಷದ ಅಂತ್ಯದಲ್ಲಿ ಭಾರತದಲ್ಲಿ ಬಿಡುಗಡೆಯಾಗಿದ್ದ Infinix GT 20 Pro 5G ಸ್ಮಾರ್ಟ್‌ಫೋನಿನ ಉತ್ತರಾಧಿಕಾರಿಯಾಗಿ ಈ ಹೊಸ Infinix GT 30 Pro 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ಗೇಮಿಂಗ್ ಅನುಭವವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿರುವ ಇದು, ಶೋಲ್ಡರ್ ಟ್ರಿಗ್ಗರ್‌ಗಳು, XBoost ಗೇಮಿಂಗ್ ಎಂಜಿನ್ ಮತ್ತು AI-ಬೆಂಬಲಿತ VC ಕೂಲಿಂಗ್ ಸಿಸ್ಟಮ್‌ಗಳಂತಹ ವೈಶಿಷ್ಟ್ಯಗಳ ಜೊತೆಗೆ, 108-ಮೆಗಾಪಿಕ್ಸೆಲ್ ಕ್ಯಾಮೆರಾ, MediaTek Dimensity 8350 Ultimate SoC ಪ್ರೊಸೆಸರ್ ಮತ್ತು 5,500mAh ಬ್ಯಾಟರಿಯಂತಹ ಪ್ರಮುಖ ವೈಶಿಷ್ಟ್ಯ್ಗಳನ್ನು ಒಳಗೊಂಡಿದೆ. ಹಾಗಾದರೆ, ಹೊಸ Infinix GT 30 Pro 5G ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

Infinix GT 30 Pro 5G ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು,
ಇದೀಗ ಬಿಡುಗಡೆಯಾಗಿರುವ ಹೊಸ Infinix GT 30 Pro 5G ಸ್ಮಾರ್ಟ್‌ಫೋನ್ 6.78-ಇಂಚಿನ 1.5K AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 144Hz ವರೆಗಿನ ರಿಫ್ರೆಶ್ ದರ, 2,160Hz ಇನ್‌ಸ್ಟಂಟ್ ಟಚ್ ಸ್ಯಾಂಪ್ಲಿಂಗ್ ದರ ಮತ್ತು 2,304Hz PWM ಡಿಮ್ಮಿಂಗ್ ದರವನ್ನು ಒದಗಿಸುತ್ತದೆ. ಗರಿಷ್ಠ 1,100 nits ಹೊಳಪಿನೊಂದಿಗೆ, ಡಿಸ್ಪ್ಲೇ ಅತ್ಯುತ್ತಮ ವೀಕ್ಷಣಾ ಅನುಭವವನ್ನು ನೀಡುತ್ತದೆ. TÜV ರೈನ್‌ಲ್ಯಾಂಡ್ ಕಡಿಮೆ ನೀಲಿ ಬೆಳಕು ಮತ್ತು ಫ್ಲಿಕರ್-ಮುಕ್ತ ಪ್ರಮಾಣೀಕರಣ, ಹಾಗೆಯೇ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯೊಂದಿಗೆ, ಇದು ಕಣ್ಣಿನ ಆಯಾಸವನ್ನು ಕಡಿಮೆ ಮಾಡಿ ಉತ್ತಮ ಬಾಳಿಕೆಯನ್ನು ಒದಗಿಸುತ್ತದೆ. ಪ್ರೊಸೆಸರ್ ವಿಭಾಗದಲ್ಲಿ, ಈ ಸ್ಮಾರ್ಟ್‌ಫೋನ್ 4nm ಆಕ್ಟಾ-ಕೋರ್ MediaTek Dimensity 8350 Ultimate SoC ಪ್ರೊಸೆಸರ್‌ನೊಂದಿಗೆ 12GB ವರೆಗಿನ LPDDR5X RAM ಮತ್ತು 512GB ವರೆಗಿನ UFS 3.1 ಆನ್‌ಬೋರ್ಡ್ ಸಂಗ್ರಹಣೆಯನ್ನು ಹೊಂದಿದೆ. ಇದು 12GB ವರೆಗೆ ವರ್ಚುವಲ್ RAM ವಿಸ್ತರಣೆಯನ್ನು ಬೆಂಬಲಿಸುತ್ತದೆ. Android 15-ಆಧಾರಿತ XOS 15 ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್, Folax ಮತ್ತು DeepSeek R1 ನಿಂದ ಬೆಂಬಲಿತವಾದ Infinix AI ಸೂಟ್‌ನೊಂದಿಗೆ ಬರುತ್ತದೆ.

ಗೇಮಿಂಗ್-ಕೇಂದ್ರಿತ Infinix GT 30 Pro 5G ಸ್ಮಾರ್ಟ್‌ಫೋನ್ ಬಿಡುಗಡೆ!

ಗೇಮಿಂಗ್ ಅನುಭವವನ್ನು ಉತ್ತಮಗೊಳಿಸಲು, Infinix GT 30 Pro 5G ಸ್ಮಾರ್ಟ್‌ಫೋನಿನಲ್ಲಿ Infinix ನ XBoost ಗೇಮಿಂಗ್ ಎಂಜಿನ್ ಮತ್ತು AI-ಆಧಾರಿತ VC ಕೂಲಿಂಗ್ ವ್ಯವಸ್ಥೆ ಅಳವಡಿಸಲಾಗಿದೆ, ಇದು ಗೇಮಿಂಗ್ ಸಮಯದಲ್ಲಿ ಉತ್ತಮ ಶಾಖ ನಿರ್ವಹಣೆಯನ್ನು ಖಾತ್ರಿಪಡಿಸುತ್ತದೆ. ಇದಲ್ಲದೆ, ಈ ಫೋನಿನಲ್ಲಿ ಗೇಮಿಂಗ್ ಶೋಲ್ಡರ್ ಬಟನ್‌ಗಳು ಮತ್ತು x-ಆಕ್ಸಿಸ್ ಲೀನಿಯರ್ ಮೋಟಾರ್‌ಗಳಿವೆ, ಇದು PUBG ಮೊಬೈಲ್ ಮತ್ತು MLBB ಮುಂತಾದ ಆಟಗಳಿಗೆ 120fps ಬೆಂಬಲವನ್ನು ಒದಗಿಸುತ್ತದೆ. ಕ್ಯಾಮೆರಾ ವಿಭಾಗದಲ್ಲಿ, Infinix GT 30 Pro 5G 108-ಮೆಗಾಪಿಕ್ಸೆಲ್ ಪ್ರಾಥಮಿಕ ಹಿಂಭಾಗದ ಸಂವೇದಕ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಅನ್ನು ಒಳಗೊಂಡಿದೆ. ಸೆಲ್ಫಿಗಳಿಗಾಗಿ 13 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ನೀಡಲಾಗಿದೆ. 5,500mAh ಬ್ಯಾಟರಿಯು 45W ವೈರ್ಡ್ ಮತ್ತು 30W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದ್ದು, 10W ವೈರ್ಡ್ ಮತ್ತು 5W ವೈರ್‌ಲೆಸ್ ರಿವರ್ಸ್ ಚಾರ್ಜಿಂಗ್ ಸಾಮರ್ಥ್ಯವನ್ನೂ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, WI-FI 6, ಬ್ಲೂಟೂತ್ 5.4, NFC, NavIC ಮತ್ತು GPS, USB ಟೈಪ್-C ಪೋರ್ಟ್ ಸೇರಿವೆ. ಈ ಹ್ಯಾಂಡ್‌ಸೆಟ್ IR ಸಂವೇದಕವನ್ನು ಹೊಂದಿದ್ದು, 7.9mm ದಪ್ಪ ಮತ್ತು 190g ತೂಕದೊಂದಿಗೆ ಹಗುರ ಮತ್ತು ಬಳಸಲು ಸುಲಭವಾಗಿದೆ.

Infinix GT 30 Pro 5G ಸ್ಮಾರ್ಟ್‌ಫೋನನ್ ಬೆಲೆ ಮತ್ತು ಲಭ್ಯತೆ
ಇದೀಗ ಆಯ್ದ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ Infinix GT 30 Pro 5G ಸ್ಮಾರ್ಟ್‌ಫೋನ್ ಮೊದಲಿಗೆ ಮಲೇಷ್ಯಾದಲ್ಲಿ ಮಾರಾಟಕ್ಕೆ ಲಭ್ಯವಾಗುತ್ತಿದೆ. 12GB+256GB ಮಾದರಿಯ ಬೆಲೆ MYR 1,299 ರಿಂದ ಪ್ರಾರಂಭವಾಗುತ್ತದೆ, ಮತ್ತು 12GB+512GB ಮಾದರಿಯ ಬೆಲೆ MYR 1,499. ಈ ಸ್ಮಾರ್ಟ್‌ಫೋನ್ ಬ್ಲೇಡ್ ವೈಟ್, ಡಾರ್ಕ್ ಫ್ಲೇರ್ ಮತ್ತು ಶ್ಯಾಡೋ ಆಶ್ ಬಣ್ಣಗಳಲ್ಲಿ ಲಭ್ಯವಿದೆ. ಮಲೇಷ್ಯಾದಲ್ಲಿ ಆಯ್ದ ಆನ್‌ಲೈನ್ ಚಿಲ್ಲರೆ ಇ-ಸ್ಟೋರ್‌ಗಳಲ್ಲಿ ಈ ಫೋನನ್ನು ಖರೀದಿಸಬಹುದು. "ಗೇಮಿಂಗ್ ಮಾಸ್ಟರ್ ಆವೃತ್ತಿ" ಎಂಬ ವಿಶೇಷ ಪ್ಯಾಕೇಜ್‌ನಲ್ಲಿ ಮ್ಯಾಗ್‌ಚಾರ್ಜ್ ಕೂಲರ್ ಮತ್ತು ಮ್ಯಾಗ್‌ಕೇಸ್ ಕೂಡ ಸೇರಿಸಲಾಗಿದೆ. ಭಾರತದಲ್ಲಿ ಇದರ ಬಿಡುಗಡೆ ಕುರಿತು ಕಂಪನಿಯು ಮಾಹಿತಿ ನೀಡಿದರೂ, ನಿಖರವಾದ ಬಿಡುಗಡೆ ದಿನಾಂಕವನ್ನು ಇನ್ನೂ ಪ್ರಕಟಿಸಲಾಗಿಲ್ಲ. ಆದರೆ, ಶಿಘ್ರದಲ್ಲೇ ಭಾರತದ ಮಾರುಕಟ್ಟೆಗೆ ಬರುವುದು ಬಹುತೇಕ ಖಚಿತವಾಗಿದೆ.

Best Mobiles in India

English summary
Infinix GT 30 Pro 5G features a 6.78-inch 1.5K AMOLED display, offering a refresh rate of up to 144Hz. It boasts an instant touch sampling rate of 2,160Hz, a PWM dimming rate of 2,304Hz, and can reach a peak brightness of up to 1,100 nits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+